Sunday, August 23, 2026
Sunday, August 23, 2026

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

Date:

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು, ಸಾಗರ ತಾಲೂಕಿನಲ್ಲಿ ನಡೆದ ‘ಉಳುವವನೇ ಹೊಲದೊಡೆಯ’ ಹೋರಾಟ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್. ಜಯಂತ್ ಹೇಳಿದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನಡೆಸುತ್ತಿರುವ ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗೇಣಿ ಪದ್ಧತಿ ಹೋರಾಟದ ಕುರಿತ ಎರಡು ಖಂಡಗಳ ಕಾದಂಬರಿಯ ಕುರಿತು ಪ್ರಶಿಕ್ಷಣಾರ್ಥಿಗಳೊಂದಿಗೆ ನಡೆದ ಮುಖಾಮುಖಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಾಲೀಕರಿಂದ ಉಳುವವನಿಗೆ ಜಮೀನು ದೊರಕಿಸಿಕೊಟ್ಟ ಕೀರ್ತಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಲ್ಲಬೇಕು. ರೈತರು ಅವರ ಕೊಡುಗೆಯನ್ನು ಸದಾ ಸ್ಮರಿಸಬೇಕು ಎಂದು ಜಯಂತ್ ಹೇಳಿದರು.

ಹಿಂದಿನ ಕಾಲದಲ್ಲಿ ಜಮೀನು ಮಾಲೀಕರು ಸಣ್ಣ ಖಂಡುಗದಲ್ಲಿ ಬೀಜದ ಭತ್ತವನ್ನು ಅಳತೆ ಮಾಡಿ ರೈತರಿಗೆ ನೀಡುತ್ತಿದ್ದರು. ರೈತರು ಬೆಳೆ ಬೆಳೆದ ಬಳಿಕ ಅದಕ್ಕಿಂತ ಹೆಚ್ಚಿನ ಪ್ರಮಾಣದ ಧಾನ್ಯವನ್ನು ದೊಡ್ಡ ಖಂಡುಗದಲ್ಲಿ ಅಳತೆ ಮಾಡಿ ಮಾಲೀಕರಿಗೆ ನೀಡಬೇಕಾಗಿತ್ತು. ಬೆವರು ಸುರಿಸಿ ಬೆಳೆದ ಧಾನ್ಯವನ್ನು ಸರಿಯಾಗಿ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ರೈತರು ಭೂಮಾಲೀಕರಿಂದ ತೊಂದರೆ ಅನುಭವಿಸುತ್ತಿದ್ದರು. ಇದರಿಂದ ರೈತರು ಅರೆಹೊಟ್ಟೆಯ ಜೀವನ ನಡೆಸುವ ಪರಿಸ್ಥಿತಿ ಇತ್ತು. ಇಂತಹ ಸಂಕಷ್ಟದ ಜೀವನದಿಂದ ರೈತರನ್ನು ಹೊರತರುವಲ್ಲಿ ಕಾಗೋಡು ಸತ್ಯಾಗ್ರಹ ಮಹತ್ವದ ಪಾತ್ರ ವಹಿಸಿತು ಎಂದರು.

ಗೇಣಿ ಪದ್ಧತಿ ವಿರುದ್ಧ ನಡೆದ ಹೋರಾಟಕ್ಕೆ ರಾಷ್ಟ್ರಮಟ್ಟದ ನಾಯಕರಾದ ಡಾ. ರಾಮಮನೋಹರ್ ಲೋಹಿಯಾ, ಜೆ.ಪಿ. ಹಾಗೂ ಗೋಪಾಲಗೌಡ ಸೇರಿದಂತೆ ಹಲವರು ಬೆಂಬಲ ನೀಡಿದ್ದರು. ಸುಮಾರು 22 ವರ್ಷಗಳ ಹೋರಾಟದ ಬಳಿಕ ರೈತರ ಕನಸು ನನಸಾಗಿ, ಗೇಣಿ ಭೂಸ್ವಾಧೀನ ಮಸೂದೆ ಜಾರಿಗೆ ಬಂದಿತು. ಹೆಚ್.ಎಲ್. ವೀರಭದ್ರಪ್ಪಗೌಡರು, ಒಡೆಯರ್ ಸೇರಿದಂತೆ ಅನೇಕ ಮಹನೀಯರು ತಮ್ಮ ಒಡೆತನದಲ್ಲಿದ್ದ ನೂರಾರು ಎಕರೆ ಭೂಮಿಯನ್ನು ಸ್ವಯಂಪ್ರೇರಣೆಯಿಂದ ರೈತರಿಗೆ ಬಿಟ್ಟುಕೊಟ್ಟು ಅವರ ಜೀವನಕ್ಕೆ ಆಸರೆಯಾದರು ಎಂದು ಸ್ಮರಿಸಿದರು.

D. Devaraj Arasu ಕಾಯ್ದೆಯನ್ನು ಜನರಿಗೆ ತಲುಪಿಸಿ, ರೈತರಿಗೆ ಜಮೀನಿನ ಮಾಲೀಕತ್ವ ದೊರಕಿಸಿಕೊಡುವ ಕಾರ್ಯವೂ ಮತ್ತೊಂದು ಹೋರಾಟವಾಗಿತ್ತು. ಇಂತಹ ಹೋರಾಟಗಳ ಇತಿಹಾಸವನ್ನು ನಿರಂತರವಾಗಿ ನೆನಪಿಸಿಕೊಳ್ಳಬೇಕು. ಆಗ ಮಾತ್ರ ಇತಿಹಾಸವನ್ನು ಅರಿತು ಮುಂದಿನ ಪೀಳಿಗೆ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಜಯಂತ್ ಹೇಳಿದರು.

ತಾವು ಕೂಡ ಈ ಹೋರಾಟದಲ್ಲಿ ಹಲವು ನಾಯಕರೊಂದಿಗೆ ಭಾಗವಹಿಸಿ ರೈತರಿಗೆ ನೆರವು ನೀಡಿದ್ದೇ ತಮ್ಮ ಹೋರಾಟದ ಪ್ರಮುಖ ಯಶಸ್ಸು ಎಂದು ಅವರು ತಿಳಿಸಿದರು.

ರೈತರ ಬವಣೆ ಕುರಿತು ಬಿ. ಸ್ವಾಮಿರಾವ್‌ರಿಂದ ಮಾಹಿತಿ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೊಸನಗರ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ ನಿಕಟಪೂರ್ವ ವಿಧಾನಸಭಾ ಸದಸ್ಯ ಹಾಗೂ ಗೇಣಿ ಪದ್ಧತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಬಿ. ಸ್ವಾಮಿರಾವ್, ತಾವು ಹೋರಾಟದ ಸಂದರ್ಭದಲ್ಲಿ ಅನುಭವಿಸಿದ ಕಷ್ಟಗಳು, ಬಡ ಗೇಣಿ ರೈತರ ಬವಣೆ ಹಾಗೂ ಭೂಮಾಲೀಕರ ಆಳ್ವಿಕೆಯ ಕಾಲದಲ್ಲಿ ನಡೆದ ಘಟನೆಗಳ ಕುರಿತು ವಿವರಿಸಿದರು.

ಕಾಯ್ದೆ ಜಾರಿಗೆ ಬಂದ ನಂತರ ಅದನ್ನು ರೈತರಿಗೆ ತಲುಪಿಸಲು ನಡೆಸಿದ ಸಾಹಸ ಕಾರ್ಯಗಳ ಬಗ್ಗೆಯೂ ಅವರು ವಿಸ್ತೃತವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಂ.ಡಿ.ಎಫ್. ಪರವಾಗಿ ಅಧ್ಯಕ್ಷ ಬಿ.ಆರ್. ಜಯಂತ್, ಬಿ. ಸ್ವಾಮಿರಾವ್ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು.

ಪುಸ್ತಕದ ಕುರಿತು ಮಾಹಿತಿ

ಪುಸ್ತಕದ ಕುರಿತು ಡಾ. ಅನ್ನಪೂರ್ಣ ಹೆಚ್., ಕ್ಷೇತ್ರ ಸಮನ್ವಯಾಧಿಕಾರಿ, ಲೇಖಕರ ಪರಿಚಯ ಹಾಗೂ ಕಾದಂಬರಿಯಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಉಡುಪಿ ಜಿಲ್ಲೆಯ ದಾಖಲೆಗಳ ಉಪನಿರ್ದೇಶಕ ರವೀಂದ್ರ, ಕಾಡಾ ನಿಗಮದ ಮುಖ್ಯ ಲೆಕ್ಕಾಧಿಕಾರಿ ಸುದರ್ಶನ ಕೋಣೆ ಹೊಸೂರು, ಹಸೆಚಿತ್ರ ಕಲಾವಿದ ಚಂದ್ರಶೇಖರ ಸಿರಿ, ರೈತ ಹೋರಾಟಗಾರ ಈಶ್ವರ ನಾಯ್ಕ್ ಕುಗ್ವೆ, ಎಂ.ಡಿ.ಎಫ್. ಕೋಶಾಧಿಕಾರಿ ಕೆ. ವೆಂಕಟೇಶ್ ಕವಲಕೋಡು ಹಾಗೂ ಪುಸ್ತಕದ ಲೇಖಕ ಶ್ರೀಧರ ಕೆ.ಎ. ಭಾಗವಹಿಸಿದ್ದರು.

ಪುಸ್ತಕವನ್ನು 75 ಪ್ರಶಿಕ್ಷಣಾರ್ಥಿಗಳು ಅಧ್ಯಯನ ಮಾಡಿ, ಅದರ ಕುರಿತು ಲೇಖನ ಬರೆದಿದ್ದರು. ಈ ಪೈಕಿ ಉತ್ತಮ ಐದು ಲೇಖನಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಜಿ.ವಿ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿಲ್ಪಾ ವಿ.ಎನ್. ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಹರ್ಷಿತಾ, ಸಿಂದು, ಶ್ವೇತಾ ಹಾಗೂ ಸಂಗಡಿಗರು ರೈತ ಗೀತೆ ಹಾಡಿದರು. ಸಿಂದುಜಿ ಸ್ವಾಗತಿಸಿದರು. ವಿನುತ ವಂದಿಸಿದರು. ಲಿಖಿತ್ ಹಾಗೂ ಸಿಂಚನ ನಿರೂಪಣೆ ನೆರವೇರಿಸಿದರು.
[1:21 pm, 23/8/2026] Anjum Keelambi: ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.
[1:22 pm, 23/8/2026] Anjum Keelambi: 09
[1:22 pm, 23/8/2026] Anjum Keelambi: ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚುತ್ತಿದ್ದ ಮೂವರು ಖದೀಮರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಮಾನ್, ಮೊಹಮ್ಮದ್ ಶೆಹಜಾನ್ ಹಾಗೂ ಹೇಮಂತ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಸಾರ್ವಜನಿಕರಿಗೆ ಬೆದರಿಕೆ ಹಾಕಿ, ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್‌ಗಳನ್ನು ದೋಚಿದ್ದರು. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ₹30,500 ನಗದು, ಎರಡು ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ತುಂಗಾನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಗುರುರಾಜ್ ಕೆ.ಟಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

Madhu Bangarappa ಮುಂದಿನ ಎರಡುವರ್ಷಗಳಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣದ ಉದ್ದೇಶವಿದೆ- ಮಧು ಬಂಗಾರಪ್ಪ.

Madhu Bangarappa ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ...