Sunday, August 2, 2026
Sunday, August 2, 2026

ಯುವಕರು ಮಾರ್ಗದರ್ಶನ ಬಯಸದೇ ಹೋರಾಟಕ್ಕೆ ಪ್ರವೇಶ:ಅಧ್ಯಾಪಕರಿಗೆ ದೊಡ್ಡ ಸವಾಲಾದ ಕಾಲಘಟ್ಟ:ಮಾಜಿ ಸಚಿವ ಮಾಧುಸ್ವಾಮಿ

Date:

ಯುವಕರು ಮಾರ್ಗದರ್ಶನ ಬಯಸದೇ ಹೋರಾಟಗಳಿಗೆ ಧುಮುಕುತ್ತಿರುವ ಈ ಕಾಲಘಟ್ಟದಲ್ಲಿ ಅಧ್ಯಾಪಕರು ಅವರಿಗೆ ಯಾವ ರೀತಿ ಬೋಧಿಸಬೇಕೆನ್ನುವುದೇ ದೊಡ್ಡ ಸವಾಲಾಗಿದೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಾಧ್ಯಾಪಕ ಹಾಗೂ ತುಮಕೂರು ವಿವಿ ನಿಕಟಪೂರ್ವ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಅವರ ಅಭಿನಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥ ‘ಸಹ್ಯಾದ್ರಿ ಶಿಖರ’ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟ ಬದಲಾಗುತ್ತಿದೆ. ಯುವಕರೇ ತುಂಬಿರುವ ಭಾರತದಂತಹ ದೇಶದಲ್ಲಿ ಯುವಕರು ಯಾವ ಮಾರ್ಗದರ್ಶನವನ್ನು ಬಯಸುತ್ತಿಲ್ಲ. ತಮಗೆ ಏನು ಸತ್ಯವೋ ಅದನ್ನು ತಿಳಿದು ಹೋರಾಟಕ್ಕೆ ಯತ್ನಿಸುತ್ತಿದ್ದಾರೆ. ಹಿತವಚನಗಳು ಅವರನ್ನು ತಲುಪಲು ಕಷ್ಟವಾಗುತ್ತಿದೆ. ಉದ್ಯೋಗಗಳನ್ನು ಕಲ್ಪಿಸಲಾಗದ ಕಾಲವಿದು. ಹಾಗಾಗಿ ಯುವಕರಿಂದಲೂ ಕೂಡ ಆಗಾಗ ತಪ್ಪುಗಳು ಆಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ನಮ್ಮ ಬೋಧಕರು ಯುವಕರನ್ನು ಜಾಗೃತಿಗೊಳಿಸುವ ಮಾರ್ಗದರ್ಶನ ಮಾಡುವ ಜಾಣ್ಮೆಯ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಇಂದು ಉದ್ಯಮಿಗಳೇ ದೇಶವನ್ನು ಆಳುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಕೂಡ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಶ್ರಮದ ಜೀವನ ಇವತ್ತು. ಯಾರಿಗೂ ಬೇಡವಾಗಿದೆ. ಕೃಷಿಗೆ ಕಾರ್ಮಿಕರು ಸಿಗುತ್ತಿಲ್ಲ. ಎಲ್ಲರಿಗೂ ಸುಲಭ ಉದ್ಯೋಗ ಬೇಕು. ಇದನ್ನು ಹೇಗೆ ನಿಯಂತ್ರಿಸಬೇಕು ಮತ್ತು ಸಮಾಜದಲ್ಲಿ ಸಮಾನತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವದಾದರೂ ಹೇಗೆ ಎಂಬ ಪ್ರಶ್ನೆಗಳು ನಮ್ಮ ಮುಂದಿವೆ ಎಂದರು.
ಬದುಕು ಒಂದು ನಡಿಗೆ. ಅದು ಎಲ್ಲೋ ಒಂದು ಕಡೆ ನಿಲ್ಲಬೇಕು. ಪ್ರೊ. ಪ್ರಸನ್ನಕುಮಾರ್ ನಿವೃತ್ತರಾಗುತ್ತಿದ್ದಾರೆ. ಅಕಾಡೆಮಿನಲ್ಲಿ ಆಡಳಿತ ಸೋಲುತ್ತದೆ ಎಂಬ ಮಾತಿದೆ. ಆದರೆ, ಪ್ರಸನ್ನಕುಮಾರ್ ಅವರು ಪರೀಕ್ಷಾಂಗ ಕುಲಸಚಿವರಾಗಿ ಒಳ್ಳೆಯ ಆಡಳಿತ ನೀಡಿದವರು. ನಿವೃತ್ತಿ ಜೀವನ ವಿಶ್ರಾಂತಿಯಲ್ಲ, ಅದು ಸಮಾಧಾನಕರ ಸ್ಥಿತಿ. ಸಮಾಜದ ಋಣ ತೀರಿಸಬೇಕಾದ ಸಮಯ. ಜ್ಞಾನದ ಕಿಟಕಿಗಳನ್ನು ಅವರು ಮತ್ತಷ್ಟು ತೆರೆಯಲಿ. ಮಕ್ಕಳ ಜತೆ ಸಂಪರ್ಕ ಇಟ್ಟುಕೊಳ್ಳಿ ಎಂದರು.
ಪ್ರೊ. ಪ್ರಸನ್ನಕುಮಾರ್ ಕೆ. ಅವರ ಅಭಿನಂದನಾ ಗ್ರಂಥ ‘ಸಹ್ಯಾದ್ರಿ ಶಿಖರ’ದ ಕುರಿತು ಮಾತನಾಡಿದ ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಧನಂಜಯ ಬಿ.ಜಿ., ಈ ಕೃತಿಯಲ್ಲಿ ಮೂರು ತಲೆಮಾರಿನ ವ್ಯಕ್ತಿಗಳು ಪ್ರಸನ್ನಕುಮಾರ್ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಅವರಿಗೆ ಮಾತ್ರವಲ್ಲ. ಸಮಗ್ರ ಶಿಕ್ಷಕರಿಗೆ ಸಂದ ಗೌರವವಾಗಿದೆ. ಎಲ್ಲರ ಪ್ರೀತಿ ಗಳಿಸಿರುವ ಅವರು ಸಹ್ಯಾದ್ರಿ ಶಿಖರವೇ ಹೌದು ಎಂದರು.
ಪ್ರ‍್ರಾಸ್ತಾವಿಕವಾಗಿ ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸಿರಾಜ್ ಅಹಮ್ಮದ್, ನಿವೃತ್ತಿ ಎನ್ನುವುದು ಒಂದು ಔಪಚಾರಿಕೆ ಅಷ್ಟೇ. ಇಂತಹ ಕಾರ್ಯಕ್ರಮಗಳು ಶಿಕ್ಷಣದ ಚಿಂತನೆಗಳನ್ನು ಬೆಳೆಸುವಂತಾಗಬೇಕು. ಈಗ ಶಿಕ್ಷಣ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಯುವಕರು ಕೂಡ ಬದಲಾಗುತ್ತಿದ್ದಾರೆ. ಶಿಕ್ಷಣದ ಶಿಖರವನ್ನು ತಲುಪಿಸುವ ಜವಾಬ್ದಾರಿ ಇಂದು ನಮ್ಮ ಮೇಲಿದೆ. ಅಧ್ಯಾಪಕರ ಹುದ್ದೆಗಳು ಸಾಕಷ್ಟು ಖಾಲಿ ಇದ್ದು,. ಅದು ಭರ್ತಿಯಾಗಬೇಕಾಗಿದೆ ಎಂದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಅಭಿನಂದನಾ ಗ್ರಂಥ ‘ಸಹ್ಯಾದ್ರಿ ಶಿಖರ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಯುನೈಟೆಡ್ ಕಿಂಗ್‌ಡA ಯುನಿವರ್ಸಿಟಿಯ ಡಾ. ಶಿಶಾಂಕ್, ಲೋಕಾಸೇವಾ ಆಯೋಗದ ಸದಸ್ಯೆ ಗೀತಾ, ದಸಂಸ ಸಂಚಾಲಕ ಎಂ. ಗುರುಮೂರ್ತಿ, ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಡಾ.ಸಿ.ಹೆಚ್. ಮುರಿಗೇಂದ್ರಪ್ಪ, ಕೃಷಿ ವಿವಿ ಕುಲಪತಿ ಡಾ.ಎಂ.ವಿ. ಧನಂಜಯ, ಸಹ್ಯಾದ್ರಿ ಕಲಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಸೈಯದ್ ಸನಾವುಲ್ಲ. ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ. ಹೆಚ್. ಪ್ರಲ್ಹಾದಪ್ಪ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ನಾಗಾರ್ಜುನ, ಶ್ರೀಮತಿ ಉಮಾ ಪ್ರಸನ್ನಕುಮಾರ್, ಡಾ. ಪ್ರಜ್ವಲ್, ದಯಾಶಂಕರ್, ಸುಬ್ಬಯ್ಯ ಡೆಂಟಲ್ ಕಾಲೇಜ್ ಪ್ರಾಂಶುಪಾಲ ಡಾ. ಸುರೇಶ್ ಬಿ.ಎಸ್. ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ಪ್ರೊ. ಪ್ರಸನ್ನಕುಮಾರ್ ಕೆ ಅವರನ್ನು ಸನ್ಮಾನಿಸಲಾಯಿತು. ಮತ್ತು ಪ್ರಸನ್ನಕುಮಾರ್ ಅವರು ತಮ್ಮ ಗುರುಗಳಾದ ಶೇಖರ್ ಗೌಳೇರ್ ಹಾಗೂ ಜೋಗದ ವೀರಪ್ಪ ಅವರನ್ನು ಸನ್ಮಾನಿಸಿದರು.
ಭಾವನಾ ನಿರೂಪಿಸಿ, ಜಾಹ್ನವಿ ಭಾವಗೀತೆ ಹಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...