Klive Special Article ಹೆಮ್ಮೆ ಪಡುವ ಸಾಧನೆ ಮಣ್ಣುಪಾಲಾದ ಸುದ್ದಿ. ನಮ್ಮ ಆಡಳಿತ ಮತ್ತು ಸೋಕಾಲ್ಡ್ ರಾಜಕೀಯ ಪಕ್ಷಗಳು ಮತ್ತು ನಾಯಕರು ವಿಮಾನ ಯಾನ ರದ್ದಾಗುವವರೆಗೂ ಬಿಟ್ಟಿದ್ದು ದೊಡ್ಡ ತಪ್ಪು.
ಎಲ್ಲ ಸಮರ್ಥರಿದ್ದೂ ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ದ ನಡುವೆ
ಸಮನ್ನಯತೆ ಇಲ್ಲದೇ ಹೋಗಿರುವುದು ಸ್ಪಷ್ಟವಾಗಿದೆ.
ನಾಗರಿಕ ಸೌಲಭ್ಯಗಳ ಬಗ್ಗೆ ಅಲ್ಪಕಾಲದಲ್ಲೇ ಇಂತಹ ದುರ್ಗತಿ ಒದಗಿ ಬಂದರೆ ಪ್ರಜೆಗಳು ಏನು ಹೇಳೋಣ. ?
ರಸ್ತೆ ,ಸೇತುವೆ, ನೆಟ್ ವರ್ಕ್, ಸೋಲರ್ ಶಕ್ತಿ, ಕುಡಿಯುವ ನೀರು, ಪಡಿತರ, ಸಾರಿಗೆ ಸಂಪರ್ಕ ಇತ್ಯಾದಿಗಳಿಗೆ ಕುಂದಾಗದೇ ಸರ್ವ ಋತು ವ್ಯವಸ್ಥೆ ಬಗ್ಗೆ ಮುಂಚೆಯೆ ಸಿದ್ಧತೆ ಇಲ್ಲದಿರುವುದರ ಕೊರತೆ ಢಾಳಾಗಿ ಕಾಣುತ್ತಿದೆ.
ಇಂತಹ ಸ್ಥಿತಿಗೆ ವಿಮಾನ ಸಂಪರ್ಕ
ರದ್ದು ತಲುಪಿರುವ ಹಂತ ನಮ್ಮ
ಎಲ್ಲ ಜನಪ್ರತಿನಿಧಿಗಳ ಕ್ರಿಯಾಶೀಲತೆಯ ಲೋಪ ಎನ್ನಬಹುದೆ? ಅಥವಾ ಪಕ್ಷ ರಾಜಕಾರಣ ತಿಕ್ಕಾಟವೆ?
ಮತ್ತೆ ಚುನಾವಣಾ ಗಾಳಿ ಬೀಸುವಾಗ ಇದೇ ಅಸ್ತ್ರವಾಗಲಿ ಎಂಬ ಜಾಣ ಯೋಚನೆಯೆ? ಅರ್ಥವಾಗದು
ಸೇತುವೆ ಶಿಥಿಲವಾದಾಗ ಕಾಮಗಾರಿ ಮೂಲಕ ರಿಪೇರಿ ಮುಗಿಸಬೇಕು. ಆದರೆ ಸೇತುವೆ ಬೀಳುತನಕವೂ , ಜನ ಸಾವನ್ನಪ್ಪುವ ತನಕವೂ ಮೌನ ತಾಳಿ ಇದ್ದಕ್ಕಿದ್ದಂತೆ ” ನಾನೇ ಮೊದಲು ” ಎಂಬ ಟೀವಿ
ಟಿಆರ್ ಪಿ ವ್ಯಸನಕ್ಕೆ ತುತ್ತಾಗುವ ಚಿಂತನೆ ಯಾರಲ್ಲಾದರೂ ಇದೆಯೆ?
ಇದು ಸಾಧುವಲ್ಲ.
Klive Special Article ಆಯಾ ಸಮಯಕ್ಕೆ ಆಯಾ ಕೊರತೆಗಳ ಬಗ್ಗೆ ಪರ್ಯಾಲೋಚಿಸಿ ಸೂಕ್ತ ,ಬದಲಿ ವ್ಯವಸ್ಥೆ ಮಾಡಬೇಕಾದದ್ದು ಸರ್ಕಾರದ ಅಧಿಕಾರಿಗಳುಮತ್ತು ಜನಪ್ರತಿನಿಧಿಗಳ ಆದ್ಯತೆಯಾಗಬೇಕು.
ಇಲ್ಲಿ ಈ ಎರಡೂ ಶೂನ್ಯ ಕಾಣುತ್ತಿದೆ…
ಶಿವಮೊಗ್ಗ – ಬೆಂಗಳೂರು ವಿಮಾನಯಾನ ಕನಸಾಗಿಬಿಟ್ಟಿದೆ.
ಈಗ ಹೈದರಾಬಾದ್,ತಿರುಪತಿ/ಯಾನ ಮೂರುನಾಮ !
ಮುಂದೇನು ಶಿವನೆ?
