Friday, November 6, 2026
Friday, November 6, 2026

ಧನ್ವಂತರಿ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಆರೋಗ್ಯ ಮತ್ತು ನೆಮ್ಮದಿ: ಡಾ. ಕೆ.ಜಿ. ಪಲ್ಲವಿ

Date:

ಶಿವಮೊಗ್ಗ ನಗರದ ಗೋಪಾಳದಲ್ಲಿರುವ ಫ್ರೆಂಡ್ಸ್ ಸೆಂಟರ್‌ನಲ್ಲಿ ಇಂದು ಆರೋಗ್ಯ ಭಾರತಿಯ ವತಿಯಿಂದ ಧನ್ವಂತರಿ ಜಯಂತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಭಾರತಿಯ ಅಧ್ಯಕ್ಷರಾದ ಡಾ. ಕೆ.ಜಿ. ಪಲ್ಲವಿ ಅವರು, ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಮತ್ತು ಮನಃಶಾಂತಿ ಹೊಂದಿದಾಗ ಮಾತ್ರ ಸಂಪೂರ್ಣ ಆರೋಗ್ಯ ಸಾಧ್ಯ. ಧನ್ವಂತರಿ ಆರಾಧನೆ ಹಾಗೂ ಆಯುರ್ವೇದದ ಜೀವನ ಮೌಲ್ಯಗಳು ಮನುಷ್ಯನಿಗೆ ಆರೋಗ್ಯಪೂರ್ಣ ಜೀವನ ನಡೆಸುವ ಪ್ರೇರಣೆ ನೀಡುತ್ತವೆ ಎಂದರು.

ಭಗವಾನ್ ಧನ್ವಂತರಿಯನ್ನು ಆಯುರ್ವೇದದ ಅಧಿದೇವತೆ ಹಾಗೂ ದೇವತೆಗಳ ದೈವಿಕ ವೈದ್ಯರೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕ್ಷೀರಸಾಗರ ಮಥನದ ಸಂದರ್ಭದಲ್ಲಿ ಅಮೃತ ಕಲಶದೊಂದಿಗೆ ಧನ್ವಂತರಿ ದೇವರು ಉದ್ಭವಿಸಿದರೆಂಬ ಪೌರಾಣಿಕ ನಂಬಿಕೆಯಿದೆ. ಆಯುರ್ವೇದದ ಮೂಲ ಬೇರು ಧನ್ವಂತರಿ ಪರಂಪರೆಯಲ್ಲಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ಪದ್ಧತಿಯಲ್ಲ; ರೋಗ ಬಾರದಂತೆ ತಡೆಗಟ್ಟುವುದು, ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವುದು ಹಾಗೂ ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವುದನ್ನು ಕಲಿಸುವ ಸಮಗ್ರ ಜೀವನ ಪದ್ಧತಿಯಾಗಿದೆ ಎಂದು ತಿಳಿಸಿದರು.

ಧನ್ವಂತರಿ ಜಯಂತಿಯ ಆಚರಣೆ ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಸಂಕಲ್ಪವಾಗಬೇಕು. ಧನ್ವಂತರಿ ದೇವರ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಜೀವನದಲ್ಲಿ ನೆಮ್ಮದಿ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಆಯುರ್ವೇದದ ತತ್ವಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಪ್ರತಿಯೊಬ್ಬರೂ ಆರೋಗ್ಯದ ಮಹತ್ವವನ್ನು ಅರಿತು, ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನವನ್ನು ಗೌರವಿಸಿ, ಪ್ರಕೃತಿಸ್ನೇಹಿ ಜೀವನಶೈಲಿಯನ್ನು ಅನುಸರಿಸಬೇಕು. ಧನ್ವಂತರಿ ದೇವರ ಆಶೀರ್ವಾದದಿಂದ ಸರ್ವರಿಗೂ ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ಹಾರೈಸಿದರು.

ಈ ವೇಳೆ ವಿಭಾಗ ಸಂಯೋಜಕ ಎನ್. ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ರಾಘವೇಂದ್ರ, ದೇವೇಂದ್ರಪ್ಪ, ಶಶಿ, ಫ್ರೆಂಡ್ಸ್ ಸೆಂಟರ್ ನ ಅಧ್ಯಕ್ಷ ಮಲ್ಲಿಕಾರ್ಜುನ್ ಕಾನೂರು, ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ. ವಿಜಯ್ ಕುಮಾರ್, ನಾಗರಾಜು, ರಮೇಶ್, ಸುನೀತಾ, ಮನೋಹರ್, ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಬೆಳೆ ವಿಮಾ ಕಂಪನಿಗಳು ರೈತರಿಗೆ ಘೋಷಿಸಿದ ವಿಮಾ ಪರಿಹಾರ ಮೊತ್ತ ನೀಡಿ- ಬಿ.ವೈ.ರಾಘವೇಂದ್ರ

B. Y. Raghavendra ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಗಾರು...

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...