ಹೊಸನಗರ ತಾಲ್ಲೂಕು ಕಂಕಳಲೆ, ಬ್ರಹ್ಮೇಶ್ವರ, ಪುಣಜೆ ಗ್ರಾಮದ ವಾಸಿ ಶಿವಪ್ಪ ಎಂಬ 65 ವರ್ಷದ ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ದಿ:25/06/2026 ರಂದು ಬೆಳಿಗ್ಗೆ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಸ್ ಬಂದಿರುವುದಿಲ್ಲ.
ಕಾಣೆಯಾದ ವ್ಯಕ್ತಿಯು 05 ಅಡಿ ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್, ನೀಲಿ ಚಕ್ಸ್ ಪಂಚೆ ಧರಿಸಿರುತ್ತಾರೆ.
ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ದೂ. ಸಂ. 08182-261400, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ, ದೂ. ಸಂ. 08181-220388, ವೃತ್ತ ನಿರೀಕ್ಷಕರು, ಹೊಸನಗರ ವೃತ್ತ, ದೂರವಾಣಿ ಸಂಖ್ಯೆ 9480803337 ಅಥವಾ ಪಿಎಸ್‌ಐ, ಹೊಸನಗರ ಪೊಲೀಸ್ ಠಾಣೆ, ದೂ. ಸಂ. 9480803364 ರವರಿಗೆ ಮಾಹಿತಿ ನೀಡಲು ಕೋರಿದೆ.
ಹೊಸನಗರದಲ್ಲಿ 65 ವರ್ಷದ ಶಿವಪ್ಪ ನಾಪತ್ತೆ: ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು
Date:
