Saturday, September 19, 2026
Saturday, September 19, 2026

Klive Special Article ಅನಂತ ಕಲಾಪಯಣದ”ಅನಂತ ನಾಗ್”

Date:

Klive Special Article ಪದ್ಮಭೂಷಣ ಪುರಸ್ಕೃತ, ಪ್ರಸ್ತುತ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಅನಂತ ನಾಗ್ , ಬಹುಭಾಷಾ ತೆರೆಯ ನಟರು.
ಪ್ರೊ. ಪಿ.ವಿ.ನಂಜರಾಜ್ ಅರಸ್ ನಿರ್ದೇಶನದ ಸಂಕಲ್ಪ (1973) ಚಿತ್ರದ ಮೂಲಕ ನಾಗ್ ತಮ್ಮ ಚಲನಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು.
ಸಂಕಲ್ಪ ಕರ್ನಾಟಕದಲ್ಲಿ ಏಳು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು.
ಶ್ಯಾಮ್ ಬೆನಗಲ್ ಅವರ ಅಂಕುರ್ (1974) ಚಿತ್ರದ ಮೂಲಕ ಸಮಾನಾಂತರ ಸಿನಿಮಾದಲ್ಲಿ ಅವರ ಪ್ರವೇಶವಾಯಿತು.

ಗಲ್ಲಾಪೆಟ್ಟಿಗೆಯಿಂದ
ಯಶಸ್ವಿಯಾದ ಕನ್ನಡ ಚಲನಚಿತ್ರಗಳೆಂದರೆ ಬಯಲು ದಾರಿ (1976), ಕನ್ನೇಶ್ವರ ರಾಮ (1977),
ನಾ ನಿನ್ನ ಬಿಡಲಾರೆ (1979),
ಚಂದನದ ಗೊಂಬೆ (1979),
ಬೆಂಕಿಯ ಬಲೆ (1983),
ಹೆಂಡ್ತಿಗೆ ಹೇಳ್ಬೇಡಿ (1989),
ಗಣೇಶನ ಮದುವೆ (1990),
ಮುಂಗಾರು ಮಳೆ
(2006) ಗೌರಿ ಗಣೇಶ (1999)
ಮಿಂಚಿನ ಓಟ,

ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016), ರಾಜಕುಮಾರ (2017),
ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ (2018), K.G.F: ಅಧ್ಯಾಯ 1 (2018).

K.G.F: ಅಧ್ಯಾಯ 2 (2022)
ಮತ್ತು ಗಾಳಿಪಟ 2 (2022).

ಅನಂತ ನಾಗ್ ಅವರು ಮಾಲ್ಗುಡಿ ಡೇಸ್‌ನಲ್ಲಿ ನಟಿಸಿದರು, ದೂರದರ್ಶನದಲ್ಲಿ ಪ್ರಸಾರವಾದ ದೂರದರ್ಶನ ಸರಣಿಯು R. K. ನಾರಾಯಣರ ಕಥೆಗಳನ್ನು ಆಧರಿಸಿತ್ತು.
ದಕ್ಷಿಣದ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಐದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಅನಂತ್ ನಾಗ್ ಪಡೆದಿದ್ದಾರೆ.
ನಾಡು ನುಡಿ ಸಂಸ್ಕೃತಿಯ ಬಗ್ಗೆ ಅಪಾರ ಮಮತೆಯುಳ್ಳ ಅಪರೂಪದ ಕಲಾವಿದ.
ಅಭಿನಯ ಪ್ರಕಾರದಲ್ಲಿ
ಕನ್ನಡಕ್ಕೆ ಮೊದಲ ಫಾಲ್ಕೆ ಪುರಸ್ಕಾರ ದಾಖಲಿಸಿದ ವರನಟ ಸಾರ್ವಭೌಮ ಡಾ.ರಾಜ್ ಅವರ ನಂತರ ಈಗ ಕನ್ನಡಕ್ಕೆ ಎರಡನೇ ಕೀರ್ತಿಶೃಂಗ ಲಭಿಸಿದೆ.
ಅಂದರೆ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರೂ ಸೇರಿ ಮೂವರು ಕನ್ನಡಿಗರ ಕೊರಳನ್ನ ಈ ಫಾಲ್ಕೆ ಹಾರ ಅಲಂಕರಿಸಿದೆ.

ಕೆ ಲೈವ್ ನ್ಯೂಸ್ ನಿಂದ ಪದ್ಮಭೂಷಣ ಅನಂತ ನಾಗ್ ಅವರಿಗೆ
ಹೃತ್ಪೂರ್ವಕ ಅಭಿನಂದನೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...