ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಮತ್ತು ಉತ್ತಮ ಆರೋಗ್ಯಕ್ಕಾಗಿ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಜಂತು ಹುಳು ನಿವಾರಣಾ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ನಟರಾಜ್ ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಮಿಳಘಟ್ಟ ಸರ್ಕಾರಿ ಪ್ರೌಢಶಾಲೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟಿçÃಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ಮಕ್ಕಳಿಗೆ ಮಾತ್ರೆ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಂತು ಹುಳುಗಳ ಸೋಂಕಿನಿAದ ದೇಹವು ಪೋಷಕಾಂಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದೇ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಹಾಗೂ ಕಲಿಕೆಯಲ್ಲಿ ಹಿಂದುಳಿಯುವಿಕೆ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡಲಾಗುವ ಆಲ್ಬೆಂಡಜೋಲ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.
ಹಾಗೂ ಸ್ವಚ್ಚತೆಗೆ ಬಹಳ ಮಹತ್ವ ನೀಡಬೇಕು. ಊಟ ಮಾಡುವ ಮೊದಲು ಮತ್ತು ಶೌಚಾಲಯ ಬಳಕೆಯ ನಂತರ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ಮಣ್ಣಿನ ಮೂಲಕ ಜಂತು ಹುಳುಗಳು ದೇಹ ಪ್ರವೇಶಿಸುವುದನ್ನು ತಡೆಯಲು ಮನೆ ಹೊರಗಡೆ ಅಥವಾ ಮಣ್ಣಿನಲ್ಲಿ ಆಟವಾಡುವಾಗ ಕಡ್ಡಾಯವಾಗಿ ಕಾಲುಗಳಿಗೆ ಚಪ್ಪಲಿ ಧರಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮುನ್ನ ಚೆನ್ನಾಗಿ ತೊಳೆಯಬೇಕು ಹಾಗೂ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಆರ್ಸಿಹೆಚ್ಓ ಡಾ.ಓ.ಮಲ್ಲಪ್ಪ ಮಾತನಾಡಿ, ಮಣ್ಣಿನ ಮೂಲಕ ಹರಡುವ ಜಂತು ಹುಳುಗಳ ಸೋಂಕಿನಿAದ ಪ್ರಪಂಚದಾದ್ಯAತ 150 ಕೋಟಿ ಹಾಗೂ ಭಾರತದಲ್ಲಿ 22 ಕೋಟಿ ಜನರು ಬಾಧಿತರಾಗುತ್ತಿದ್ದಾರೆ. 2015 ರಲ್ಲಿ ಕರ್ನಾಟಕದಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 49 ರಷ್ಟು ಜಂತು ಹುಳು ಬಾಧೆ ಕಂಡುಬಂದಿದೆ. ನಂತರ ಪ್ರತಿವರ್ಷ ವರ್ಷಕ್ಕೆ ಎರಡು ಬಾರಿ ಜಂತು ಹುಳು ನಿವಾರಣಾ ಮಾತ್ರೆ ನೀಡುತ್ತಾ ಬಂದಿದ್ದರಿAದ, ಪ್ರಸ್ತುತ ಸೋಂಕಿನ ಪ್ರಮಾಣ ಶೇ. 0.22 ಕ್ಕೆ ಇಳಿಕೆಯಾಗಿದೆ.
ಸಾಮಾನ್ಯವಾಗಿ ವೈಯಕ್ತಿಕ ಸ್ವಚ್ಛತೆ ಇಲ್ಲದಿರುವುದು, ಬಯಲು ಮಲವಿಸರ್ಜನೆ, ಬರಿಗಾಲಿನಲ್ಲಿ ನಡೆಯುವುದು ಹಾಗೂ ಕಲುಷಿತ ನೀರು ಮತ್ತು ಆಹಾರದಿಂದ ಈ ಸೋಂಕು ಹರಡುತ್ತದೆ. ಇದನ್ನು ತಡೆಗಟ್ಟಲು ಕಾಲಕಾಲಕ್ಕೆ ಉಗುರುಗಳನ್ನು ಕತ್ತರಿಸಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಶೌಚಾಲಯವನ್ನು ಬಳಸಬೇಕು ಹಾಗೂ ಕಾಲಿಗೆ ಚಪ್ಪಲಿ ಧರಿಸಬೇಕು. ಶೌಚಾಲಯ ಬಳಕೆಯ ನಂತರ ಮತ್ತು ಊಟಕ್ಕೆ ಮೊದಲು ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಬೇಕು ಎಂದರು.
ಆರೋಗ್ಯ ಇಲಾಖೆಯು 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಆಲ್ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲಿದ್ದು, 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ (1/2) ಮಾತ್ರೆ, 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಸಂಪೂರ್ಣ ಮಾತ್ರೆ ನೀಡಲಿದೆ. ಮಕ್ಕಳು ಮಾತ್ರೆಯನ್ನು ಜಗಿದು/ಚೀಪಿ ನುಂಗಬೇಕು.
2026-27ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 4,17,565 ಮಕ್ಕಳು ನೋಂದಣಿಯಾಗಿದ್ದು ಇಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಶಿಕ್ಷಕರು ಮಾತ್ರೆಗಳನ್ನು ನೀಡಲಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡಿ ಮಾತ್ರೆ ವಿತರಿಸಲಿದ್ದಾರೆ. ಶಾಲೆ, ಅಂಗನವಾಡಿಯಲ್ಲಿ ಬಿಟ್ಟುಹೋದ ಫಲಾನುಭವಿಗಳಿಗೆ ಆಗಸ್ಟ್ 17 ರಂದು ನಡೆಯುವ ಮೋಪ್-ಅಪ್ ರೌಂಡ್ನಲ್ಲಿ ಮಾತ್ರೆ ನೀಡಲಾಗುವುದು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಇಂದು ದೇಶಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲ ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಮಕ್ಕಳು ಶುಚಿತ್ವ, ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕು. ಬೆರಳ ಉಗುರುಗಳನ್ನು ಸಣ್ಣದಾಗಿ ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಯಲು ಮಲ ವಿಸರ್ಜನೆ ಮಾಡಬಾರದು. ಜಂತು ಹುಳುಗಳಿದ್ದರೆ ರಕ್ತಹೀನತೆ, ಅಪೌಷ್ಟಿಕತೆ, ಆಯಾಸ ಮತ್ತು ಗಮನ ಕೊರತೆ ಉಂಟಾಗುತ್ತದೆ. ಆದ್ದರಿಂದ ಎರಡು ಬಾರಿ (ಫೆಬ್ರವರಿ ಮತ್ತು ಆಗಸ್ಟ್) ಈ ಮಾತ್ರೆ ತೆಗೆದುಕೊಳ್ಳಬೇಕು. ಆಗ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮಗೊಂಡು, ಶಾಲೆಯಲ್ಲಿ ವ್ಯಾಸಂಗದ ಕಡೆಗೆ ಆಸಕ್ತಿ ಹೆಚ್ಚುತ್ತದೆ ಎಂದರು.
ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಉಮಾಶಂಕರ್ ಹೆಚ್ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಚ್ಚತೆ ಮತ್ತು ಆರೋಗ್ಯ ಬಹಳ ಮುಖ್ಯವಾಗಿದ್ದು, ಆರೋಗ್ಯ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು ಎಂದ ಅವರು ಇಂದು ಎಲ್ಲ ಮಕ್ಕಳು ಜಂತು ಹುಳು ನಿವಾರಣಾ ಮಾತ್ರೆಯನ್ನು ತಪ್ಪದೇ ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಗಂಗೂಬಾಯಿ, ಊರುಗಡೂರು ವೈದ್ಯಾಧಿಕಾರಿ ಡಾ.ಕಾಂಚನ, ಮಹಿಳಾ ಪ್ರಾಥಮಿಕ ಆತೋಗ್ಯ ಸುರಕ್ಷಾ ಅಧಿಕಾರಿ ಜಯಮ್ಮ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಮಕ್ಕಳೆ! ವಿದ್ಯಾಭ್ಯಾಸದಲ್ಲಿ ಏಕಾಗ್ರತೆ- ಉತ್ತಮ ಆರೋಗ್ಯಕ್ಕಾಗಿ ಜಂತು ಹುಳು ಮಾತ್ರೆ ಸೇವಿಸಿ: ಡಾ.ಕೆ.ನಟರಾಜ್
Date:
