Thursday, September 24, 2026
Thursday, September 24, 2026

ಸಮಾಜದ ಒಳಿತು ಮತ್ತು ಅಗತ್ಯವುಳ್ಳವರಿಗೆ ಸಹಾಯ ನೀಡುವುದೇ ಸ್ಕಾರ್ಫ್ ದಿನಾಚರಣೆ ಉದ್ದೇಶ-ಆರ್.ಎಂ.ಜಗದೀಶ್

Date:

ಆಚಾರ್ಯ ತುಳಸಿ ನ್ಯಾಶನಲ್ ಕಾಲೇಜಿನಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆಯನ್ನು ಧ್ವಜ ಹಾರಿಸುವ ಮೂಲಕ ಆಚರಿಸಲಾಯಿತು.

ಈ ದ್ವಜಾರೋಹಣ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಮಮತಾ.ಪಿ.ಆರ್ ಹಾಗೂ ವಿಶೇಷ ಅಧಿಕಾರಿಗಳಾದ ಆರ್.ಎಂ.ಜಗದೀಶ್ ಹಾಗೂ ಉಪನ್ಯಾಸಕ ವರ್ಗದವರು ರೋವರ್ ಮತ್ತು ರೇಂಜಸ್ ನ ಎಲ್ಲಾ ಸದಸ್ಯರು ಸೇರಿಕೊಂಡು ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.

ಸ್ಕಾರ್ಫ್ ಎಂಬುದು ಕೇವಲ ಒಂದು ಬಟ್ಟೆಯಲ್ಲ ಅದು ಶಿಸ್ತು ಸೇವೆ ನಾಯಕತ್ವ ದೇಶಭಕ್ತಿ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿದೆ ಎಂದು ತಿಳಿಸಲಾಯಿತು ಸಮಾಜದ ಒಳಿತಿಗಾಗಿ ಸದಾ ಸಿದ್ಧರಾಗಿರಬೇಕು. ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಹಾಗೂ ಸ್ಕಾರ್ಫ್ ಡೇ ಆಚರಣೆಯ ಉದ್ದೇಶವನ್ನು ಸವಿಸ್ತಾರವಾಗಿ ವಿವರಿಸಲಾಯಿತು.

ಈ ಕಾರ್ಯಕ್ರಮವನ್ನು ಸ್ಕಾರ್ಫ್ ಧರಿಸುವ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನೆಯ ನಂತರ ಮುಖ್ಯ ಅತಿಥಿಗಳಾದ ವರುಣ್ ಎಂ ಇವರು ರೋವರ್ಸ್ ಮತ್ತು ರೇಂಜರ್ಸ್ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಮತ್ತೋರ್ವ ಅತಿಥಿಗಳಾದ ಮಹೇಶ್ ಕೆ ಎಸ್ ಇವರು ಕಾಲೇಜಿನ ರೋವರ್ಸ್ ಮತ್ತು ರೇಂಜಸ್ ನಾಯಕರಿಗೆ ಬ್ಯಾಡ್ಜ್ ಗಳನ್ನು ನೀಡಿ ಗೌರವಿಸಿದರು

ಸಭೆಯ ಅಧ್ಯಕ್ಷತೆಯನ್ನು ಪ್ರಾಸಿಸ್ ಆಂದೋನಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವರುಣ್ ಎಂ., ವೈಸ್ ಪ್ರೆಸಿಡೆಂಟ್ ಕಮಿಟಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಶಿವಮೊಗ್ಗ ಹಾಗೂ ಮತ್ತೋರ್ವ ಮುಖ್ಯ ಅತಿಥಿಗಳಾದ ಮಹೇಶ್ ಕೆ.ಎಸ್ ಸಿಎಂಎಸ್ ಆಪರೇಟರ್ ಮಿನಿಸ್ಟ್ರಿ ಆಫ್ ರೈಲ್ವೇ ಶಿವಮೊಗ್ಗ ಲೀಡರ್ ಆದಂತಹ ಹಾಗೂ ಕಾಲೇಜಿನ ರೇಂಜರ್ಸ್ ರೋವರ್ಸ್ ಲೀಡರ್ ಆದಂತಹ ಸತಿಭಾರತಿ ದಯಾನಂದ ಹಾಗೂ ವಾಣಿಜ್ಯ ಉಪನ್ಯಾಸಕರಾದ ಸೌಪರ್ಣಿಕಾ, ಐಕ್ಯೂಐಸಿ ಕೋ-ಆರ್ಡಿನೇಟರ್ ಅನುಪಮ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...