ಭದ್ರಾವತಿಯ ರಬ್ಬರ್ ಕಾಡು ಗ್ರಾಮದಲ್ಲಿ ನಡೆದಿದ್ದ ಪಂಪ್ಸೆಟ್ ಮೋಟಾರ್ ಕಳ್ಳತನ ಪ್ರಕರಣವನ್ನು ಪೇಪರ್ ಟೌನ್ ಪೊಲೀಸರು ಭೇದಿಸಿದ್ದಾರೆ. ಕಳುವಾಗಿದ್ದ ಎರಡು ಪಂಪ್ಸೆಟ್ ಮೋಟಾರ್ಗಳನ್ನು ಪತ್ತೆಹಚ್ಚಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರ (40) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 30 ಸಾವಿರ ರೂ. ಮೌಲ್ಯದ ಎರಡು ಪಂಪ್ಸೆಟ್ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು, ಪಿಐ ಶರಣಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಕುಮಾರ್ ಎನ್. ಹಾಗೂ ಸಿಎಚ್ಸಿ ನಾಗರಾಜ್ ಭಾಗವಹಿಸಿದ್ದರು.
ಪಂಪ್ ಸೆಟ್ ಮೋಟಾರ್ ಕಳ್ಳನಿಗೆ ಬಲೆ ಬೀಸಿ ಸೆರೆ ಹಿಡಿದ ಭದ್ರಾವತಿ ಪೊಲೀಸ್
Date:
