ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಒಬಿಸಿ ಕಾಂಗ್ರೆಸ್ ಮಹಿಳಾ ವಿಭಾಗದ ರಾಜ್ಯ ಸಂಚಾಲಕರನ್ನಾಗಿ ಕವಿತಾ ತೋರತ್ ಎಂ.ಬಿ. ಅವರನ್ನು ನೇಮಕ ಮಾಡಲಾಗಿದೆ.
ರಾಜಸ್ಥಾನದ ರಾಜ್ಯ ಸಂಚಾಲಕರನ್ನಾಗಿ ಸಾಮಾ ಬಾನೋ, ಸಹ ಸಂಚಾಲಕರನ್ನಾಗಿ ಉಮಾ ಕರಾಲ್, ಗುಜರಾತ್ನ ರಾಜ್ಯ ಸಂಚಾಲಕರನ್ನಾಗಿ ಹೇತಲ್ ಪಂಚಾಲ್, ಸಹ ಸಂಚಾಲಕರನ್ನಾಗಿ ಲಕ್ಷ್ಮೀಬೆನ್ ಕರೇನ್ ಚೌಧರಿ ಹಾಗೂ ಕರ್ನಾಟಕದ ರಾಜ್ಯ ಸಂಚಾಲಕರನ್ನಾಗಿ ಶಿವಮೊಗ್ಗದ ಕವಿತಾ ತೋರತ್ ಎಂ.ಬಿ., ಸಹ ಸಂಚಾಲಕರನ್ನಾಗಿ ಸುಧಾ ಇತ್ತಿಗುಡಿ ಮತ್ತು ಮಹಾರಾಷ್ಟ್ರದ ರಾಜ್ಯ ಸಂಚಾಲಕರನ್ನಾಗಿ ವಿಮಲ್ ಬಾಬು ಕಾತ್ರೆ, ಸಹ ಸಂಚಾಲಕರನ್ನಾಗಿ ಲಲಿತಾ ಭಗವಾನ್ ಕುಂಭಾರ್ ಅವರನ್ನು ನೇಮಕ ಮಾಡಲಾಗಿದೆ.
ನೇಮಕಗೊಂಡ ಎಲ್ಲ ಪದಾಧಿಕಾರಿಗಳು ಸಂಘಟನೆಯನ್ನು ಬಲಪಡಿಸಲು ಸಮರ್ಪಣೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಸಂಬಂಧಿತ ರಾಜ್ಯ ಘಟಕಗಳೊಂದಿಗೆ ಸಮನ್ವಯ ಸಾಧಿಸಬೇಕು. ಒಬಿಸಿ ಸಮುದಾಯಗಳನ್ನು ಸಜ್ಜುಗೊಳಿಸುವುದರ ಜೊತೆಗೆ, ಒಬಿಸಿ ಮಹಿಳೆಯರ ಕಲ್ಯಾಣ ಮತ್ತು ಹಕ್ಕುಗಳಿಗಾಗಿ ಸಕ್ರಿಯವಾಗಿ ಶ್ರಮಿಸಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಒಬಿಸಿ ವಿಭಾಗದ ಅಧ್ಯಕ್ಷ ಡಾ. ಅನಿಲ್ ಜೈಹಿಂದ್ ಆದೇಶದಲ್ಲಿ ಸೂಚಿಸಿದ್ದಾರೆ.
