ಶಿವಮೊಗ್ಗ, ನ,09(ಕರ್ನಾಟಕ ವಾರ್ತೆ): ನಗರದ ವಿದ್ಯಾನಗರ ಮುಖ್ಯರಸ್ತೆಯ ಟಿವಿ ಟವರ್ ಎದುರು ಅಕ್ಟೋಬರ್ 21 ರಂದು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಸುಮಾರು 60 ರಿಂದ 65 ವರ್ಷದ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಕ್ಟೋಬರ್ 31ರಂದು ಮೃತಪಟ್ಟಿದ್ದಾರೆ.
ಮೃತ ಮಹಿಳೆಯು ದುಂಡು ಮುಖ, ಗೋಧಿ ಮೈಬಣ್ಣ ಹಾಗೂ ದೃಢಕಾಯ ಹೊಂದಿರುತ್ತಾರೆ. ತಲೆಯಲ್ಲಿ 8 ಇಂಚು ಕಪ್ಪು ಬಿಳಿ, ಕೆಂಚ ಕೂದಲು ಹೊಂದಿದ್ದು ಬಿಳಿ ಮತ್ತು ಸಿಮೆಂಟ್ ಬಣ್ಣದ ಮಿಶ್ರಿತ ನೈಟಿ ಧರಿಸಿದ್ದಾರೆ.
ಈ ಮಹಿಳೆಯ ವಾರಸುದಾರರು ಅಥವಾ ಸಂಬಂಧಿಕರು ಕಂಡುಬಂದಲ್ಲಿ ತಕ್ಷಣ ಕೋಟೆ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆಗಳು:08182-261400,08182-261404, 08182-261415, 9480803331 ನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.
ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಪೋಲಿಸ್ ಮನವಿ
Date:
