Wednesday, August 26, 2026
Wednesday, August 26, 2026

S.N. Channabasappa ಮನುಷ್ಯ ಜೀವನದ ಭಾಗ.ಆ ಸಾಂಸ್ಕೃತಿಕ ಸೊಬಗು ಜೀವನದಲ್ಲಿ ಅಡಕವಾಗಿರಬೇಕು- ಎಸ್.ಎನ್.ಚನ್ನಬಸಪ್ಪ

Date:

S.N. Channabasappa ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ ಬಸ್ಟ್ಯಾಂಡ್ ಸಮೀಪದಲ್ಲಿರುವ ಈ ಏರಿಯಾದಲ್ಲಿಯೇ ಅಂದು ?ದಸರಾ ಮಹೋತ್ಸವ? ಜರುಗುತಿತ್ತು ಎಂದು ಶಾಸಕ ಎಸ್.ಎನ್ ಚೆನ್ನಬಸಪ್ಪ ತಿಳಿಸಿದರು.

ಅವರು ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ಕುರಿತು ಮಾತಾನಾಡಿ ಮನರಂಜನೆಯು ಮನುಷ್ಯ ಜೀವನದ ಭಾಗವಾಗಿದ್ದು, ಈ ಸಾಂಸ್ಕೃತಿಕ ಸೊಬಗು ನಮ್ಮ ನಿತ್ಯದ ಜೀವನದಲ್ಲಿ ಅಡಕವಾಗಿರಬೇಕೆಂದು ಎಂದು ಅವರು ತಿಳಿಸಿದರು, ಸಣ್ಣ, ಸಣ್ಣ ಪ್ರಯತ್ನದ ಮೂಲಕ ಕಿರುಚಿತ್ರ ರಚಿಸಿದ ಪ್ರಯತ್ನಕ್ಕೆ ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ದ ಎನ್ನುವ ವೇದಿಕೆ ರೂಪಿಸಿ ಉತ್ತೇಜಿಸುವ ಕಾರ್ಯವನ್ನು ‘ಗಾರಾ ಗ್ರೂಪ್ ‘ಸಂಸ್ಥೆ ಮಾಡಲೊರಟಿದ್ದು ನಿಜಕ್ಕೂ ಶ್ಲಾಘನೀಯ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತಾನಾಡಿದ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಎಂ.ಶ್ರೀಕಾಂತ್ ಅವರು ಸಿನಿಮಾ ನಿರ್ಮಾಣ ಎನ್ನುವುದು ಒಂದು ಕಾರ್ಪೋರೆಟ್ ವ್ಯವಸ್ಥೆಯ ಹಿಡಿತದಲ್ಲಿದೆ, ಇತ್ತೀಚೆಗೆ ಈ ಬೆಳವಣಿಗೆಯಿಂದ ಸಣ್ಣ ಬಜೆಟ್ ನಿಂದ ನಿರ್ಮಾಣ ಆಗುವ ಸಿನಿಮಾಗಳು ಪರದಾಡುತ್ತದೆ, ಇಂತಹ ವ್ಯತ್ಯಾಸಗಳನ್ನು ನಾಡಿನ ಜನತೆ ಗಮನಹರಿಸಿದೆ, ಒಳ್ಳೆಯ ಕಥೆಗಳಿರುವ ಸಿನಿಮಾಗಳು ಯಾವುದೇ ಬಜೆಟ್ ಹೊಂದಿರಲಿ ಗೆಲ್ಲಿಸುವ ಮನಸು ಮಾಡಿದೆ, ಇದಕ್ಕೆ ಉದಾಹರಣೆಗಳನ್ನು ಇತ್ತೀಚೆಗಷ್ಟೆ ತೆರೆಕಂಡ ಸಾಕಷ್ಟು ಸಿನಿಮಾಗಳನ್ನು ನೋಡಬಹುದಾಗಿದೆ, ಹೀಗಾಗಿ ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾ ನಿರ್ಮಾಣದ ಬದಲಾವಣೆಗಳು, ಸವಾಲುಗಳಿದ್ದರೂ ಸಹ ಸಣ್ಣ ಪ್ರಯತ್ನಗಳೇ ದೊಡ್ಡ ಗೆಲುವನ್ನು ತಂದುಕೊಡುತ್ತದೆ, ಈ ನಿಟ್ಟಿನಲ್ಲಿ ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ಅಂತಹ ವೇದಿಕೆಗಳು ಸಮಾಜದಲ್ಲಿ ಅತಿ ಹೆಚ್ಚು ರೂಪುಗೊಳಿಸಬೇಕು, ಈ ಮೂಲಕ ಪ್ರೋತ್ಸಾಹಗಳನ್ನು ಮಾಡಿದರೆ ಅವರಿಗೂ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ, ಇಲ್ಲಿ ಅಂತಹ ಪ್ರಯತ್ನ ನಡೆಯುತ್ತಿರುವುದು ಒಳ್ಳೆಯ ಕೆಲಸ ಎಂದು ಎಂ.ಶ್ರೀಕಾಂತ್ ಅವರು ಅಭಿಪ್ರಾಯಿಸಿದರು,

S.N. Channabasappa ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಲೆಮಾರಿ ನಿಗಮದ ಅಧ್ಯಕ್ಷರಾಗಿರುವ ಪಲ್ಲವಿ.ಜಿ ಅವರು ಮಾತಾನಾಡಿ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಅಭಿವೃದ್ದಿಗಾಗಿ ಪ್ರಪ್ರಥಮ ಭಾರಿಗೆ ರಾಜ್ಯ ಸರ್ಕಾರದಿಂದ ‘ಅಲೆಮಾರಿ ನಿಗಮ’ ರಚಿಸಿ ಅದಕ್ಕೆ ಶಿವಮೊಗ್ಗ ಜಿಲ್ಲೆಯ ಹೆಣ್ಣು ಮಗಳಾದ ನನಗೆ ಪ್ರಥಮ ಅಧ್ಯಕ್ಷೆಯಾಗಿ ನೇಮಕ ಮಾಡಿ ಸಚಿವ ಸ್ಥಾನಮಾನಗಳನ್ನು ನೀಡಿದ್ದಾರೆ, ಈ ಒಂದು ಅವಕಾಶವನ್ನು ಉಪಯೋಗಿಸಿಕೊಂಡು, ಇಂತಹ ಸಮುದಾಯಗಳ ಸಾಮಾಜಿಕ ನ್ಯಾಯ ಸಮ್ಮತಕ್ಕಾಗಿ ಅನೇಕತೆಯಲ್ಲಿ ಹೋರಾಟ ನಡೆಸುತ್ತಿದ್ದೇನೆ ಎಂದರು, ಇನ್ನೂ ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ಎಂದು ಆಹ್ವಾನಿಸಿದಾಗ, ಇದಕ್ಕೆ ತಪ್ಪಿಸಬಾರದು ಭಾಗವಹಿಸಲೇ ಬೇಕು ಎಂದು ನಿರ್ಧರಿಸಿದ್ದೆ ಏಕೆಂದರೆ ನಾನು ಕೂಡ ಕಲಾವಿದರ ಮಗಳು, ನನ್ನ ತಂದೆಯು ಕೂಡ ರಂಗಕರ್ಮಿಗಳಾಗಿ ಸಾಕಷ್ಟು ವರ್ಷಗಳ ಸೇವೆ ಸಲ್ಲಿಸಿದ್ದಾರೆ, ಹೀಗಾಗಿ ಈ ಚಿತ್ರೋತ್ಸವಕ್ಕೆ ಬಂದಿದ್ದೇನೆ, ನಿಜಕ್ಕೂ ಇಂತಹ ವೇದಿಕೆಗಳು ಕಲಾವಿದರ ಜಗತ್ತಿಗೆ ಅವಶ್ಯಕವಾಗಿದೆ ಎಂದರು ಹಾಗೂ ?ಗಾರಾ ಗ್ರೂಪ್? ಸಂಸ್ಥೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ದಲ್ಲಿ ಹತ್ತು ಚಿತ್ರಗಳ ಟ್ರೈಲರ್ ಬಿಡುಗಡೆಗೊಳಿಸಲಾಯಿತು, ಪೂರ್ವ ಪೂರ್ಣ ಚಿತ್ರದ ವೀಕ್ಷಣೆಯಂತೆ ಅಂತಿಮ ತಿರ್ಪುದಾರರಾದ ಸ್ಯಾಂಡಲ್‌ವುಡ್‌ನ ಸಾಹಸ ನಿರ್ದೇಶಕರಾದ ಡಿಫರೆಂಟ್ ಡ್ಯಾನಿ, ಸಿನಿಮಾ ನಿರ್ದೇಶಕರಾದ ಯಶೋಧರ್, ನಟ ರಘುರಾಜ್ ಮಲ್ನಾಡ್, ರಂಗಕರ್ಮಿಗಳು ಹಾಗೂ ವಕೀಲರಾದ ಗೀತಾಮಾನೆ ಸೂಚಿಸಿದ ಎರಡು ಚಿತ್ರಗಳಾದ ‘ಆ ಕ್ಷಣ’ ಕಿರುಚಿತ್ರಕ್ಕೆ ಮೊದಲ ವಿನ್ನರ್ ಟ್ರೋಪಿ ಹಾಗೂ ಸರ್ಟಿಪಿಕೇಟ್, ೫೦೦೦ ನಗದು ಹಣವನ್ನು ನೀಡಲಾಯಿತು, ‘ನಂದಿ’ ಕಿರುಚಿತ್ರಕ್ಕೆ ರನ್ನರ್‌ಅಪ್ ಟ್ರೋಪಿ ಹಾಗೂ ಸರ್ಟಿಪಿಕೇಟ್ ನಗದು ಮೂರು ಸಾವಿರ ಹಣವನ್ನು ನೀಡಿ ಗೌರವಿಸಲಾಯಿತು,

ಉಳಿದ ಕಿರುಚತ್ರಗಳಿಗೆ ಟ್ರೋಪಿ ಹಾಗೂ ಪ್ರಮಾಣಪತ್ರ ನೀಡಲಾಯಿತು, ಬೆಸ್ಟ್ ಬಾಲನಟಿ-೨೦೨೬ರ ಟ್ರೋಪಿಯನ್ನು ಸಂಪ್ರದಾಯ ಕಿರುಚಿತ್ರದ ನಟಿ ಋತು ಸ್ಪರ್ಶಾ ಅವರಿಗೆ ನೀಡಲಾಯಿತು, ಕಾರ್ಯಕ್ರಮದ ಕೊನೆಯಲ್ಲಿ ಮಂಗಳಮುಖಿ ತಾಯಂದಿರಿಗೆ ಶ್ರಾವಣಮಾಸದ ?ಬಾಗಿನ? ಅರ್ಪಿಸಲಾಯಿತು, ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ನಿರೂಪಣೆಯನ್ನು ಪತ್ರಕರ್ತೆ ಚೈತ್ರಾಚಾಯ್ ಅವರು ನಿರ್ವಹಿಸಿದರು. ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ಆಯೋಜನೆ ಮಾಡಿದ ?ಗಾರಾ ಗ್ರೂಪ್? ಸಂಸ್ಥೆಯ ಗಾರಾ.ಶ್ರೀನಿವಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ ಇದೊಂದು ಸಾಂಸ್ಕೃತಿಕ ಹೆಜ್ಜೆಯಾಗಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದವನ್ನು ಈ ಮೂಲಕ ತಿಳಿಸಿದ್ದಾರೆ,

ಹಾಗೂ ಕಳೆದ ೨೧ ವರುಷಗಳಿಂದ ಪತ್ರಿಕಾ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಸೇವೆ, ಸಾಹಿತ್ಯ, ಸಿನಿಮಾ, ಮಾರುಕಟ್ಟೆ ಹೀಗೆ ಬಹುತ್ವ ಹಾದಿಗಳನ್ನ ಒಳಗೊಂಡ ‘ಗಾರಾ ಗ್ರೂಪ್’ ಎಂಬುವ ಸಂಸ್ಥೆಯ ಮೊದಲ ಹೆಜ್ಜೆಯ ಮುನ್ನುಡಿಯಾಗಿ ಹೊಸ ತಲೆಮಾರಿನ ಸಾಂಸ್ಕೃತಿಕ ಪ್ರಯತ್ನಕ್ಕೆ ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ವೇದಿಕೆಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ, ಮುಂದಿನ ವರುಷ ಎರಡನೆಯ ‘ಮಾರ್ನಾಮಿಬೈಲು ಕಿರುಚಿತ್ರೋತ್ಸವ’ ವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮಾಡಲಾಗುತ್ತದೆ ಎಲ್ಲಾ ಕನ್ನಡದ ಮನಸುಗಳು ಹಾರೈಕೆ ಹೀಗೆಯೇ ಇರಲಿ ಎಂದು ಪ್ರಕಟಣೆಯಲ್ಲಿ ಗಾರಾ.ಶ್ರೀನಿವಾಸ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...