Thursday, September 17, 2026
Thursday, September 17, 2026

ಗರ್ಭಿಣಿಯರು ವೈದ್ಯಕೀಯ ಸಲಹೆ ಪಾಲಿಸಬೇಕು- ಪ್ರವೀಣ್ ಜವಳಿ

Date:

ಜುಲೈ ಮಾಸವನ್ನು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ತಾಯಿ ಮತ್ತು ಮಗುವಿನ ಆರೈಕೆಗೆ ನಿಗದಿಪಡಿಸಿದ್ದು, ಅದರಂತೆ ಸುಮಾರು ಅರವತ್ತು ಗರ್ಭಿಣಿಯರಿಗೆ ಕ್ಲಬ್ ವತಿಯಿಂದ ಪ್ರೋಟೀನ್ ಕಿಟ್ ಮತ್ತು ಮಾರ್ಗದರ್ಶನ ಕೈಪಿಡಿ ನೀಡಲಾಗು ತ್ತಿದೆ. ಆದ್ದರಿಂದ ವೈದ್ಯಕೀಯ ಸಲಹೆ ಪಾಲಿಸುವಂತೆ ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಯು ತಾಲೂಕು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮವನ್ನು ವಿದ್ಯಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಮಾಹಿತಿ ಕಾರ್‍ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಪಿಡುವ ಮಹತ್ವವನ್ನು ಜೀಜಬಾಯಿ ಶಿವಾಜಿ, ಸುಭದ್ರ ಅಭಿಮನ್ಯು ವಿನ ಪ್ರಸಂಗಗಳ ಉದಾಹರಣೆಗಳಿಂದ ವಿವರಿಸಿದರು. ಗರ್ಭದಿಂದಲೇ ಮಗುವಿಗೆ ಸಂಸ್ಕಾರ ನೀಡುವಲ್ಲಿ ತಾಯಿಯ ಪಾತ್ರವನ್ನು ವಿವರಿಸಿ ತಮ್ಮ ಕುಟುಂಬಕಷ್ಟೆ ಅಲ್ಲದೆ ಸಮಾಜಕ್ಕೆ ಉತ್ತಮ ಸಂತಾನ ಕೊಡುವ ಮಹತ್ತರ ಆಶಯ ವ್ಯಕ್ತಪಡಿಸಿದರು.
ಡಾ. ಉಮಾದೇವಿಯವರು ಗರ್ಭಿಣಿಯರ ಆರೋಗ್ಯದ ಬಗ್ಗೆ ಸವಿವರವಾಗಿ ಸಲಹೆ ನೀಡಿದರು. ಗರ್ಭಾವಸ್ಥೆಯಲ್ಲಿ ಆಹಾರ, ವಿಶ್ರಾಂತಿ ಮತ್ತು ನಿಯಮಿತ ತಪಾಸಣೆಯ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ವಿಶೇಷ ಪ್ರೋಟೀನ್ ಪೌಷ್ಟಿಕಾಂಶ ಕಿಟ್ ಪಡೆದ ಗರ್ಭಿಣಿಯರು ಶಿವಮೊಗ್ಗ ಜ್ಯುಬಿಲಿ ರೋಟರಿ ಕ್ಲಬ್ ನ ಈ ಮಾನವೀಯ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಬಿ.ಎಸ್. ಅಶ್ವಥ್ ಅವರು ಸೇವೆಯ ಮಹತ್ವ ಮತ್ತು ರೋಟರಿ ಸಾಧನೆಯನ್ನು ವಿವರಿಸಿದರು. ಕಾರ್ಯದರ್ಶಿ ನವೀನ್ ಕುಮಾರ್ ವಂದಿಸಿದರು. ಶ್ರೀಮತಿ ಚೇತನ ಜವಳಿ, ಭಾರದ್ವಾಜ್, ವೆಂಕಟರಮಣ ಭಟ್, ರೊ. ವಾಗೀಶ್, ಱರೊ. ಸುಧಾಕರ್, ಉಮಾದೇವಿ, ರಾಜ ಶೇಖರ್, ರೊ. ರಾಘವೇಂದ್ರ, ಎಸ್.ಆರ್. ಲಕ್ಷ್ಮೀ ನಾರಾಯಣ, ಅವಿನಾಶ್ ಲಕ್ಷ್ಮೀನಾರಾಯಣ, ರೊ. ಹರೀಶ್ ಪಟೇಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಮತ್ತು ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ತಾಯಂದಿರು, ಸಾರ್ವಜನಿಕರು ಉಪಸ್ಥಿತರಿದ್ದರು.
✒️

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...