Tuesday, July 21, 2026
Tuesday, July 21, 2026

ಎಚ್ಚರಿಕೆ…..ಸಾಗರ ತಾಲ್ಲೂಕಿನ ನಾಡಮಂಚಾಲೆಯ ಹೊಸ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಜುಲೈ 25 ರಂದು ಚಾಲನೆ.! ಕೆಪಿಟಿಸಿಎಲ್ ಪ್ರಕಟಣೆ

Date:

ಸಾಗರ ತಾಲ್ಲೂಕಿನ ನಾಡಮಂಚಾಲೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಬೃಹತ್ ವಿದ್ಯುತ್ ಪ್ರಸರಣ ಮಾರ್ಗಗಳು ಜುಲೈ 25 ಅಥವಾ ಅದರ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಚಾಲನೆಗೊಳ್ಳಲಿವೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ.
​ನಾಡಮಂಚಾಲೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 2×100 MVA, 220/110 KV ಹಾಗೂ 1×10 MVA, 110/11 KV ಶಕ್ತಿ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಮತ್ತು ಉದ್ದೇಶಿತ 220 KV (1.35 ಕಿ.ಮೀ) ಹಾಗೂ 110 KV ಲಿಲೋ (1.08 ಕಿ.ಮೀ) ವಿದ್ಯುತ್ ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 25 ರಿಂದ ಮಾರ್ಗಗಳನ್ನು ಚಾಲನೆಗೊಳಿಸಲಾಗುತ್ತಿದೆ.
ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆಗಳು:
​ಅಪಾಯಕಾರಿ ವಿದ್ಯುತ್ ಮಾರ್ಗಗಳು ಚಾಲನೆಗೊಳ್ಳುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕೆಳಗಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.
​ಗೋಪುರಗಳನ್ನು ಹತ್ತುವುದು ನಿಷೇಧಿಸಲಾಗಿದೆ. ವಿದ್ಯುತ್ ಕಂಬಗಳು ಅಥವಾ ಬೃಹತ್ ಗೋಪುರಗಳನ್ನು (ಟವರ್) ಯಾರು ಹತ್ತಬಾರದು.
​ದನಕರುಗಳನ್ನು ಕಟ್ಟಬಾರದು. ವಿದ್ಯುತ್ ಗೋಪುರಗಳ ಆವರಣದಲ್ಲಿ ಅಥವಾ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು ಅಪಾಯಕಾರಿ.
​ವಸ್ತುಗಳನ್ನು ಎಸೆಯಬಾರದು, ವಿದ್ಯುತ್ ವಾಹಕ ತಂತಿಗಳಿಗೆ ತಗುಲುವಂತೆ ಯಾವುದೇ ವಸ್ತುಗಳು ಅಥವಾ ತಂತಿಗಳನ್ನು ಎಸೆಯಬಾರದು.
ಈ ನಿಯಮಗಳನ್ನು ಮೀರಿ ನಡೆಯುವ ಕೃತ್ಯಗಳಿಂದ ಏನಾದರೂ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಸಾರ್ವಜನಿಕರೇ ನೇರ ಹೊಣೆಗಾರರಾಗಿರುತ್ತಾರೆ. ಉಂಟಾಗುವ ಆಸ್ತಿ-ಪಾಸ್ತಿ ಅಥವಾ ಜೀವ ಹಾನಿಗೆ ಕೆವಿಪ್ರನಿನಿಯು ಯಾವುದೇ ಜವಾಬ್ದಾರಿ ವಹಿಸುವುದಿಲ್ಲ ಹಾಗೂ ಪರಿಹಾರ ನೀಡಲಾಗುವುದಿಲ್ಲ ಎಂದು ಶಿವಮೊಗ್ಗ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...

Rotary Club of Shivamogga ಮಹಿಳಾ ಉದ್ಯಮಿಗಳೆ, ನಿಮ್ಮ ಕನಸುಗಳನ್ನ ಆತ್ಮ ವಿಶ್ವಾಸದಿಂದ ಹಂಚಿಕೊಳ್ಳಿ : ಎನ್.ಗೋಪಿನಾಥ್

Rotary Club of Shivamogga ಆತ್ಮವಿಶ್ವಾಸದಿಂದ ಕನಸುಗಳನ್ನು ಹಂಚಿಕೊಳ್ಳಿ ಎಂದು ರೋಟರಿ...