‘ಶಿವಮೊಗ್ಗ ನಾಡಹಬ್ಬ ದಸರಾ–2026’ರ ಜಂಬೂಸವಾರಿ ಮೆರವಣಿಗೆಯ ಗಾಂಭೀರ್ಯ ಹೆಚ್ಚಿಸಲಿರುವ ಸಕ್ರೆಬೈಲು ಬಿಡಾರದ ಗಜಪಡೆ ಶಿವಮೊಗ್ಗ ನಗರಕ್ಕೆ ಆಗಮಿಸಿದೆ. ಈ ಸಂದರ್ಭದಲ್ಲಿ ಶಾಸಕ ಚೆನ್ನಬಸಪ್ಪ ಅವರ ಉಪಸ್ಥಿತಿಯಲ್ಲಿ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನೆರವೇರಿತು.
ಜಂಬೂಸವಾರಿಯಲ್ಲಿ ಸಾಗರ್ ಆನೆಯು ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದ್ದು, ಬಹದ್ದೂರ್ ಮತ್ತು ಸೋಮಣ್ಣ ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
