Friday, October 2, 2026
Friday, October 2, 2026

Klive Special Article ಮರೆಯಲಾಗದ ಮಹಾಶಯರು

Date:

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ ಹೋರಾಡುತ್ತಾರೆ. ಇದರಿಂದ ಅವರಿಗೆ ಏನೂ ಲಾಭವಿಲ್ಲ. ಆದರೆ ಅವರ ಸ್ವಭಾವವೇ ಸೇವಾ ಮನೋಭಾವ ಆಗಿರುವಾಗ ಮುಂದೆ ನಡೆಯುತ್ತಿರುತ್ತಾರೆ.
ನಮ್ಮ ಅರಿವಿಗೆ ಅವರ ಸೇವಾಮನೋಭಾವ ಅರ್ಥವಾದಾಗ ನಾವು ನಮಗರಿವಿಲ್ಲದೇ ಅವರನ್ನ ಮೆಚ್ವಿಕೊಳ್ಳುತ್ತೇವೆ..

ಅಂತಹ ವ್ಯಕ್ತಿಗಳು ಸ್ವಾತಂತ್ರ್ಯ ಚಳವಳಿಗಾರರಾಗಿರಬಹುದು. ಸಿನಿಮಾ ನಟರಾಗಿರಬಹುದು,
ಧಾರ್ಮಿಕ ಮುಖಂಡರಾಗಿರಬಹುದು.
ಒಂದುಹಂತದಲ್ಲಿ ಅವರು ಸ್ವಾರ್ಥಚಿಂತನೆಗಳಿಂದ ಕುಟುಂಬ,ಪರಿವಾರ
ಮತ್ತು ಹಿತಾಸಕ್ತಿಗಳ ಪರವಿದ್ದರೂ ಯಾವುದೋಕ್ಷಣ ಅವರನ್ನ ಪರಹಿತ ಚಿಂತನೆಗೊಳಪಡುವ ಬದಲಾವಣೆ ಮಿಂಚಿನಂತೆ ಬಂದಿರುತ್ತದೆ.

ಅಂತಹ ವ್ಯಕ್ತಿಸಂಪದಗಳಲ್ಲಿ ಗಾಂಧಿ ಮತ್ತು ಶಾಸ್ತ್ರಿ ಅಕ್ಡೋಬರ್ 2 ರಂದು ಸ್ಮರಣೆಗೆ ಬರುತ್ತಾರೆ.
ಇದು ಕೇವಲ ಒಂದೇದಿನದ ಸ್ಮರಣೆ ಆಗಿಹೋಗಿರುವುದು ದುರಂತ.
ಏಕೆಂದರೆ ಗಾಂಧಿತತ್ವಗಳ ಬಗ್ಗೆ
,ದೇಶದ ಗತಿಸ್ಥಿತಿಗಳ ಬಗ್ಗೆ ಪುಂಖಾನುಪುಂಖ ಭಾಷಣಗಳ ಸರಮಾಲೆ ಇವತ್ತು ಕೇಳಬಹುದು.
ಆದರೆ ಅವರ ಆಶಯಗಳನ್ನ ನಾವು ದೈನಂದಿನ ಜೀವನದಲ್ಲಿ ಆಚರಿಸುತ್ತಿದ್ದೇವೆಯೆ? ಎಂಬ ಪ್ರಶ್ನೆಗೆ ಉತ್ತರ ಬಹಳ ಕ್ಷೀಣ ಪ್ರಮಾಣದ್ದಾಗಿದೆ.

ಗಾಂಧಿ ಅವರನ್ನ ಮೆಚ್ಚುವ ಮತ್ತು ನಿಕಷಕ್ಕೊಳಪಡಿಸಿ ಟೀಕಿಸುವ ಎರಡು ವಿಚಾರಧಾರೆಗಳಿವೆ. ಆದರೆ ಶಾಸ್ತ್ರಿಯವರ ಬಗ್ಗೆ ಇರುವ ವಿಶ್ಲೇಷಣೆಯೇ ಬೇರೆ.

Klive Special Article ಗಾಂಧೀಜಿಯವೆ ಗ್ರಾಮಸ್ವರಾಜ್ಯ ಶಾಸ್ತ್ರೀಜಿಯವರ ಜೈ ಜವಾನ್ ,ಜೈ ಕಿಸಾನ್ ಬಹಳ ಮಹತ್ವದ ಚಿಂತನೆಗಳು.
ಗ್ರಾಮ ಸ್ವರಾಜ್ಯ, ರಾಜಕೀಯಯ ನಾಯಕರ,ಪುಢಾರಿಗಳ ಪ್ರಭಾವದಿಂದ ಈಗ
ರಾಜಕೀಯದ ಕರೋನ ಹರಡಿ ಪಕ್ಷಗಳ ಒಳದ್ವೇಷ ಬಿತ್ತಿದೆ. ಯಾವ ಯೋಜನೆಗಳು ಗ್ರಾಮೀಣರ ಹಿತದೃಷ್ಟಿಯಿಂದ ಬಂದರೂ ಜಾರಿಯಲ್ಲಿ ಕೆಟ್ಟ ರಾಜಕೀಯದಿಂದಾಗಿ
ಸೋಲುತ್ತಿವೆ.
ಬರುವ ಅನುದಾನಗಳನ್ನ ಪಂಚಾಯತಿ ಸದಸ್ಯರು ಹಂಚಿಕೊಂಡು ಭಾಗಿದಾರರಾಗಿರುವ ಅನೇಕ ಉದಾಹರಣೆಗಳಿವೆ.
ಸೈನ್ಯಕ್ಕೆ ಸೇರಬಯಸುವ ಯುವಪಡೆ ಸ್ವಯಂಪ್ರೇರಣೆ ಪಡಯುವಲ್ಲಿ ಅಂತಹ ವಾತಾವರಸೃಷ್ಟಿಯಾಗಿಲ್ಲ. ರೈತಪರ ಘೋಷಿಸುವ ಯೋಜನೆಗಳಂತೂ
ಬುಡಕ್ಕೆ ತಲುಪುವ ಮುನ್ನವೇ ದುರ್ಬಲಗೊಳ್ಳುತ್ತಿವೆ.
ಅಧಿಕಾರಿಶಾಹಿಯಲ್ಲಿ ಕೆಲ ಉತ್ತಮರಿದ್ದರೂ
ಅಂಜುಬುರುಕತನ.
ಇಂತಹ ದೃಷ್ಟಿಯಿಂದ
ಜೈ ಜವಾನ್,ಜೈ ಕಿಸಾನ್ ಹೇಳಿಕೊಳ್ಳುವಷ್ಟು ಗಂಭೀರವಾಗಿ ಒಪ್ಪವಾಗಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...