Saturday, October 3, 2026
Saturday, October 3, 2026

ಫ್ಯಾಶನ್ ಎಜುಕೇಶನ್- ಕೆಪಿಎಸ್‌ನಿಂದ ಪೌರ ಕಾರ್ಮಿಕರಿಗೆ ಸನ್ಮಾನಪೌರ ಕಾರ್ಮಿಕರು ಆರೋಗ್ಯ ಸಂರಕ್ಷಕರು: ಎಸ್.ಹೆಚ್. ಚೇತನ

Date:

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ರೋಗ-ರುಜಿನಗಳು ಹರಡುವುದನ್ನು ತಡೆಯುವ ಪೌರ ಕಾರ್ಮಿಕರು ಆರೋಗ್ಯ ಸಂರಕ್ಷರು. ಸ್ವಚ್ಛತೆ ಮತ್ತು ಜನರ ಆರೋಗ್ಯ ಕಾಪಾಡುವಲ್ಲಿ ಇವರ ಸೇವೆ ಅಪಾರ ಹಾಗೂ ಸ್ಮರಣೀಯ ಎಂದು ಫ್ಯಾಶನ್ ಎಜುಕೇಶನ್‌ನ ಮುಖ್ಯಸ್ಥರು ಹಾಗೂ sಎಸ್‌ಯುಎಂವಿ ಸದಸ್ಯೆ ಎಸ್. ಹೆಚ್. ಚೇತನ ಹೇಳಿದರು.

ಫ್ಯಾಶನ್ ಎಜುಕೇಶನ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ವತಿಯಿಂದ ಅ.2ರಂದು ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಪ್ರಯುಕ್ತ ನಗರದ ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 27ನೇ ವಾರ್ಡ್ನ ಮಿಳಘಟ್ಟ ವ್ಯಾಪ್ತಿಯ ಮೇಸ್ತಿç ಆರ್. ಶ್ರೀನಿವಾಸ್ ಹಾಗೂ ಎಲ್ಲಾ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಶ್ರೇಷ್ಠ ಕಾಯಕ ಜೀವಿಗಳು ಮತ್ತು ಕಾಯಕ ಯೋಗಿಗಳು. ಇವರು ಕೆಲಸದ ಸಮಯದಲ್ಲಿ ಕಣ್ಣಿಗೆ ಗ್ಲಾಸ್, ಕೈ ಗ್ಲೌಸ್, ಮುಖ ಗವಸು, ಮೊಳಕಾಲೆತ್ತರದ ಶೂಗಳು ಮತ್ತು ಅಗತ್ಯ ಸುರಕ್ಷತಾ ಪರಿಕರಗಳನ್ನು ಬಳಸುವುದು ಅಗತ್ಯ. ಜನರ ಆರೋಗ್ಯ ಸಂರಕ್ಷಿಸುವ ಇವರು ತಮ್ಮ ಸುರಕ್ಷತೆಗೂ ಆದ್ಯತೆ ನೀಡುವುದು ಅಗತ್ಯವೆಂದರು.

ಸ್ಟೆಪ್ ಹೋಲ್ಡರ್ಸ್ ಡ್ಯಾನ್ಸ್ ಸ್ಕೂಲ್‌ನ ಡ್ಯಾನ್ಸ್ ಮಾಸ್ಟರ್ ಅರುಣ್ ರಾಜ್ ಶೆಟ್ಟಿ ಮಾತನಾಡಿ ಪೌರ ಕಾರ್ಮಿಕರ ಸೇವೆ ಹಾಗೂ ಶ್ರಮ ನಿಜಕ್ಕೂ ಗೌರವಾರ್ಹ. ಇವರನ್ನು ಗೌರವದಿಂದ ಕಾಣುವುದು ಮತ್ತು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಅವರಿಗೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಶ್ವನಾಥ್ ಯು.ಹೆಚ್., ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶಿವಾನಂದ್ ಯು., ಮಿಳಘಟ್ಟ ಪ್ರಾಥಮಿಕ ಶಾಲೆಯ ಅಧ್ಯಕ್ಷ ಬಾಬು, ವಿಶ್ರಾಂತ ಉಪನ್ಯಾಸಕ ಚಂದ್ರಶೇಖರ್ ಜಿ.ಎಸ್. ಮತ್ತು ಎಸ್‌ಡಿಎಂಸಿ ಸದಸ್ಯರು ಆಗಮಿಸಿದ್ದರು.

ಶಿಕ್ಷಕರುಗಳಾದ ಎಂ.ವಿ. ವೀರಮ್ಮ ಪ್ರಾರ್ಥಿಸಿ, ಪಿ.ಪಿ. ಸುನೀತಾ ಸ್ವಾಗತಿಸಿ, ಹೆಚ್.ಎಸ್. ಉಮಾಶಂಕರ ಪ್ರಾಸ್ತಾವಿಸಿ, ಎಸ್.ಆರ್. ಸುನಿಲ್ ಕುಮಾರ್ ನಿರೂಪಿಸಿ, ಡಿ.ಓ. ಉಮಾ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...