ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದ್ದು, ತಾಯಿಯ ಹಾಲನ್ನು ಒಂಬತ್ತು ತಿಂಗಳು ಕುಡಿದರೆ, ಗೋ ಮಾತೆಯ ಹಾಲನ್ನು ಬದುಕಿರುವ ತನಕ ಕುಡಿಯುತ್ತೇವೆ ಎಂದು ಶಿವಮೊಗ್ಗದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಎಸ್. ಚಂದ್ರಶೇಕರ್ ಹೇಳಿದರು.
ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ ಹಮ್ಮಿಕೊಂಡ 21 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರೈತರನ್ನು ಗೌರವಿಸುವುದು ಹಾಗೂ ಗೋ ಪಾಲಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗೋ ಸಂರಕ್ಷಣಾ ಹೋರಾಟ ಸಮಿತಿಯವರು ಗೋವುಗಳ ರಕ್ಷಣೆ ಜೊತೆಗೆ ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಪ್ರಶಂನೀಯ. ಹೋರಾಟ ಎಂದರೆ ಸೊರಬದಲ್ಲಿ ಚಿದಾನಂದ ಗೌಡ ಎನ್ನುವಂತಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಗೌರವಕ್ಕೆ ಪಾತ್ರವಾಗುತ್ತಿರುವುದು ಸಂತಸ ಎನಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ಕಳೆದ 21 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಗೋವುಗಳ ರಕ್ಷಣೆ ನಮ್ಮೆಲರ ಹೊಣೆಯಾಗಿದೆ. ಸರ್ವ ಧರ್ಮವರೂ ಒಗ್ಗೂಡಿ ಹಾಗೂ ಜಾತ್ಯಾತೀತವಾಗಿ ಹಬ್ಬವನ್ನು ನಡೆಸಿತ್ತಿದ್ದೇವೆ. ಹಲವು ಅಡ್ಡಿ ಆತಂಕಗಳನ್ನು ಹೊರತು ಪಡಿಸಿ ಗಣೇಶೋತ್ಸವ ನಡೆಸುತ್ತಿದ್ದೇವೆ. ನಮ್ಮ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ, ಪುರಸಭೆ, ಸಾರ್ವಜನಿಕರು, ರೈತರು, ವರ್ತಕರು ಸಹಕಾರ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲಿ ಗೋಪಾಲಕ ದ್ಯಾವಪ್ಪ ಗಣತಿ ಅವರನ್ನು ಸನ್ಮಾನಿಸಲಾಯಿತು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ, ಗೋ ಸಂರಕ್ಷಣಾ ಹೋರಾಟ ಸಮಿತಿ ಗೌರವಾಧ್ಯಕ್ಷ ಪ್ರಭಾಕರ್ ಕೆ. ರಾಯ್ಕರ್, ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಉಪಾಧ್ಯಕ್ಷ ದತ್ತಾ ಸೊರಬ, ಖಜಾಂಚಿ ರಾಜೇಂದ್ರ ಜೈನ್, ಸಂಘಟನಾ ಕಾರ್ಯದರ್ಶಿ ಶರತ್ ಸ್ವಾಮಿ, ಸಹಕಾರ್ಯದರ್ಶಿ ನಾಗಪ್ಪ ಜೇಡಗೇರಿ, ನಾಗಪ್ಪ ಬಿದರಗೇರಿ, ಸುರೇಶ್ ಗುಂಡಕಟ್ಟಿ, ವೀರಭದ್ರ, ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಕೃಷ್ಣಮೂರ್ತಿ ಭಾವೆ ಸೇರಿದಂತೆ ಇತರರಿದ್ದರು
21ನೇ ವರ್ಷದ ಗಣೇಶೋತ್ಸವ: ಗೋ ಸಂರಕ್ಷಣೆ, ರೈತರು–ಗೋಪಾಲಕರ ಗೌರವಕ್ಕೆ ಕರೆ
Date:
