ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ ಆರ್ಟಿಐ ಅರ್ಜಿಗಳಿಗೂ ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಿ, ಅವುಗಳನ್ನು ಸಕಾಲ ಸೇವೆಯ ವ್ಯಾಪ್ತಿಗೆ ತರಲಾಗಿದೆ.
ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲೂ ಆರ್ಟಿಐ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವೆಯಲ್ಲಿ ಲೋಪದೋಷ ಉಂಟಾದರೆ ಅಥವಾ ಸಕಾರಣವಿಲ್ಲದೆ ಅರ್ಜಿ ತಿರಸ್ಕರಿಸಿದರೆ ಅರ್ಜಿದಾರರಿಗೆ ₹1,500 ಪರಿಹಾರ ನೀಡುವ ವ್ಯವಸ್ಥೆಯೂ ಜಾರಿಯಾಗಲಿದೆ.
