Wednesday, September 9, 2026
Wednesday, September 9, 2026

Youth Hostels Association of India ಚಾರಣ ಪ್ರಿಯರೆ, ರಾಣಿಬೆನ್ನೂರು ಸುತ್ತಮುತ್ತಲ ಪರಿಸರಕ್ಕೆ ಬನ್ನಿ.ಯೂತ್ ಹಾಸ್ಟೆಲ್ ನಿಂದ ಚಾರಣ ಆಯೋಜನೆ

Date:


Youth Hostels Association of India
ಸಾಹಸ ಹಾಗೂ ಪರಿಸರ ಪ್ರಿಯರಿಗೆ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಣೆಬೆನ್ನೂರು ‘ಕೃಷ್ಣಮೃಗ ಘಟಕ’ದಿಂದ ವಿಶೇಷ ಅವಕಾಶವೊಂದು ಒದಗಿ ಬಂದಿದೆ.

‘ಬ್ಲ್ಯಾಕ್‌ಬಕ್ – ದಿ ಗೇಟ್‌ವೇ ಟು ನಾರ್ತ್ ಕರ್ನಾಟಕ’ ಹೆಸರಿನಲ್ಲಿ ನಾಲ್ಕು ದಿನಗಳ ರಾಜ್ಯಮಟ್ಟದ ಶೈಕ್ಷಣಿಕ ತರಬೇತಿ ಹಾಗೂ ಚಾರಣ ಶಿಬಿರವನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್ 25ರಿಂದ 28ರವರೆಗೆ ನಡೆಯಲಿರುವ ಈ ಶಿಬಿರವು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ.

ಶಿಬಿರದಲ್ಲಿ ಪ್ರಕೃತಿ, ಪರಿಸರ ಹಾಗೂ ಸಾಹಸ ಚಟುವಟಿಕೆಗಳ ಜೊತೆಗೆ ವಿವಿಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ.

ಶಿಬಿರದ ಮೊದಲ ದಿನವಾದ ಸೆಪ್ಟೆಂಬರ್ 25ರಂದು ಸಂಜೆ 4ರಿಂದ 6 ಗಂಟೆಯೊಳಗೆ ರಾಣೆಬೆನ್ನೂರಿನ ಅಶೋಕ್ ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಓಂ ಆಸ್ಪತ್ರೆ ಬಳಿ ಶಿಬಿರಾರ್ಥಿಗಳು ವರದಿ ಮಾಡಿಕೊಳ್ಳಬೇಕು. ಅಲ್ಲಿಂದ ವಾಹನದ ಮೂಲಕ ಬೇಸ್‌ಕ್ಯಾಂಪ್‌ಗೆ ಕರೆದೊಯ್ಯಲಾಗುತ್ತದೆ.

ಎರಡನೇ ದಿನ ಮಲ್ಲಯ್ಯನ ಬೆಟ್ಟಕ್ಕೆ 12 ಕಿಲೋಮೀಟರ್ ಚಾರಣ ಕೈಗೊಳ್ಳಲಾಗುತ್ತದೆ. ಇದೇ ವೇಳೆ ಇರಾಣಿ ದೇವಸ್ಥಾನ ಹಾಗೂ ಕದರಮಂಡಲಗಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.

Youth Hostels Association of India ಮೂರನೇ ದಿನ ಕೃಷ್ಣಮೃಗ ಅಭಯಾರಣ್ಯ ಹಾಗೂ ಚೌಡಯ್ಯದಾನಪುರ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಬಳಿಕ ದೇವರಗುಡ್ಡದಲ್ಲಿ ಬೆಳದಿಂಗಳ ಚಾರಣ ಆಯೋಜಿಸಲಾಗಿದ್ದು, ಒಟ್ಟು 18 ಕಿಲೋಮೀಟರ್ ಚಾರಣ ಇರಲಿದೆ.

ನಾಲ್ಕನೇ ದಿನ ವಿಶೇಷ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಮಧ್ಯಾಹ್ನದ ಊಟದ ಬಳಿಕ ಶಿಬಿರಾರ್ಥಿಗಳಿಗೆ ಬೀಳ್ಕೊಡುಗೆ ನೀಡಲಾಗುತ್ತದೆ.

ನಾಲ್ಕು ದಿನಗಳ ಈ ಶಿಬಿರಕ್ಕೆ ಪ್ರತಿ ವ್ಯಕ್ತಿಗೆ 6 ಸಾವಿರದ 500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಶಿಬಿರ ಶುಲ್ಕದಲ್ಲಿ ವಾಸ್ತವ್ಯ, ಪೌಷ್ಟಿಕ ಸಸ್ಯಾಹಾರಿ ಊಟ, ಅರಣ್ಯ ಪ್ರವೇಶ ಮತ್ತು ಚಾರಣ ಶುಲ್ಕ, ಸ್ಥಳೀಯ ಸಾರಿಗೆ ಹಾಗೂ ಪರಿಣಿತ ಮಾರ್ಗದರ್ಶಕರ ವೆಚ್ಚ ಒಳಗೊಂಡಿದೆ.

ಶಿಬಿರದಲ್ಲಿ ಭಾಗವಹಿಸಲು ಆಸಕ್ತ ಪರಿಸರ ಹಾಗೂ ಚಾರಣಾಸಕ್ತರು ಸೆಪ್ಟೆಂಬರ್ 12ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಸುಧೀರ್ ಕುರುವತ್ತಿ – 94481 18237, ರೋಹಿತ್ ಅಗರ್ವಾಲ್ – 94498 56960 ಹಾಗೂ ಶಿಲ್ಪಾ ಎಂ. ಸಾವ್ಕಾರ್ – 98458 02364 ಅವರನ್ನು ಸಂಪರ್ಕಿಸಬಹುದಾಗಿದೆ.

ಹಾಗೆಯೇ yhai22k.rnr@gmail.com ಇ-ಮೇಲ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.

ಡಾ. ಮನೋಜ್ ಸಾವುಕಾರ್, ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...