ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್ ರವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ದಿನಾಂಕ 30 ರಂದು ಶಿಕಾರಿಪುರ ಕ್ಷೇತ್ರದ ಕ್ಷೇತ್ರದ ಕಿಟ್ಟದಹಳ್ಳಿ ಯಿಂದ ಶಿಕಾರಿಪುರದವರೆಗೆ ಭಾರತ್ ಜೋಡೋ ಪಾದಯಾತ್ರೆ 2.0 ಹಾಗೂ ಬೃಹತ್ ಬಹಿರಂಗ ಸಭೆಯ ಪೂರ್ವಭಾವಿ ಸಭೆಯನ್ನು ಇಂದು ಕಪ್ಪನಹಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಗ್ರಾಮಗಳಲ್ಲಿ ನಡೆಸಿ ಗ್ರಾಮಸ್ಥರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಅತಿಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲು ರೂಪರೇಷಗಳನ್ನು ಚರ್ಚಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಉಸ್ತುವಾರಿಗಳಾದ ನಾಗರಾಜ್ ಕಂಕಾರಿ, ಕೆ ರಂಗನಾಥ್ , ಎಚ್ ಪಾಲಾಕ್ಷಿ, ಭಾಸ್ಕರ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎನ್ ಅರುಣ್, ಪ್ರಮುಖರಾದ ಪ್ರಕಾಶ್ ಮುಡುಬು ಸಿದ್ದಾಪುರ, ಪಿ ಎಲ್ ಡಿ ಬ್ಯಾಂಕ್ ಲೋಹಿತ್ ಕುಮಾರ್, ಬನ್ನೂರ್ ನಾಗರಾಜ್, ಚಂದ್ರಪ್ಪ ರಾಘವೇಂದ್ರ ಪ್ರಮೋದ್ ಕಪ್ಪನಹಳ್ಳಿ ಸುದರ್ಶನ್ ನಾಯ್ಡು, ಹನುಮಂತಪ್ಪ, ತಿಮ್ಮಪ್ಪ, ಕೊಟ್ರೇಶ್, ಈಶಣ್ಣ ಸತೀಶ್ ನಾಯ್ಡು ಹಿರೇಕಲ್ಮನೆ ಇತರರು ಉಪಸ್ಥಿತರಿದ್ದರು
Show quoted text
“ಸಿಟಿ ಬ್ಯಾಂಕಿನ ಲಾಕರ್ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ನಡೆದಿರುವುದಿಲ್ಲ – ಗ್ರಾಹಕರಿಗೆ ಯಾವುದೇ ಸಂಶಯ ಬೇಡ. ಕೆ ರಂಗನಾಥ್ ”
ಇತ್ತೀಚಿಗೆ ನಮ್ಮ ಬ್ಯಾಂಕಿನ ಗ್ರಾಹಕರಾದ ಶ್ರೀಮತಿ ಲಕ್ಷ್ಮೀನಾರಾಯಣ ಇವರು ನಮ್ಮ ಬ್ಯಾಂಕಿನಲ್ಲಿ ವೈಯುಕ್ತಿಕವಾಗಿ ತಮ್ಮ ಮಗನೊಂದಿಗೆ ಜಂಟಿ ಖಾತೆಯಲ್ಲಿ ಲಾಕರ್ ಸೌಲಭ್ಯವನ್ನು ಪಡೆದಿರುತ್ತಾರೆ. ಸದರಿಯವರು ಬ್ಯಾಂಕಿಗೆ ಲಾಕರ್ ವ್ಯವಹಾರ ನಡೆಸಲು ಬಂದ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು ಗ್ರಾಹಕರೊಂದಿಗೆ ಒಟ್ಟಿಗೆ ಲಾಕರ್ ರೂಮಿಗೆ ತೆರಳಿ, ಕೀ ತೆಗೆದು ತಕ್ಷಣವೇ ರೂಂನಿಂದ ವಾಪಾಸ್ ಬಂದಿರುತ್ತಾರೆ. ಗ್ರಾಹಕರು ತಮಗೆ ನೀಡಿದ ಲಾಕರಿನಲ್ಲಿ ಏನು ಇಡುತ್ತಾರೆ ಮತ್ತು ಏನು ತೆಗೆಯುತ್ತಾರೆ ಎಂಬುದು ಬ್ಯಾಂಕಿಗೆ ತಿಳಿಯುವುದಿಲ್ಲ. ಇದು ಸಂಪೂರ್ಣ ಗ್ರಾಹಕರಿಗೆ ಸಂಬಂಧಪಟ್ಟದ್ದಾಗಿರುತ್ತದೆ ಜೊತೆಗೆ ಗ್ರಾಹಕರ ಹೊಣೆಗಾರಿಕೆಯಾಗಿರುತ್ತದೆ. ಇದರಲ್ಲಿ ಬ್ಯಾಂಕಿನ ಯಾವುದೇ ಒಳಗೊಳ್ಳುವಿಕೆ ಇರುವುದಿಲ್ಲ. ಗ್ರಾಹಕರು ಒಮ್ಮೆ ತಮ್ಮ ಲಾಕರಿನಲ್ಲಿ ವ್ಯವಹಾರ ನಡೆಸಿ ಬಾಗಿಲು ಕೀ ಹಾಕಿಕೊಂಡು ಹೋದ ನಂತರ ಯಾವುದೇ ಸಂದರ್ಭದಲ್ಲೂ ಅವರ ಉಪಸ್ಥಿತಿಯಿಲ್ಲದೇ ಮತ್ತೆ ಬಾಗಿಲು ತೆಗೆಯಲು ಸಾಧ್ಯವಿರುವುದಿಲ್ಲ.
ದಿನಪತ್ರಿಕೆಯಲ್ಲಿ ಬಂದಿರುವ ಸುದ್ದಿಗೆ ಸಂಬಂಧಿಸಿದಂತೆ ಸದರಿ ಗ್ರಾಹಕರು ತಾವು ಈ ಹಿಂದೆ ದಿ:9.10.2025ರಲ್ಲಿ ಬಂದು ವ್ಯವಹರಿಸಿದಾಗ ಇಟ್ಟಿದ್ದ ಒಡವೆಗಳು ದಿನಾಂಕ:22.9.2026ರಲ್ಲಿ ಮತ್ತೆ ಬಂದು ನೋಡಿದಾಗ ಇಲ್ಲವೆಂದು ಆಪಾದಿಸುತ್ತಿದ್ದಾರೆ. ಸದರಿಯವರು ಲಾಕರಿನಲ್ಲಿ ಏನು ಇಟ್ಟಿದ್ದರು ಎಂಬುದರ ಬಗ್ಗೆ ಬ್ಯಾಂಕಿಗೆ ಯಾವುದೇ ವಿಷಯ ಗೊತ್ತಿರುವುದಿಲ್ಲ.
ಬ್ಯಾಂಕಿನವತಿಯಿಂದ ಬ್ಯಾಂಕಿನ ಸಿಬ್ಬಂದಿಗಳ ಮೇಲೆ ಅವರು ಹಾಕಿದ್ದಾರೆ ಎನ್ನಲಾಗುತ್ತಿರುವ ಆಪಾದನೆ ಶುದ್ಧಸುಳ್ಳು. ನಮ್ಮ ಬ್ಯಾಂಕಿನಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿರುವುದಿಲ್ಲ. ಬ್ಯಾಂಕಿನಲ್ಲಿಯೇ ಒಡವೆಗಳು ಕಾಣೆಯಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಅದರಲ್ಲೂ ಬ್ಯಾಂಕಿನ ಸಿಬ್ಬಂದಿಗಳ ಕೈವಾಡವಿದೆ ಎಂಬುದಂತೂ ಸತ್ಯಕ್ಕೆ ಅತೀ ದೂರವಾಗಿರುತ್ತದೆ.
114 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಬ್ಯಾಂಕಿನ ಬಗ್ಗೆ, ಬ್ಯಾಂಕಿನ ಸದಸ್ಯರು, ಗ್ರಾಹಕರು, ಹಿತೈಷಿಗಳು ಈ ಸುಳ್ಳುಸುದ್ದಿಯನ್ನು ಸಂಪೂರ್ಣವಾಗಿ ನಂಬಬಾರದಾಗಿ ಕೇಳಿಕೊಳ್ಳುತ್ತೇವೆ. ಗ್ರಾಹಕರು ಬ್ಯಾಂಕಿನ ವಿರುದ್ಧ ದೂರು ನೀಡಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆ ಬ್ಯಾಂಕಿಗೆ ತಲುಪಿರುವುದಿಲ್ಲ. ಮತ್ತು ಯಾವುದೇ ತನಿಖೆ ಇದುವರೆಗೂ ನಡೆದಿರುವುದಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ತನಿಖೆ ನಡೆದಲ್ಲಿ ತನಿಖೆ ನಂತರ ಸತ್ಯಾಸತ್ಯತೆಗಳು ಕಂಡುಬರುತ್ತದೆ
ಈ ರೀತಿಯ ಬ್ಯಾಂಕಿನ ಸದಸ್ಯರುಗಳಿಗೆ, ಗ್ರಾಹಕರುಗಳಿಗೆ ಬ್ಯಾಂಕಿನವತಿಯಿಂದ ನೀಡುತ್ತಿರುವ ಭರವಸೆ ಏನೆಂದರೆ, ನಮ್ಮ ಬ್ಯಾಂಕಿನಲ್ಲಿ ಯಾವುದೇ ಘಟನೆಗಳು ಬ್ಯಾಂಕ್ ಸ್ಥಾಪಿತವಾದಾಗಿನಿಂದಲೂ ನಡೆದಿರುವುದಿಲ್ಲ. ಮತ್ತು ಬ್ಯಾಂಕಿನ ವ್ಯವಹಾರವನ್ನು ತಾವುಗಳು ಯಾವುದೇ ಸಂಶಯಕ್ಕೆ ಎಡೆಮಾಡಿಕೊಡದೇ ಮುಂದುವರೆಸಬಹುದಾಗಿದ್ದು, ಯಾವುದೇ ತೊಂದರೆಗಳು ತಮಗೆ ಆಗುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ.
ಬ್ಯಾಂಕು ಆರ್ಥಿಕವಾಗಿ ಮತ್ತು ನಂಬಿಕೆಯ ದೃಷ್ಟಿಯಿಂದ ಸದೃಢವಾಗಿರುತ್ತದೆ ಎಂಬ ಭರವಸೆಯನ್ನು ಆಡಳಿತ ಮಂಡಳಿಯು ಗ್ರಾಹಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ನೀಡಲಾಗಿದೆ
