Sunday, October 18, 2026
Sunday, October 18, 2026

2000ಕ್ಕೂ ಅಧಿಕ ಯೋಗಪಟುಗಳಿಂದ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಪ್ರದರ್ಶನ

Date:

ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದು. ರೋಗಗಳನ್ನು ದೂರವಿಟ್ಟು ಉತ್ತಮ ಆರೋಗ್ಯ ಹಾಗೂ ಸುಂದರ ಜೀವನಶೈಲಿಯನ್ನು ರೂಪಿಸಿಕೊಳ್ಳಲು ತಪ್ಪದೇ ಯೋಗಾಭ್ಯಾಸ ಮಾಡಬೇಕು ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಕರೆ ನೀಡಿದರು.

ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಯೋಗ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವು ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ್ದು, ಇಂದು ಯೋಗವು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಭಾರತವು ಜಗತ್ತಿಗೆ ಪರಿಚಯಿಸಿದ ಅಮೂಲ್ಯ ಕೊಡುಗೆಗಳಲ್ಲಿ ಯೋಗವೂ ಪ್ರಮುಖವಾದುದು. ಯೋಗವು ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡುವುದರ ಜೊತೆಗೆ ಉತ್ತಮ ಆರೋಗ್ಯ ಮತ್ತು ಶಿಸ್ತಿನ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ವರ್ಷ ಯೋಗ ಕಾರ್ಯಕ್ರಮವನ್ನು ಗಿನ್ನಿಸ್ ವಿಶ್ವ ದಾಖಲೆಗೆ ಸಿದ್ಧಪಡಿಸುವ ನಿಟ್ಟಿನಲ್ಲಿ ಪೂರ್ವಭಾವಿ ತಯಾರಿಗಳನ್ನು ಕೈಗೊಳ್ಳುವ ಆಶಯವನ್ನೂ ವ್ಯಕ್ತಪಡಿಸಿದರು.

ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯರು ಮಾತನಾಡಿ, ಯೋಗದ ಮಹತ್ವ, ಯೋಗಾಭ್ಯಾಸದಿಂದ ದೊರೆಯುವ ಪ್ರಯೋಜನಗಳು ಹಾಗೂ ಪ್ರಾಣಾಯಾಮ ಮತ್ತು ಧ್ಯಾನದ ಅಗತ್ಯದ ಕುರಿತು ಹಾಗೂ ನಿಯಮಿತ ಯೋಗಾಭ್ಯಾಸವು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇಂದಿನ ದಿನಗಳಲ್ಲಿ ಯೋಗಾಭ್ಯಾಸ ಅನಿವಾರ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿಧ ಯೋಗಕೇಂದ್ರಗಳ ಪ್ರಮುಖರಾದ ಸಿ.ವಿ. ರುದ್ರಾರಾಧ್ಯ, ಬಾ.ಸು. ಅರವಿಂದ್, ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್. ಶೆಟ್ಟರ್, ಗೋಪಾಲಕೃಷ್ಣ ಸೇರಿದಂತೆ ಇತರರು ಯೋಗದ ಮಹತ್ವ ಹಾಗೂ ಸಾಮೂಹಿಕ ಯೋಗಾಭ್ಯಾಸದ ಅಗತ್ಯದ ಕುರಿತು ಸಾಂದರ್ಭಿಕವಾಗಿ ಮಾತನಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪಾಲಿಕೆಯ ಅಧಿಕಾರಿ ಸುಧಾಕರ ಬಿಜ್ಜೂರ್ ಅವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ರೇಖಾ ರಂಗನಾಥ್, ರೋಟರಿ ಮಾಜಿ ಗವರ್ನರ್ ಜಿ. ವಿಜಯಕುಮಾರ್, ಹಿರಿಯ ಯೋಗ ಶಿಕ್ಷಕರಾದ ಬಾ.ಸು. ಅರವಿಂದ್ ಹಾಗೂ ಲೆಕ್ಕಾಧಿಕಾರಿ ಸುಧಾಕರ್ ಬಿಜ್ಜೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

2000ಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನವನ್ನು ಅಭ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ಯೋಗದ ಮಹತ್ವ, ಆರೋಗ್ಯಕರ ಜೀವನಶೈಲಿಯಲ್ಲಿ ಯೋಗದ ಪಾತ್ರ ಮತ್ತು ನಿತ್ಯ ಯೋಗಾಭ್ಯಾಸದ ಅಗತ್ಯದ ಕುರಿತು ಅರಿವು ಮೂಡಿಸಲಾಯಿತು.

ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಶಿಕ್ಷಕರು ಹಾಗೂ ನಗರದ ವಿವಿಧ ಯೋಗ ಕೇಂದ್ರಗಳ ಶಿಕ್ಷಕರು ಮತ್ತು ಯೋಗಪಟುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

2000ಕ್ಕೂ ಅಧಿಕ ಯೋಗಪಟುಗಳು ಒಂದೇ ವೇದಿಕೆಯಲ್ಲಿ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಯೋಗದ ಮಹತ್ವವನ್ನು ಸಾರಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಜನಸಾಮಾನ್ಯರಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಈ ಕಾರ್ಯಕ್ರಮ ಪ್ರೇರಣೆ ನೀಡಿತು.

ಸಾವಿರಾರು ಜನರನ್ನು ಒಂದೇ ವೇದಿಕೆಯಲ್ಲಿ ಯೋಗಾಭ್ಯಾಸಕ್ಕೆ ಒಗ್ಗೂಡಿಸಿದ ಈ ಮೆಗಾ ಯೋಗ ದಸರಾ, ಶಿವಮೊಗ್ಗದಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬೃಹತ್ ಪ್ರಮಾಣದ ಯೋಗ ಕಾರ್ಯಕ್ರಮ ಹಾಗೂ ವಿಶ್ವದಾಖಲೆಯ ಪ್ರಯತ್ನಕ್ಕೆ ಸ್ಫೂರ್ತಿದಾಯಕ ಮುನ್ನುಡಿಯಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...