ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಾರ್ಯಾಲಯವು ತಾಲೂಕು ಪಂಚಾಯತಿ ಕಚೇರಿಯಲ್ಲಿ ಗ್ರಾಮ ಪಂಚಾಯತಿ ಒಕ್ಕೂಟಗಳಲ್ಲಿ ಲೆಕ್ಕ ಪರಿಶೋಧನೆ ಕೈಗೊಳ್ಳಲು ಸಮುದಾಯ ಲೆಕ್ಕ ಪರಿಶೋಧಕರ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ.
ಬಿ.ಕಾಂ., ಎಂ.ಕಾಂ., ಬಿಬಿಎ ಅಥವಾ ಎಂಬಿಎ(ಫೈನಾನ್ಸ್) ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ದಿ:06/10/2026 ರಿಂದ ದಿ: 28/10/2026 ರೊಳಗಾಗಿ ಅರ್ಜಿ ಸಲ್ಲಿಸುವುದು.
ಅರ್ಜಿ ಸಲ್ಲಿಸುವ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಪಂಚಾಯಿತಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: ಶಿವಮೊಗ್ಗ-8746040442, ಭದ್ರಾವತಿ-8660436211, ಹೊಸನಗರ-82776711951, ಸಾಗರ-9632272106, ಶಿಕಾರಿಪುರ- 9482476699, ಸೊರಬ-9902493669 ಮತ್ತು ತೀರ್ಥಹಳ್ಳಿ-9741687576 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ತಿಳಿಸಿರುತ್ತಾರೆ.
ಸಮುದಾಯ ಲೆಕ್ಕ ಪರಿಶೋಧಕರ ಆಯ್ಕೆಗೆ ಅರ್ಜಿ ಆಹ್ವಾನ
Date:
