Sunday, October 11, 2026
Sunday, October 11, 2026

Klive Special Article ಶರದೃತುವಿನ ಶೋಭೆಶರನ್ನವರಾತ್ರಿ ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ.

Date:

Klive Special Article ಈ ವರ್ಷ ನವರಾತ್ರಿ ಹಬ್ಬ ಆಶ್ವಯುಜ ಮಾಸ ಪ್ರಾರಂಭ ವಾಗುವ ಶುಕ್ಲಪಕ್ಷದ ಪಾಡ್ಯದಿಂದ
ವಿಜಯದಶಮಿಯಂದು ಕೊನೆಗೊಳ್ಳುತ್ತದೆ.
ನವರಾತ್ರಿಗೆ ಇನ್ನೊಂದು ಹೆಸರು ದಸರಾ ಹಬ್ಬ ಎಂತಲೂ ಕರೆಯುತ್ತಾರೆ. ಶರದೃತುವಿನಲ್ಲಿ ಬರುವನವರಾತ್ರಿಯನ್ನು “ಶರನ್ನವರಾತ್ರಿ”ಎಂದು ಕರೆಯುವರು.ಪ್ರತಿ ಸಂವತ್ಸರ ಪ್ರಾರಂಭವಾಗುವ
ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯವರೆಗೆ ಆಚರಿಸುವ ಹಬ್ಬವನ್ನು “ವಸಂತ ನವರಾತ್ರಿ”ಎಂದು ಕರೆಯುವರು.
ಶರನ್ನವರಾತ್ರಿಯಲ್ಲಿ ದುರ್ಗಾ ಮಾತೆಯ ಆರಾಧನೆ
ಮಾಡಲಾಗುತ್ತದೆ.ನವರಾತ್ರಿಯಲ್ಲಿ ಒಂಭತ್ತು ದಿನಗಳೂ ದೇವಿಗೆ ಪ್ರತಿದಿನವೂವಿಶೇಷ ಅಲಂಕಾರದೊಂದಿಗೆಪೂಜಿಸಿ ದೇವಿಯಅನುಗ್ರಹಕ್ಕೆ ಪಾತ್ರರಾಗುತ್ತಾರೆ.ಈ ಹಬ್ಬದಲ್ಲಿ ಒಂಭತ್ತು ದಿನಗಳೂ ದೇವಿಯನ್ನು ಒಂದೊಂದು ಹೆಸರಿನಿಂದ ಆರಾಧಿಸಲಾಗುತ್ತದೆ.
(1)ಶೈಲಪುತ್ರಿ(2)ಬ್ರಹ್ಮಚಾರಿಣಿದೇವಿ(3),ಚಂದ್ರಘಂಟಾದೇವಿ
(4)ಕೂಷ್ಮಾಂಡದೇವಿ(5)ಸ್ಕಂದ ಮಾತಾ(6)ಕಾತ್ಯಾಯಿನಿ ದೇವಿ(7)ಕಾಳರಾತ್ರಿದೇವಿ
(8)ಮಹಾಗೌರಿಮಾತೆ(9)ಸಿದ್ಧಿಧಾತ್ರಿದೇವಿ ಹೀಗೆ ಒಂಭತ್ತು ದಿನಗಳು ಒಂಭತ್ತು ಹೆಸರಿನಿಂದ ಆರಾಧಿಸಿ ಪೂಜೆ ಮಾಡುತ್ತಾರೆ.ಹತ್ತನೆಯ ದಿನ
“ವಿಜಯದಶಮಿ”ಯದಿನ,ಈ ದಿನ ಶಮಿ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ(ಬನ್ನಿಪತ್ರೆ)ಯನ್ನು
ಪರಸ್ಪರನೆಂಟರಿಷ್ಟರು,ಸ್ನೇಹಿತರುಗಳಲ್ಲಿವಿನಿಯೋಗಿಸಿ ಶುಭ ಹಾರೈಸುವುದು ಪದ್ಧತಿಯಾಗಿದೆ.
ನಮ್ಮ ಕರ್ನಾಟಕದ ಅರಮನೆಯ ನಾಡಾದ ಮೈಸೂರಿನಲ್ಲಿ ದಸರಾ ಉತ್ಸವವನ್ನು ವಿಶೇಷವಾಗಿ
ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮೈಸೂರು ದಸರಾ ಉತ್ಸವವು ಬಹಳ ಪ್ರಸಿದ್ಧಿಯನ್ನೂ ಪಡೆದಿದೆ.ನಾಡಹಬ್ಬ ಎಂದು ಹೆಸರು ಪಡೆದಿದೆ.ವಿಜಯದಶಮಿಯಂದು
ನಡೆಯುವ ಚಾಮುಂಡೇಶ್ವರಿಯ ಜಂಬೂಸವಾರಿಉತ್ಸವ ವೀಕ್ಷಿಸಲು ನಾನಾ ಊರುಗಳಿಂದ ಜನ ಬಂದಿರುತ್ತಾರೆ.
ನವರಾತ್ರಿಯ ಒಂಬತ್ತೂ ದಿನಗಳಲ್ಲಿ ಜಗನ್ಮಾತೆಯರಾದ,ಪ್ರಕೃತಿಸ್ವರೂಪಿಣಿಯರಾದ ಮಹಾಲಕ್ಷ್ಮೀ,ಸರಸ್ವತಿ ಮತ್ತು ದುರ್ಗಾಮಾತೆಯರ
ಆರಾಧನೆಯೇವಿಶೇಷ.ಅವುಗಳಲ್ಲಿ ಮೊದಲ ಮೂರು ದಿನಗಳಲ್ಲಿ ಮಹಾಲಕ್ಷ್ಮಿಯನ್ನು ಆರಾಧಿಸುತ್ತಾರೆ.ನಂತರದ ಮೂರು ದಿನಗಳಲ್ಲಿ
ವಿದ್ಯೆಗೆ ಅಧಿದೇವತೆಯಾದ ಸರಸ್ವತೀದೇವಿಯನ್ನು ಪೂಜಿಸುತ್ತಾರೆ.ಕೊನೆಯ ಮೂರು ದಿನಗಳು ಶಕ್ತಿ
ದೇವತೆಯಾದ ದುರ್ಗಾಮಾತೆಯನ್ನು ಆರಾಧನೆ ಮಾಡುತ್ತಾರೆ.ಅಷ್ಟಮಿಯಂದುಎಲ್ಲಾಸಂಕಷ್ಟಗಳನ್ನು ಪರಿಹರಿಸಲು ಅನುಗ್ರಹಿಸುವ ದುರ್ಗಾದೇವಿಯನ್ನು ಷೋಡಶೋಪಚಾರ ಗಳಿಂದ ಪೂಜಿಸುತ್ತಾರೆ.ಎಲ್ಲರ ಕ್ಷೇಮವನ್ನು ಬಯಸಿ ದೇವಿಯ ಪಾರಾಯಣವನ್ನೂ ಮಾಡುತ್ತಾರೆ.
ಈದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ. ಮಹಾನವಮಿಯಂದು ದೇವರ ಪೂಜೆಯ ಜೊತೆಗೆ ವಾಹನಗಳ ಮತ್ತು ಆಯುಧ ಪೂಜೆಯನ್ನು ಮಾಡುತ್ತಾರೆ.
ಹತ್ತನೆಯ ದಿನ ವಿಜಯದಶಮಿಯನ್ನಾಗಿ ಆಚರಿಸುತ್ತಾರೆ.ವನವಾಸದಲ್ಲಿದ್ದ ಪಾಂಡವರು ಧೌಮ್ಯ ಋಷಿಗಳ ಉಪದೇಶದಂತೆ ಒಂಬತ್ತು ದಿನಗಳು ಶಕ್ತಿರೂಪಿಣಿಯಾದ ಸಂಕಷ್ಟಗಳನ್ನು ಪಾರು ಮಾಡಬಲ್ಲ ದುರ್ಗಾ ಮಾತೆಯನ್ನು ಆರಾಧಿಸಿ ಹತ್ತನೆಯ ದಿನ ಅಂದರೆ ವಿಜಯದಶಮಿಯಂದು ವಿರಾಟನಗರವನ್ನು ಅಜ್ಞಾತವಾಸಕ್ಕಾಗಿ ಪ್ರವೇಶಿಸಿ ದುರ್ಯೋಧನಾದಿಗಳಿಗೆ ತಿಳಿಯದಂತೆ ಅಜ್ಞಾತವಾಸವನ್ನು ಮುಗಿಸಿದರೆಂದು ತಿಳಿದುಬರುತ್ತದೆ.
ಅಂತೆಯೇ ಶ್ರೀರಾಮನೂ ಕೂಡ ಲೋಕಕಂಟಕನಾದ ರಾವಣನನ್ನು ಸಂಹರಿಸಲು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿಯ
ದಿನ ವಿಜಯ ಯಾತ್ರೆಯನ್ನು ಪ್ರಾರಂಭಿಸಿದ ಎಂದು ಹೇಳುತ್ತಾರೆ.
ಈ ಹಬ್ಬದಲ್ಲಿ ಬೊಂಬೆಗಳನ್ನು ಕೂಡಿಸಿ ಪೂಜಿಸುವ ಪದ್ಧತಿಯಿದೆ.ಮಕ್ಕಳುಗಳನ್ನು ಕರೆದು ಬೊಂಬೆಯ ಪೂಜೆಮಾಡಿ ಬೊಂಬೆಯ ನೈವೇದ್ಯಕ್ಕಾಗಿ ಮಾಡಿದ ತಿಂಡಿಗಳನ್ನು ಮಕ್ಕಳಿಗೆ ಕೊಡುತ್ತಾರೆ. ಎಲ್ಲಾ ಹಬ್ಬಗಳಿಗಿಂತಲೂ ಹೆಚ್ಚುದಿನ ಆಚರಿಸುವ ಹಬ್ಬ ಈ ನವರಾತ್ರಿ ಹಬ್ಬವಾಗಿದೆ.
ರಾವಣನಂತಿರುವ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವೆಂಬ ಶ್ರೀರಾಮನನ್ನು ನಮ್ಮ ಹೃದಯದಲ್ಲಿ ಸ್ಥಾಪಿಸುವಂತೆ ಭಗವಂತನಲ್ಲಿ ಮತ್ತು ಶ್ರೀದುರ್ಗಾಮಾತೆಯಲ್ಲಿ ಪ್ರಾರ್ಥಿಸೋಣ.
ಶ್ರೀದುರ್ಗಾಮಾತೆಯು ಸಮಸ್ತ ಜನತೆಗೂ ಸಕಲ ಸನ್ಮಂಗಳವನ್ನು ಅನುಗ್ರಹಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ ಎಲ್ಲರಿಗೂ”ನವರಾತ್ರಿ ಹಬ್ಬದ ಶುಭಾಶಯಗಳು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...