Friday, October 2, 2026
Friday, October 2, 2026

ಮಹಿಳೆಯರ ಸ್ವಾವಲಂಬನೆಗಾಗಿ ಉಚಿತ ಕೌಶಲ್ಯ ತರಬೇತಿ ಶಿಬಿರ

Date:

ಮಹಿಳೆಯರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ಅವರು ಸ್ವಾವಲಂಬಿಗಳಾಗಿ ಸ್ವಉದ್ಯೋಗ ಆರಂಭಿಸಲು ನೆರವಾಗುವ ಉದ್ದೇಶದಿಂದ ರೋಟರಿ ಕ್ಲಬ್ ಶಿವಮೊಗ್ಗ, ರೋಟರಿ ಯುವ ಕೇಂದ್ರ ಹಾಗೂ ದಿವ್ಯಜ್ಯೋತಿ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಉಚಿತ ಕೌಶಲ್ಯ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಬ್ಯೂಟಿಷಿಯನ್ ತರಬೇತಿ, ಟೈಲರಿಂಗ್ ತರಬೇತಿ, ಕೋಪ್ಪ & ಕುಚ್ಚು ತರಬೇತಿ ಹಾಗೂ ಜರಿ & ಆರಿ ವರ್ಕ್ ತರಬೇತಿ ನೀಡಲಾಗುತ್ತದೆ. ಉಚಿತ ತರಬೇತಿ ನೀಡುತ್ತಿದ್ದು, ತರಬೇತಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳ ಖರ್ಚನ್ನು ತರಬೇತಿ ಪಡೆಯುವವರು ಭರಿಸಬೇಕು. ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ತರಬೇತಿ ಪೂರ್ಣಗೊಳಿಸಿದ ನಂತರ ಪ್ರಮಾಣಪತ್ರ ನೀಡಲಾಗುತ್ತದೆ.

ಪ್ರತಿ ತರಬೇತಿಗೆ 20 ಮಂದಿಗೆ ಅವಕಾಶವಿದ್ದು, ಮೊದಲು ಅರ್ಜಿ ಸಲ್ಲಿಸುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು 3 ಪಾಸ್‌ಪೋರ್ಟ್ ಅಳತೆ ಫೋಟೋ ಹಾಗೂ ಆಧಾರ್ ಕಾರ್ಡ್ ತರಬೇಕು. ಅಕ್ಟೋಬರ್ 6ರೊಳಗೆ (06-10-2026 ) ಎಲ್‌ಬಿಎಸ್ ನಗರದಲ್ಲಿರುವ ರೋಟರಿ ಯುವ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರೊಳಗೆ ಅರ್ಜಿ ಸಲ್ಲಿಸಬೇಕು.

ಶಿವಮೊಗ್ಗ ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಮತ್ತು ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8884611787 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...