Sunday, August 9, 2026
Sunday, August 9, 2026

ಪೋಷಕರು ಮನೆಯಲ್ಲೇ ಮಕ್ಕಳಿಗೆ ಪುಟ್ಟ ಕಥೆ ಹೇಳಿ,ಮೊಬೈಲ್ ಗೀಳಿನಿಂದ ತಪ್ಪಿಸಿ: ಡಾ.ಹೆಚ್.ಬಿ.ಮಂಜುನಾಥ್

Date:

ಚಿಕ್ಕ ಮಕ್ಕಳ ಮೊಬೈಲ್ ಫೋನ್ ಗೀಳು ತಪ್ಪಿಸಲು ಪೋಷಕರು ಮನೆಗಳಲ್ಲಿ ಪುಟ್ಟ ಪುಟ್ಟ ಕಥೆಗಳನ್ನು ಸ್ವಾರಸ್ಯಕರವಾಗಿ ಹೇಳುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.

ಅವರಿಂದು ದಾವಣಗೆರೆ ನಗರದ ನಿಟುವಳ್ಳಿಯ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಅಖಂಡ ನಾಮಸ್ಮರಣೆ ಹಾಗೂ ಗುರುಚರಿತ್ರೆ ಪಾರಾಯಣ ಕಾರ್ಯಕ್ರಮದ ಉಪನ್ಯಾಸ ನೀಡುತ್ತಾ ಪೋಷಕರು ಇದಕ್ಕಾಗಿ ತಮ್ಮ ಬಾಲ್ಯದಲ್ಲಿ ಓದಿದ ಕೇಳಿದ ಪುಟ್ಟ ಕಥೆಗಳನ್ನು ಪುನಃ ಜ್ಞಾಪಿಸಿಕೊಳ್ಳಬೇಕು ಇಲ್ಲವಾದಲ್ಲಿ ಪಂಚತಂತ್ರ, ರಾಮಾಯಣ ಮಹಾಭಾರತದ ಉಪಖ್ಯಾನಗಳಲ್ಲಿನ ಪುಟ್ಟ ಪುಟ್ಟ ಉಪಕಥೆಗಳು, ಹಳೆಯ ಚಂದಮಾಮ ಬಾಲಮಿತ್ರಗಳ ನೀತಿ ಕಥೆಗಳು, ಅಷ್ಟಾದಶ ಪುರಾಣಗಳಲ್ಲಿನ ಪುಟ್ಟಪುಟ್ಟ ಆದರ್ಶ ಕಥೆಗಳು ಇವುಗಳನ್ನು ಅಂತರ್ಚಾಲಗಳ ಮೂಲಕ ಪೋಷಕರು ಮೊದಲು ಓದಿಕೊಂಡು ಮಕ್ಕಳಿಗೆ ಅವುಗಳನ್ನು ಹೇಳಬೇಕು, ಹೀಗೆ ಮಾಡುವುದರಿಂದ ಪೋಷಕರಿಗೂ ತಮ್ಮ ಜ್ಞಾಪಕ ಶಕ್ತಿ ಪುನರಾವರ್ತನೆ ಆಗುತ್ತದೆ ತಮ್ಮ ಬಾಲ್ಯವೂ ನೆನಪಾಗುತ್ತದೆ ಮಕ್ಕಳೊಂದಿಗಿನ ಬಾಂಧವ್ಯವೂ ವೃದ್ಧಿಯಾಗುತ್ತದೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆ, ಕಥೆಗಳ ಮೂಲಕ ವಿವರಿಸಿದರು.

ಭಗವನ್ನಾಮ ಸ್ಮರಣೆಯು ಬದುಕಿಗೆ ಭರವಸೆಯನ್ನು ನೀಡಿದರೆ ಗುರುಚರಿತ್ರೆ ಪಾರಾಯಣವು ಬದುಕಿಗೆ ಸನ್ಮಾರ್ಗವನ್ನು ತೋರಿಸುತ್ತದೆ ಎಂದರು.
ಉಪನ್ಯಾಸಕ ಡಾ.ಎಚ್.ಬಿ.ಮಂಜುನಾಥರನ್ನು ಶ್ರೀ ಶಿವಚಿದಂಬರ ಸೇವಾ ಸಂಘದ ಉಮೇಶ್ ಕುಲಕರ್ಣಿ, ವಿಜಯಕುಮಾರ ಜೋಶಿ,ಸೋಮನಾಥ ಕುಲಕರ್ಣಿ, ವಿಶ್ವನಾಥ ದೀಕ್ಷಿತ್, ವಿನಾಯಕ ಕುಲಕರ್ಣಿ ಮುಂತಾದವರು ಫಲಪ್ರಸಾದದೊಂದಿಗೆ ಸನ್ಮಾನಿಸಿ ಗೌರವಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ತೀರ್ಥಹಳ್ಳಿ ಬಳಿ ಗುಡ್ಡ ಕುಸಿತದಿಂದ ಸಾವಿನ ಅವಘಡ: ಸಚಿವ ಮಧು ಬಂಗಾರಪ್ಪ ಮೌಖಿಕ ಪರಿಶೀಲನೆ, ಪರಿಹಾರಕ್ಕೆ ಶೀಘ್ರ ಕ್ರಮ

Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ...

Madhu Bangarappa ಗ್ರಾಮೀಣರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮನವರಿಕೆ ಮಾಡಿ, ಹೆಚ್ಚಿನ ಜನಕ್ಕೆ ಕೆಲಸ ನೀಡಿ- ಮಧು ಬಂಗಾರಪ್ಪ

Madhu Bangarappa ಬರಗಾಲದ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ...

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...