Thursday, November 5, 2026
Thursday, November 5, 2026

ಬಂಜಾರ ಸಮುದಾಯದ ಪ್ರತಿಭಾನ್ವೇಷಣೆ- ಕಲಾ ಮಳಾವ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

Date:

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಬಂಜಾರ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ, ಬೆಳೆಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಮತ್ತು ಬಂಜಾರ ಕಲಾವಿದರ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಕಲಾ ಪ್ರತಿಭಾನ್ವೇಷಣೆ- ಕಲಾ ಮಳಾವ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಕಲಾ ಪ್ರಾಕಾರ: ವಾಜಾ ವಾದ್ಯ ಸಮೂಹ ಗೀತೆ, ಬಂಜಾರ ಮಹಿಳೆಯರ ಸಾಂಪ್ರದಾಯಿಕ ಗಾಯನ ಮತ್ತು ನೃತ್ಯ, ಬಂಜಾರರ ಜಾನಪದ ನೃತ್ಯ, ಬಂಜಾರ ಯುವತಿಯರ ಘೂಮರ್ ನೃತ್ಯ, ಪುರುಷರ ಲೇಂಗಿ ನೃತ್ಯ, ನಂಗಾರ ಠೋಳಿ ಬಿಡಿಸುವ ನೃತ್ಯ, ಬಂಜಾರ ಕಥನ ಗಾಯನ (ಸಣ್ಣ ವಾಜಾ), ಬಂಜಾರ ಮಹಿಳೆಯರ ಸಾಂಪ್ರದಾಯಿಕ ಗಾಯನ (ವಳಂಗ, ಮೆಹಂದಿ, ಡೋರಣ್ ಮತ್ತು ಆರತಿ ಗೀತೆ), ಬಂಜಾರರ ಸುಗಮ ಸಂಗೀತ (ಭಕ್ತಿಗೀತೆ, ಭಾವಗೀತೆ ಮತ್ತು ಜಾನಪದ ಗೀತೆ), ಬಂಜಾರ ಬಾಲಕರ ಕಲಾ ನೃತ್ಯ (ಲೇಂಗಿ, ಕಥನಾ ಗಾಯನ ಇತ್ಯಾದಿ), ಬಂಜಾರ ಬಾಲಕಿಯರ ಕಲಾ ನೃತ್ಯ, ಬಂಜಾರ ಢಾವಲೋ ಮತ್ತು ಹವೇಲಿ (ಮದುವೆ ಶಾಸ್ತ್ರಾ), ಬಂಜಾರರ ಪುರುಷರ ಸಾಂಪ್ರದಾಯಿಕ ಕಡಿ (ಕಸಳಾತೆ, ಮರಣ ಸಿಕವಾಡಿ, ಗೋಳ್ ಖಾಯರ್ ಕಡಿ, ಪಾನೇರ್, ಭಾಂಗ್, ಖ್ಯೇಮ್).
ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ವಲಯ ಕಚೇರಿ, ಬಂಜಾರ ಭವನ, ನವುಲೆ, ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನ. 20 ರೊಳಗಾಗಿ ಸಲ್ಲಿಸುವಂತೆ ನಿಗಮದ ಅಭಿವೃದ್ಧಿ ಅದಿಕಾರಿಗಳು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...