ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಬಂಜಾರ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಆಸಕ್ತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಸ್ವಯಂ ಉದ್ಯೋಗ ನೇರಸಾಲ-ರೂ.1 ಲಕ್ಷ, ಕುರಿ ಸಾಕಾಣಿಕೆ ಯೋಜನೆ- ರೂ.1 ಲಕ್ಷ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ- ರೂ.2 ಲಕ್ಷ, ಸ್ವಾವಲಂಭಿ ಸಾರಥಿ- ರೂ.4 ಲಕ್ಷ, ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್- ರೂ.4 ಲಕ್ಷ, ಹೈನುಗಾರಿಕೆ- ರೂ.1.25 ಲಕ್ಷ, ಗಂಗಾ ಕಲ್ಯಾಣ ಯೋಜನೆ- ರೂ.3.75 ಲಕ್ಷ, ಭೂ ಒಡೆತನ ಯೋಜನೆ- ರೂ.20 ಲಕ್ಷ, ಮೈಕ್ರೋಕ್ರೆಡಿಟ್ ಯೋಜನೆ- ರೂ.5 ಲಕ್ಷ ಸೌಲಭ್ಯ ನೀಡಲಾಗುವುದು.
ಆಸಕ್ತ ಬಂಜಾರ ಸಮುದಾಯದವರು ಸ್ಥಳೀಯ ಗ್ರಾಮ ಒನ್, ಶಿವಮೊಗ್ಗ ಒನ್ ಹಾಗೂ ಕರ್ನಾಟಕ ಒನ್ ಪೋರ್ಟಲ್ಗಳಲ್ಲಿ ನ. 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಅಭಿವೃದ್ಧಿ ಅಧಿಕಾರಿಗಳು ತಿಳಿಸಿರುತ್ತಾರೆ.
ಬಂಜಾರ ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಆನ್ಲೈನ್ ಅರ್ಜಿ ಆಹ್ವಾನ
Date:
