ಸಾರ್ವಜನಿಕರಲ್ಲಿ ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಮೂಲಭೂತವಾದ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ” ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ. ಎಸ್. ತಿಳಿಸಿದರು.
ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದ ಆವರಣದಿಂದ ಸೋಮವಾರದಂದು ಬೃಹತ್ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ಕಾನೂನು ಸೇವೆಗಳ ಪ್ರಾಧಿಕಾರದ ಅಧಿನಿಯಮ, 1987 ರ ಧ್ಯೇಯ ವಾಕ್ಯವು ‘ನ್ಯಾಯ ನಿಮ್ಮದು ನೆರವು ನಮ್ಮದು’ ಹಾಗೂ ‘ಮನೆಮನೆಗೂ ನ್ಯಾಯ’ ಎಂಬುದಾಗಿದೆ.
ಅಲ್ಲದೆ, ಉಚಿತ ಕಾನೂನು ಸಲಹೆ ಮತ್ತು ನೆರವಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ: 15100 ಅನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ವಿಶೇಷ ಹಾಗೂ ರಾಷ್ಟ್ರೀಯ ಲೋಕ್ ಅದಾಲತ್ ದಿನಾಂಕಗಳು:
ನವೆಂಬರ್ 21, 2026: ಚೆಕ್ ಅಮಾನ್ಯ ಪ್ರಕರಣಗಳಿಗಾಗಿ ವಿಶೇಷ ಲೋಕ್ ಅದಾಲತ್.
ಡಿಸೆಂಬರ್ 12, 2026: ಎಲ್ಲಾ ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.
ಸಂಚಾರಿ ಇ-ಚಲನ್ ದಂಡಕ್ಕೆ 50% ರಿಯಾಯಿತಿ:
ದಿನಾಂಕ 21/11/2026 ರಿಂದ 11/12/2026 ರವರೆಗೆ ಸಂಚಾರಿ ಇ-ಚಲನ್ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಸರ್ಕಾರವು 50% ರಿಯಾಯಿತಿ ಘೋಷಿಸಿದ್ದು, ವಾಹನ ಮಾಲೀಕರು ಈ ಅವಕಾಶವನ್ನು ಬಳಸಿಕೊಂಡು ಬಾಕಿ ದಂಡ ಪಾವತಿಸಬೇಕೆಂದು ಅವರು ಮನವಿ ಮಾಡಿದರು..
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ. ಆರ್. ರಾಘವೇಂದ್ರ ಸ್ವಾಮಿ ಮಾತನಾಡಿ, “ಪಕ್ಷಗಾರರು ಲೋಕ್ ಅದಾಲತ್ ಹಾಗೂ ಮಧ್ಯಸ್ಥಿಕೆಯಂತಹ ವೇದಿಕೆಗಳನ್ನು ಬಳಸಿಕೊಂಡು ಅತ್ಯಲ್ಪ ಅವಧಿಯಲ್ಲಿ ಕಾನೂನಾತ್ಮಕ ಮತ್ತು ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿವಮೊಗ್ಗ ಮಹಾನಗರ ಪಾಲಿಕೆ, ಸೈಕಲ್ ಕ್ಲಬ್, ಯೂಥ್ ಹಾಸ್ಟೆಲ್ ಅಸೋಸಿಯೇಷನ್, ವಿವಿಧ ರೋಟರಿ ಹಾಗೂ ಜೆ ಸಿ ಐ ಸಂಸ್ಥೆಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಜಾಥಾ ಜರುಗಿತು.
ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ಮಕ್ಕಳಾದ ಸುಮುಖ ಎಂ. ಎಸ್., ಶ್ರೇಯಸ್, ವಿಹಾನ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಸೈಕಲ್ ಜಾಥಾದ ಮುಂಚೂಣಿಯಲ್ಲಿ ಸಾಗಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದರು.
ಜಾಥಾ ಮಾರ್ಗ: ನ್ಯಾಯಾಲಯದಿಂದ ಪ್ರಾರಂಭಗೊಂಡು ಮಹಾವೀರ ಸರ್ಕಲ್ ನಿಂದ ಟಿ. ಸೀನಪ್ಪ ಶೆಟ್ಟಿ ವೃತದ ಮಾರ್ಗವಾಗಿ ಅಮೀರ್ ಅಹಮದ್ ವೃತದಿಂದ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಸರ್ಕಿಟ್ ಹೌಸ್ ಸಿಗ್ನಲ್ ಮೂಲಕ ಜೈಲ್ ವೃತದಿಂದ ನೆಹರು ಕ್ರೀಡಾಂಗಣ ಮುಂದಿರುವ ರಸ್ತೆಯ ಮಾರ್ಗವಾಗಿ ಮರಳಿ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ನವ್ಯಶ್ರೀ ನಾಗೇಶ್, ಶ್ರೀ ವಿಜಯ್ ಕುಮಾರ್, ಮನೋಹರ, ವೀರಣ್ಣ ಹುಗ್ಗಿ, ಜೆಸಿಐ ಸದಸ್ಯರು, ಪ್ರಾಧಿಕಾರದ ಮುಖ್ಯ ಎಲ್.ಎ.ಡಿ.ಸಿ. ಹೆಚ್. ಬಿ. ದೇವೇಂದ್ರಪ್ಪ, ಪ್ಯಾನೆಲ್ ವಕೀಲರಾದ ಜಿ. ಜಗದೀಶ್, ಪಿ.ಎಲ್.ವಿ. ಪ್ರಜ್ವಲ್ ಗೌಡ ಹಾಗೂ ಪೊಲೀಸ್ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕಾನೂನು ಸೇವೆಗಳ ದಿನಾಚರಣೆ: ಶಿವಮೊಗ್ಗದಲ್ಲಿ ಯಶಸ್ವಿ ಸೈಕಲ್ ಜಾಥಾ – ಉಚಿತ ಕಾನೂನು ನೆರವು ಹಾಗೂ ಲೋಕ್ ಅದಾಲತ್ ಸದುಪಯೋಗಕ್ಕೆ ಕರೆ
Date:
