Wednesday, October 21, 2026
Wednesday, October 21, 2026

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

Date:

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ ನೀಡುವ ಮೂಲಕ ಭಾರತೀಯ ಆಧ್ಯಾತ್ಮಿಕ ಹಾಗೂ ತತ್ವಚಿಂತನೆಯ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿಆಯೋಜಿಸಲಾಗಿದ್ದ ‘ಜಗದ್ಗುರು ಶ್ರೀ ಮಧ್ವಾಚಾರ್ಯ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಧ್ವಾಚಾರ್ಯರು ತಮ್ಮ ತತ್ವಸಿದ್ಧಾಂತ ಹಾಗೂ ಚಿಂತನೆಗಳ ಮೂಲಕ ಸಮಾಜಕ್ಕೆ ನೈಜ ಮಾರ್ಗದರ್ಶನ ನೀಡಿದ್ದಾರೆ. ಭಗವಂತನ ಮೇಲಿನ ಭಕ್ತಿ ಮತ್ತು ಜ್ಞಾನದ ಮಹತ್ವವನ್ನು ಸಾರಿದ ಅವರು, ವ್ಯಕ್ತಿಯ ಚಿಂತನೆ, ನಡೆ-ನುಡಿ ಹಾಗೂ ಜೀವನ ಮೌಲ್ಯಗಳು ಹೇಗಿರಬೇಕೆಂದು ತಿಳಿಸಿಕೊಟ್ಟಿದ್ದಾರೆ. ಅವರ ವಿಚಾರಗಳು ಇಂದಿಗೂ ಸಮಾಜಕ್ಕೆ ಆಧ್ಯಾತ್ಮಿಕ ಪ್ರೇರಣೆಯಾಗಿವೆ.
ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆ ಎಂಬ ಮೂರು ಪ್ರಮುಖ ಮೌಲ್ಯಗಳಿಗೆ ಆಚಾರ್ಯರು ಒತ್ತು ನೀಡಿದ್ದರು. ಅವರ ತತ್ವಗಳನ್ನು ಪುರಂದರದಾಸರು ಹಾಗೂ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಿದರು. ಇಂದಿನ ಯುವಜನರು ಮಧ್ವಾಚಾರ್ಯರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರೈಲ್ವೇ ಅಭಿವೃದ್ಧಿ ಸಂಕಲ್ಪ: ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪ ಹೊಂದಿದ್ದು, ಶಿವಮೊಗ್ಗದಿಂದ ತೀರ್ಥಹಳ್ಳಿ, ಶೃಂಗೇರಿ ಹಾಗೂ ಮಂಗಳೂರಿಗೆ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಪ್ರಸ್ತುತ ಕೋಟೆಗಂಗೂರು ರೈಲ್ವೆ ಡಿಪೋ ಕಾಮಗಾರಿಯೂ ಭರದಿಂದ ಸಾಗಿದೆ ಎಂದು ಇದೇ ವೇಳೆ ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದರಾದ ಡಿ.ಎಸ್.ಅರುಣ್ ಮಾತನಾಡಿ, “ಮಹನೀಯರ ಜಯಂತಿಗಳು ಕೇವಲ ಆಚರಣೆ ಅಥವಾ ರಜೆಗೆ ಸೀಮಿತವಾಗಬಾರದು. ಅವರ ಜೀವನ-ಸಾಧನೆ ಹಾಗೂ ತತ್ವಾದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಮಧ್ವಾಚಾರ್ಯರು ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದ ಅವರು ಇಂತಹ ಆಚರಣೆಗಳ ಮೂಲಕ ಮುಂದಿನ ಪೀಳಿಗೆಯಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, “ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಶಕ್ತಿ ಭಾರತಕ್ಕಿದೆ”. ಜಗದ್ಗುರುಗಳಾದ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರು ರಚಿಸಿರುವ ಸಂಸ್ಕೃತ ಗ್ರಂಥಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳು ನಮ್ಮ ದೇಶವನ್ನು ಸಾಂಸ್ಕೃತಿಕವಾಗಿ ಹಾಗೂ ವೈಚಾರಿಕವಾಗಿ ಸಂಪದ್ಭರಿತಗೊಳಿಸಿ, ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸಿವೆ ಎಂದು ಬಣ್ಣಿಸಿದರು.
ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್ ಮಾತನಾಡಿ, “ದ್ವೈತ ಸಿದ್ಧಾಂತದ ಮೂಲಕ ಮಾನವ ಕುಲಕ್ಕೆ ಒಳ್ಳೆಯ ದಾರಿ ತೋರಿದ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ತ್ರಿಮತಸ್ಥ ಸಮಾಜದ ಬಂಧುಗಳಿಗೆ ಜಿಲ್ಲಾಡಳಿತದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ,” ಎಂದರು.
B.Y. Raghavendra ವಿಶೇಷ ಉಪನ್ಯಾಸ:
ಶಿವಮೊಗ್ಗದ ವಕೀಲರಾದ ವಾಸುದೇವ ಮೂರ್ತಿ ಕುಷ್ಟಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಧ್ವಾಚಾರ್ಯರು 1232ನೇ ಇಸವಿಯಲ್ಲಿ ಜನಿಸಿದರು. ಇವರು ಸಮಾಜದಲ್ಲಿ ಜ್ಞಾನದ ಕೊರತೆ ಇದೆ ಎನ್ನುವ ಸಂದರ್ಭದಲ್ಲಿ ಅವತರಿಸಿದ ಜ್ಞಾನಿಗಳು. ಮಧ್ವಾಚಾರ್ಯರು ಸುಮಾರು 37ಕ್ಕೂ ಅಧಿಕ ಸಂಸ್ಕೃತ ಗ್ರಂಥಗಳನ್ನು ಬರೆದಿದ್ದಾರೆ. ಗುರುಗಳು ಕರ್ನಾಟಕದ ಉಡುಪಿಯ ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿದೇಶದಾದ್ಯಂತ ಸಂಚರಿಸಿ ಜ್ಞಾನ ಉಪದೇಶ ಮಾಡಿದ್ದಾರೆ.ಸಮಾಜದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ಮಧ್ವಾಚಾರ್ಯರು ಪ್ರತಿಪಾದಿಸಿದ ಮುಖ್ಯ ಸಿದ್ಧಾಂತವೇ ‘ದ್ವೈತ’ ಅಥವಾ ‘ತತ್ವವಾದ’. ಭಗವಂತನ ಅನುಗ್ರಹ ಪಡೆಯಲು ನಿಷ್ಕಾಮ ಭಕ್ತಿ ಮತ್ತು ಜ್ಞಾನವೇ ಏಕೈಕ ದಾರಿ. ಎಲ್ಲರಲ್ಲಿಯೂ ಇರುವ ಭಗವಂತ ಒಬ್ಬನೇ. ಆದ್ದರಿಂದ ಎಲ್ಲರಿಗೂ ಆಹಾರ, ಪದಾರ್ಥ, ಇತ್ಯಾದಿ ಕೊಟ್ಟರೆ ಗೌರವ ಸಿಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬ್ರಹ್ಮಸೂತ್ರ, ಉಪನಿಷತ್ತುಗಳು ಮತ್ತು ಭಗವದ್ಗೀತೆಗೆ ಅಪೂರ್ವವಾದ ಭಾಷ್ಯಗಳನ್ನು (ವ್ಯಾಖ್ಯಾನಗಳನ್ನು) ರಚಿಸಿ, ವೇದಗಳ ನಿಜವಾದ ಅರ್ಥವನ್ನು ಲೋಕಕ್ಕೆ ತಿಳಿಸಿಕೊಟ್ಟರು.ಮಧ್ವಾಚಾರ್ಯರ ನಂತರ ಬಂದ ದಾಸ ಪರಂಪರೆ ಇವರ ತತ್ವವಾದದಿಂದ ಪ್ರೇರಿತವಾಗಿ ಕನ್ನಡ ನಾಡಿನಲ್ಲಿ ಭಕ್ತಿ ಸಾಹಿತ್ಯದ ದೊಡ್ಡ ಕ್ರಾಂತಿಯನ್ನೇ ಮಾಡಿತು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯ ಮಹತ್ವ ಹಾಗೂ ಅವರ ವಿಚಾರಧಾರೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ನಗರದಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಮಾಜಿ ಉಪಮಹಾಪೌರರಾದ ಸುರೇಖ ಮುರುಳೀಧರ, ಬ್ರಾಹ್ಮಣ ಮಹಾಸಭಾದ ನಟರಾಜ್ ಕೆ.ಸಿ. ಮಾಲತೇಶ್, ತಾಲೂಕು ಬ್ರಾಹ್ಮಣ ಮಹಾಸಭಾದ ಸುರೇಶ್ ನಾಡಿಗ್ ಹಾಗೂ ತ್ರಿಮಸ್ಥ ಸಮಾಜದ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...