Thursday, November 5, 2026
Thursday, November 5, 2026

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂಟರ್ಯಾಕ್ಟ್ ಕ್ಲಬ್‌ಗಳು ಸಹಕಾರಿ: ಕೆ.ಎಂ. ಸಂದೇಶ್ ಕುಮಾರ್

Date:

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಇಂಟರ್ ಆಕ್ಟ್ ಕ್ಲಬ್‌ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕೋಣಂದೂರು ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಂ. ಸಂದೇಶ್ ಕುಮಾರ್ ಅಭಿಪ್ರಾಯಪಟ್ಟರು.

ಕೋಣಂದೂರು ರೋಟರಿ ಸಂಸ್ಥೆಯ ಅಂಗಸಂಸ್ಥೆಯಾಗಿ ಮೂರು ಶಾಲೆಗಳಲ್ಲಿ ನೂತನವಾಗಿ ಆರಂಭಿಸಲಾದ ಇಂಟರ್ಯಾಕ್ಟ್ ಕ್ಲಬ್‌ಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೊದಲಿಗೆ ಕೆಪಿಎಸ್ ಶಾಲೆಯಲ್ಲಿ ಶಾಲೆಯ ಇಂಟರ್ಯಾಕ್ಟ್ ಕ್ಲಬ್ ಸಂಯೋಜಕಿ ಸೌಮ್ಯ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷರಾಗಿ ಪ್ರತಮ್ ಜೆ. ಹಾಗೂ ಕಾರ್ಯದರ್ಶಿಯಾಗಿ ಕೀರ್ತನ ಎಸ್. ಅಧಿಕಾರ ಸ್ವೀಕರಿಸಿದರು.

ಕೋಣಂದೂರಿನ ನ್ಯಾಷನಲ್ ಹೈಸ್ಕೂಲ್‌ನಲ್ಲಿ ಇಂಟರ್ಯಾಕ್ಟ್ ಕ್ಲಬ್ ಸಂಯೋಜಕ ಪ್ರಕಾಶ್ ಕೆ.ಬಿ. ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷರಾಗಿ ಆನ್ವಿ ಕೆ.ಜಿ. ಹಾಗೂ ಕಾರ್ಯದರ್ಶಿಯಾಗಿ ಅನನ್ಯ ಅಧಿಕಾರ ವಹಿಸಿಕೊಂಡರು.

ನೊಣಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ಮಂಜುಳಾ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷರಾಗಿ ಪಂಚಮಿ ಹಾಗೂ ಕಾರ್ಯದರ್ಶಿಯಾಗಿ ದಕ್ಷಿತ ಅಧಿಕಾರ ಸ್ವೀಕರಿಸಿದರು.

ಮೂರು ಇಂಟರ್ಯಾಕ್ಟ್ ಕ್ಲಬ್‌ಗಳ ಸಂಪೂರ್ಣ ಜವಾಬ್ದಾರಿಯನ್ನು ಕೋಣಂದೂರು ರೋಟರಿ ಕ್ಲಬ್‌ನ ಇಂಟರ್ಯಾಕ್ಟ್ ಕ್ಲಬ್ ಸಂಯೋಜಕರಾದ ಡಿ.ಆರ್. ಗಿರೀಶ್, ಪುಟ್ಟಪ್ಪ ಎಂ.ಟಿ. ಹಾಗೂ ಬಿ.ಟಿ. ಈಶ್ವರಪ್ಪ ವಹಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಂ. ಸಂದೇಶ್ ಕುಮಾರ್ ವಹಿಸಿದ್ದರು. ಚೇರ್ಮನ್ ಸದಾಶಿವ ಕೆ.ಆರ್., ದಿವಾಕರ್, ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಜೆಡಿಎಲ್ ವಿಷ್ಣುಮೂರ್ತಿ ಎಸ್.ಎಂ., ಮೂರು ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರುಗಳು, ಶಿಕ್ಷಕರು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿಯನ್ನು ಬೆಳೆಸುವ ಉದ್ದೇಶದಿಂದ ಮೂರು ಶಾಲೆಗಳಲ್ಲಿ ಇಂಟರ್ಯಾಕ್ಟ್ ಕ್ಲಬ್‌ಗಳನ್ನು ಆರಂಭಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಶಾಲಾ ಮುಖ್ಯಸ್ಥರು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಇಂಟರ್ಯಾಕ್ಟ್ ಕ್ಲಬ್ ಸಂಯೋಜಕರು ಹಾಗೂ ರೋಟರಿ ಸದಸ್ಯರಿಗೆ ಅಧ್ಯಕ್ಷ ಕೆ.ಎಂ. ಸಂದೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...