Sunday, October 11, 2026
Sunday, October 11, 2026

ಶಿವಮೊಗ್ಗದ ಸಾಂಸ್ಕೃತಿಕ ಗರಿಮೆ ಬಿಂಬಿಸುವ ಐತಿಹಾಸಿಕ ‘ನಾಡಹಬ್ಬ ದಸರಾ – 2026’ಕ್ಕೆ ಅದ್ಧೂರಿ ಚಾಲನೆ: 10 ದಿನಗಳ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶಾಸಕ ಎಸ್.ಎನ್. ಚನ್ನಬಸಪ್ಪ ಕರೆ

Date:

ನಮ್ಮ ಭವ್ಯ ಪರಂಪರೆಯನ್ನು ಗೌರವಿಸುವುದರೊಂದಿಗೆ, ಮಲೆನಾಡಿನ ನೈಸರ್ಗಿಕ ಸೌಂದರ್ಯ ಹಾಗೂ ಸಾಂಸ್ಕೃತಿಕ ಗರಿಮೆಯನ್ನು ಜಗತ್ತಿಗೆ ಸಾರುವ ನಮ್ಮೂರ ಹೆಮ್ಮೆಯ ನಾಡಹಬ್ಬ ‘ಶಿವಮೊಗ್ಗ ದಸರಾ – 2026’ ಮಹೋತ್ಸವಕ್ಕೆ ಇಂದು ಅತ್ಯಂತ ಸಡಗರ-ಸಂಭ್ರಮದಿಂದ ಚಾಲನೆ ದೊರೆತಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದ್ದಾರೆ.

ನಾಡದೇವತೆ ಹಾಗೂ ನಮ್ಮೆಲ್ಲರ ಆರಾಧ್ಯ ಮಾತೆಯಾದ ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ದೇವಿ ಐತಿಹಾಸಿಕ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ಭಕ್ತರ ಜಯಘೋಷ ಮತ್ತು ಭಕ್ತಿಪರವಶತೆಯ ನಡುವೆ ವಿರಾಜಮಾನಳಾಗಿದ್ದು, ಮಹೋತ್ಸವಕ್ಕೆ ದೈವೀ ಶಕ್ತಿ ಹಾಗೂ ಮಂಗಳಕರ ಶೋಭೆಯನ್ನು ತುಂಬಿದ್ದಾಳೆ ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ಈ ಬೃಹತ್ ದಸರಾ ಮಹೋತ್ಸವವನ್ನು ಖ್ಯಾತ ಹಿರಿಯ ಚಲನಚಿತ್ರ ನಟರಾದ ಶ್ರೀ ಶ್ರೀನಾಥ್ ಅವರು ವಿಧ್ಯುಕ್ತವಾಗಿ ಉದ್ಘಾಟಿಸಿದ್ದು, ನಗರದ ಸಾಂಸ್ಕೃತಿಕ ಚೈತನ್ಯವನ್ನು ಪ್ರತಿಬಿಂಬಿಸುವುದರೊಂದಿಗೆ ಮಲೆನಾಡಿನ ವೈಭವವನ್ನು ವಿಶ್ವದ ಮುಂದೆ ತರುವ ಮಹತ್ವದ ಜನೋತ್ಸವಕ್ಕೆ ನಾಂದಿ ಹಾಡಿದ್ದಾರೆ. ಧಾರ್ಮಿಕತೆ, ಸಂಸ್ಕೃತಿ, ಜನಪದ ಕಲೆ, ಸಾಹಿತ್ಯ ಹಾಗೂ ಸಮಾಜದ ಭಾವೈಕ್ಯತೆಯನ್ನು ಬೆಸೆಯುವ ಉದ್ದೇಶದಿಂದ ನಗರದ ವಿವಿಧ ವೇದಿಕೆಗಳಲ್ಲಿ ಹತ್ತಾರು ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಈ ಬಾರಿಯ ಉತ್ಸವದ ಅಂಗವಾಗಿ ಮಕ್ಕಳ ದಸರಾ, ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಯುವ ದಸರಾ, ರಂಗ ದಸರಾ, ಜನಪದ ದಸರಾ, ಜ್ಞಾನ ದಸರಾ, ರೈತ ದಸರಾ, ಆಹಾರ ದಸರಾ, ಜಾನಪದ ಕಲಾ ಪ್ರಕಾರಗಳು, ಕಲಾ ದಸರಾ, ಪರಿಸರ ದಸರಾ, ಗಮಕ ದಸರಾ ಹಾಗೂ ಯೋಗ ದಸರಾ ಹೀಗೆ ವೈವಿಧ್ಯಮಯ ಆವೃತ್ತಿಗಳು ಮೂಡಿಬರಲಿವೆ. ಅಂತಿಮ ದಿನವಾದ ವಿಜಯದಶಮಿಯಂದು ಐತಿಹಾಸಿಕ ಬನ್ನಿ ಮಂಟಪದಲ್ಲಿ ನಡೆಯುವ ಪವಿತ್ರ ಬನ್ನಿ ಪೂಜೆ ಸೇರಿದಂತೆ ಸಕ್ರೆಬೈಲು ಗಜಪಡೆಯ ಗಾಂಭೀರ್ಯದೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊತ್ತ ಭವ್ಯ ಜಂಬೂಸವಾರಿ ಮೆರವಣಿಗೆಯ ಮೂಲಕ ನಾಡಿನ ಪ್ರತಿಭೆಗಳಿಗೆ ಹಾಗೂ ಶ್ರೀಮಂತ ಜನಪದ ಪರಂಪರೆಗೆ ಅದ್ವಿತೀಯ ವೇದಿಕೆ ಸಾಕಾರಗೊಳ್ಳಲಿದೆ ಎಂದು ತಿಳಿಸಿದ್ದಾರೆ.

“ಈ ಮಹೋತ್ಸವವು ಕೇವಲ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತವಾಗಿರದೆ, ಸಮಗ್ರ ಜಿಲ್ಲೆಯ ಸಮಸ್ತ ಜನತೆಗೆ ಹರ್ಷ, ಸಡಗರ ಹಾಗೂ ಆನಂದವನ್ನು ಪಸರಿಸುವ ಜನಪರ ನಾಡಹಬ್ಬವಾಗಿದೆ. ನಮ್ಮ ಪರಂಪರೆಯ ಶಕ್ತಿ, ಸಾಮರಸ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಸಾಂಸ್ಕೃತಿಕ ಪರ್ವದಲ್ಲಿ ನಗರದ ಸಮಸ್ತ ನಾಗರಿಕರು, ಕಲಾ ರಸಿಕರು, ಮಾತೆಯರು ಹಾಗೂ ಯುವಮಿತ್ರರು ಕುಟುಂಬ ಸಮೇತರಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು,” ಎಂದು ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...