Wednesday, November 25, 2026
Wednesday, November 25, 2026

ಪಂಪ್ ಸೆಟ್ ಮೋಟಾರ್ ಕಳ್ಳನಿಗೆ ಬಲೆ ಬೀಸಿ ಸೆರೆ ಹಿಡಿದ ಭದ್ರಾವತಿ ಪೊಲೀಸ್

Date:

ಭದ್ರಾವತಿಯ ರಬ್ಬರ್ ಕಾಡು ಗ್ರಾಮದಲ್ಲಿ ನಡೆದಿದ್ದ ಪಂಪ್‌ಸೆಟ್ ಮೋಟಾರ್ ಕಳ್ಳತನ ಪ್ರಕರಣವನ್ನು ಪೇಪರ್ ಟೌನ್ ಪೊಲೀಸರು ಭೇದಿಸಿದ್ದಾರೆ. ಕಳುವಾಗಿದ್ದ ಎರಡು ಪಂಪ್‌ಸೆಟ್ ಮೋಟಾರ್‌ಗಳನ್ನು ಪತ್ತೆಹಚ್ಚಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರ (40) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 30 ಸಾವಿರ ರೂ. ಮೌಲ್ಯದ ಎರಡು ಪಂಪ್‌ಸೆಟ್ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು, ಪಿಐ ಶರಣಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕುಮಾರ್ ಎನ್. ಹಾಗೂ ಸಿಎಚ್‌ಸಿ ನಾಗರಾಜ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club ರಿವರ್ ಸೈಡ್ ರೋಟರಿ ಕ್ಲಬ್ ಗೆ ವಲಯಮಟ್ಟದ ಚಾಂಪಿಯನ್ ಶಿಪ್

Rotary Club ಕ್ರೀಡಾ ಸಂಭ್ರಮ–26 ಕ್ರೀಡಾಕೂಟದಲ್ಲಿ ರೋಟರಿ ಕ್ಲಬ್ ರಿವರ್‌ ಸೈಡ್...

Madhu Bangarappa ಯಾವುದೇ ಕಾರಣಕ್ಕೂ ಕ್ಲಷ್ಟರ್ ಕಿಚನ್ ಕೇಂದ್ರ ಸ್ಥಾಪಿಸುವುದಿಲ್ಲ- ಮಧು ಬಂಗಾರಪ್ಪ

Madhu Bangarappa ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್‌ನ ಗೌರವಾಧ್ಯಕ್ಷ ಎಸ್....

Klive Special Article ಕುಮಾರ ವ್ಯಾಸ ..ನಾನು ಕಂಡಂತೆ ಲೇ: ಪ್ರಸಾದ್ ಶ್ರೀವತ್ಸ, ದಾವಣಗೆರೆ

“ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿವುದು! ಮೈಯಲಿಮಿಂಚಿನ ಹೊಳೆ ತುಳುಕಾಡುವುದು!“ ಕುಮಾರವ್ಯಾಸನ...