Keladi Shivappanayaka University of Agricultural ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿ: ಡಾ. ಎಂ. ವಿ. ಧನಂಜಯ
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನೂತನ ಕುಲಪತಿಗಳಾಗಿ ಡಾ. ಎಂ. ವಿ. ಧನಂಜಯ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (Iಅಂಖ-IIಊಖ) ಸಸ್ಯ ತಳಿಅಭಿವೃದ್ಧಿ ವಿಭಾಗದ ಪ್ರಧಾನ ವಿಜ್ಞಾನಿಯಾಗಿರುವ ಡಾ. ಎಂ. ವಿ. ಧನಂಜಯ ಅವರು ಭಾರತದ ಪ್ರಮುಖ ತೋಟಗಾರಿಕಾ ವಿಜ್ಞಾನಿಗಳು, ನಾವೀನ್ಯತೆಕಾರರು ಮತ್ತು ಸಾಂಸ್ಥಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸುಮಾರು ೩೦ ವರ್ಷಗಳ ಸುದೀರ್ಘ ಹಾಗೂ ವಿಶಿಷ್ಟ ಸೇವಾವಧಿಯಲ್ಲಿ, ಅವರು ತೋಟಗಾರಿಕಾ ಸಂಶೋಧನೆ, ಸಸ್ಯ ತಳಿವರ್ಧನೆ, ಬೀಜ ವ್ಯವಸ್ಥೆ, ತಂತ್ರಜ್ಞಾನ ವಾಣಿಜ್ಯೀಕರಣ, ಉದ್ಯಮಶೀಲತೆ ಅಭಿವೃದ್ಧಿ ಮತ್ತು ಸಾಂಸ್ಥಿಕ ನಿರ್ವಹಣೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಇವರ ಈ ಕಾರ್ಯಗಳು ದೇಶಾದ್ಯಂತದ ರೈತರು, ನವೋದ್ಯಮಗಳು (ಸ್ಟಾರ್ಟ್ಅಪ್‌ಗಳು) ಮತ್ತು ತೋಟಗಾರಿಕಾ ಕ್ಷೇತ್ರಕ್ಕೆ ಅಪಾರ ಪ್ರಯೋಜನವನ್ನು ಒದಗಿಸಿವೆ.
ಅವರ ಈ ಮಹೋನ್ನತ ಕೊಡುಗೆಗಳನ್ನು ಗುರುತಿಸಿ, ಅವರಿಗೆ ಪ್ರತಿಷ್ಠಿತ ‘ಡಾ. ಎಂ.ಎಚ್. ಮರಿಗೌಡ ರಾಷ್ಟ್ರೀಯ ದತ್ತಿ ಪ್ರಶಸ್ತಿ’ (೨೦೨೨-೨೩) ಮತ್ತು ‘ಡಾ. ಕಲ್ಲಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿ’ (೨೦೨೩-೨೪) ನೀಡಿ ಗೌರವಿಸಲಾಗಿದೆ. ಸಂಶೋಧನೆ, ಬೋಧನೆ ಮತ್ತು ವಿಸ್ತರಣಾ ಕ್ಷೇತ್ರಗಳಲ್ಲಿನ ಅತ್ಯುತ್ತಮ ಸಾಧನೆಗಾಗಿ ಅವರು ೧೪ ಬಾರಿ ಗೌರವಿಸಲ್ಪಟ್ಟಿದ್ದಾರೆ. ಅಲ್ಲದೆ, ಯುಎಎಸ್ ಬೆಂಗಳೂರು, ಯುಎಎಸ್ ಧಾರವಾಡ, ಯುಎಎಸ್ ರಾಯಚೂರು, ಕೆಎಸ್ಎನ್‌ಯುಎಎಚ್‌ಎಸ್ ಶಿವಮೊಗ್ಗ ಮತ್ತು ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಗೌರವಾನ್ವಿತ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಇವರನ್ನು ಆರು ಬಾರಿ ‘ತಜ್ಞರ ಪರಿಶೀಲನಾ ಸಮಿತಿ’ಗೆ ನಾಮನಿರ್ದೇಶನ ಮಾಡಿದ್ದಾರೆ.
ಡಾ. ಧನಂಜಯ ಅವರು ೧೮ ತೋಟಗಾರಿಕಾ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ್ದಾರೆ. ಇವುಗಳಲ್ಲಿ ಭಾರತದ ಮೊದಲ ‘ಗಮ್ಮಿ ಸ್ಟೆಮ್ ಬ್ಲೈಟ್’ (ಕಾಂಡ ಕೊಳೆ ರೋಗ) ನಿರೋಧಕ ಸೋರೆಕಾಯಿ ತಳಿಯಾದ ‘ಅರ್ಕಾ ಶ್ರೇಯಸ್’, ಅತಿ ಹೆಚ್ಚು ಇಳುವರಿ ನೀಡುವ ಫ್ಲೋರಿಬಂಡಾ ಗುಲಾಬಿ ತಳಿ ‘ಅರ್ಕಾ ಸವಿ’, ಮತ್ತು ಮಹಿಳಾ ಉದ್ಯಮಿಗಳಿಗೆ ಹೊಸ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿರುವ ಮೌಲ್ಯವರ್ಧಿತ ಗುಲಾಬಿ ಚಹಾದ ತಳಿ ‘ಅರ್ಕಾ ಪರಿಮಳ’ ಪ್ರಮುಖವಾಗಿವೆ. ಅವರ ವೈಜ್ಞಾನಿಕ ಸಾಧನೆಗಳಲ್ಲಿ PPಗಿ&ಈಖಂ (ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯ್ದೆ) ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ೫ ತಳಿಗಳು, ಓಃPಉಖ (ರಾಷ್ಟ್ರೀಯ ಸಸ್ಯ ಜೀವರೂಪ ಸಂಪನ್ಮೂಲ್ ಬ್ಯೂರೋ) ನಲ್ಲಿ ನೋಂದಾಯಿಸಲ್ಪಟ್ಟ ೧೯ ಜೀವರೂಪಗಳು (ಜರ್ಮ್ಪ್ಲಾಸಂ) ಸೇರಿವೆ. ಜೊತೆಗೆ ಅವರು ಸುಮಾರು ₹೨೯ ಕೋಟಿ ಮೌಲ್ಯದ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿದ್ದಾರೆ, ಸಿಎಸ್ಆರ್ (ಅSಖ) ಉಪಕ್ರಮಗಳ ಮೂಲಕ ₹೧೨ ಕೋಟಿಗೂ ಹೆಚ್ಚು ಹಣವನ್ನು ಕ್ರೋಢೀಕರಿಸಿದ್ದಾರೆ, ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ೭ ಪುಸ್ತಕಗಳು, ೧೯ ಪುಸ್ತಕದ ಅಧ್ಯಾಯಗಳು, ೧೦೨ ಶೈಕ್ಷಣಿಕ ವೀಡಿಯೊಗಳನ್ನು ಪ್ರಕಟಿಸಿದ್ದಾರೆ ಮತ್ತು ಹಲವಾರು ಎಂ.ಎಸ್ಸಿ. ಹಾಗೂ ಪಿಎಚ್.ಡಿ. ಸಂಶೋಧಕರಿಗೆ ಮಾರ್ಗದರ್ಶನ ನೀಡಿದ್ದಾರೆ.
Keladi Shivappanayaka University of Agricultural ಭಾರತ ಸರ್ಕಾರದ ಓIಆಊI ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್) ನ ಸಿಇಒ (ಅಇಔ) ಆಗಿ, ಡಾ. ಎಂ. ವಿ. ಧನಂಜಯ ಅವರು ಭಾರತದ ಪ್ರಮುಖ ಕೃಷಿ-ನವೋದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಇದು ₹೧೭.೦೫ ಕೋಟಿ ವಹಿವಾಟು ಸಾಧಿಸಿದೆ, ೧೦೦ ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿಗೆ ಬೆಂಬಲ ನೀಡಿದೆ, ೯೩ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದೆ ಮತ್ತು ೩,೫೦೦ ಕ್ಕೂ ಹೆಚ್ಚು ಉದ್ಯಮಿಗಳಿಗೆ ತರಬೇತಿ ನೀಡಿದೆ. ಅಲ್ಲದೆ ಸರ್ಕಾರದ ಮೂಲಕ ₹೧೪ ಕೋಟಿ ಆರ್ಥಿಕ ನೆರವನ್ನು ಒದಗಿಸಿದ್ದು, ₹೭ ಕೋಟಿ ಮೌಲ್ಯದ ಮೂಲಸೌಕರ್ಯವನ್ನು ಸೃಷ್ಟಿಸಿದೆ. ಔಓಆಅ, ಉeಒ, ಹಾಪ್‌ಕಾಮ್ಸ್ (ಊಔPಅಔಒS), ಬಿಗ್‌ಹಾಟ್ (ಃigಊಚಿಚಿಣ), ಐಮ್‌ಕಾರ್ಟ್ (ಂIಒಏAಖಖಿ), ಇಂಡಿಯಾ ಪೋಸ್ಟ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳೊAದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ಥಾಪಿಸಿದೆ. ಇವರ ಈ ಪ್ರಯತ್ನಗಳಿಂದಾಗಿ Iಅಂಖ-IIಊಖ ತಂತ್ರಜ್ಞಾನಗಳು ೬೫,೬೫೮ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದ್ದು, ತಂತ್ರಜ್ಞಾನ ವಾಣಿಜ್ಯೀಕರಣ, ಮಹಿಳಾ ಉದ್ಯಮಶೀಲತೆ ಮತ್ತು ನಾವೀನ್ಯತೆ ಆಧಾರಿತ ಕೃಷಿ ಉದ್ಯಮಗಳನ್ನು ಉತ್ತೇಜಿಸಿದೆ. Iಅಂಖ-IIಊಖ ನ ತರಕಾರಿ ಬೀಜ ಘಟಕದ ನೋಡಲ್ ಅಧಿಕಾರಿಯಾಗಿ, ಅವರು ಆನ್‌ಲೈನ್ ಬೀಜ ಪೋರ್ಟಲ್‌ಗಳು, ಡಿಜಿಟಲ್ ಮಾರ್ಕೆಟಿಂಗ್, ಬೀಜ ವಿತರಣಾ ಯಂತ್ರಗಳು (ವೆಂಡಿAಗ್ ಮೆಷಿನ್), ಸಹಭಾಗಿತ್ವದ ಬೀಜ ಉತ್ಪಾದನೆ ಮತ್ತು ರಾಷ್ಟ್ರೀಯ ಬೀಜ ನಿಗಮ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಭಾರತದ ಸಾರ್ವಜನಿಕ ಬೀಜ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಿದ್ದಾರೆ. ಇದರ ಪರಿಣಾಮವಾಗಿ ೮೪.೯ ಟನ್ ತರಕಾರಿ ಬೀಜಗಳ ಉತ್ಪಾದನೆ ಮತ್ತು ಮಾರಾಟವಾಗಿದ್ದು, ೧.೫೯ ಲಕ್ಷ ತರಕಾರಿ ಕಿಟ್‌ಗಳನ್ನು ವಿತರಿಸಲಾಗಿದೆ ಹಾಗೂ ₹೨೦.೭೩ ಕೋಟಿಗೂ ಹೆಚ್ಚು ಆದಾಯ ಗಳಿಸುವ ಮೂಲಕ ರಾಷ್ಟ್ರೀಯ ಬೀಜ ಭದ್ರತೆಯನ್ನು ಗಣನೀಯವಾಗಿ ಬಲಪಡಿಸಲಾಗಿದೆ.
ಒಬ್ಬ ದಕ್ಷ ಆಡಳಿತಗಾರರಾಗಿ, ಡಾ. ಧನಂಜಯ ಅವರು ರಾಷ್ಟ್ರೀಯ ತೋಟಗಾರಿಕಾ ಮೇಳಗಳನ್ನು (೨೦೨೦, ೨೦೨೧, ೨೦೨೪ ಮತ್ತು ೨೦೨೫), ಅಂತರರಾಷ್ಟ್ರೀಯ ಸಮ್ಮೇಳನಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ಕೃಷಿ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಇವುಗಳ ಮೂಲಕ ತಂತ್ರಜ್ಞಾನ ಪ್ರಸರಣ ಮತ್ತು ರೈತರ ತಲುಪುವಿಕೆಯನ್ನು ಉತ್ತೇಜಿಸುವ ಜೊತೆಗೆ ₹೩.೪೫ ಕೋಟಿ ಪ್ರಾಯೋಜಕತ್ವವನ್ನು (Sಠಿoಟಿsoಡಿshiಠಿs) ಕ್ರೋಢೀಕರಿಸಿದ್ದಾರೆ. ವಿಶೇಷವಾಗಿ, “ಸ್ಟಾರ್ಟ್-ಅಪ್ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾ” ಎಂಬ ವಿಷಯದ ಅಡಿಯಲ್ಲಿ ಹೈಬ್ರಿಡ್ (ಆಫ್‌ಲೈನ್ ಮತ್ತು ವರ್ಚುವಲ್) ಮಾದರಿಯಲ್ಲಿ ನಡೆಸಲಾದ ರಾಷ್ಟ್ರೀಯ ತೋಟಗಾರಿಕಾ ಮೇಳ (ಓಊಈ-೨೦೨೧), ₹೧೦೦.೩೫ ಲಕ್ಷ ಹಣವನ್ನು ಸಂಗ್ರಹಿಸಿತು, ೨೫೭ ತಂತ್ರಜ್ಞಾನಗಳು ಮತ್ತು ೧೧ ಭಾಷೆಗಳಲ್ಲಿ ೨೦೦ ಶೈಕ್ಷಣಿಕ ವೀಡಿಯೊಗಳನ್ನು ಪ್ರದರ್ಶಿಸಿತು. ಇದು ೨೨ ಸಂಸ್ಥೆಗಳು, ೭೨೧ ಕೃಷಿ ವಿಜ್ಞಾನ ಕೇಂದ್ರಗಳು (ಏಗಿಏs) ಮತ್ತು ೬೦೦ ರೈತ ಉತ್ಪಾದಕ ಸಂಸ್ಥೆಗಳನ್ನು (ಈPಔs) ಒಳಗೊಂಡ ೧೧ ತಾಂತ್ರಿಕ ಅವಧಿಗಳನ್ನು ಆಯೋಜಿಸಿತು, ೭ ಒಡಂಬಡಿಕೆಗಳಿಗೆ (ಒoUs) ಚಾಲನೆ ನೀಡಿತು ಮತ್ತು ೧೨ ದೇಶಗಳಲ್ಲಿ ೫.೭೨ ಮಿಲಿಯನ್ ಜನರನ್ನು ತಲುಪುವ ಮೂಲಕ ಡಿಜಿಟಲ್ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ವರ್ಗಾವಣೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿತು.
ಅಂತರರಾಷ್ಟ್ರೀಯ ಮಟ್ಟದಲ್ಲಿ, ಅವರು ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಸೊಲನೇಸಿಯಸ್ ಮತ್ತು ಕುಕುರ್ಬಿಟ್ ರೌಂಡ್ ಟೇಬಲ್ (ಂPSA) ನ ಅಧ್ಯಕ್ಷರಾಗಿ ಮತ್ತು ಮುಖ್ಯ ಭಾಷಣಕಾರರಾಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹಲವಾರು ಅಂತರರಾಷ್ಟ್ರೀಯ ವೈಜ್ಞಾನಿಕ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ, ಹಲವು ರಾಷ್ಟ್ರೀಯ ತಜ್ಞರ ಸಮಿತಿಗಳು ಮತ್ತು ಶಾಸನಬದ್ಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತೋಟಗಾರಿಕಾ ಸಂಶೋಧನೆ, ಬೀಜ ವ್ಯವಸ್ಥೆ, ನಾವೀನ್ಯತೆ, ಸ್ಟಾರ್ಟ್ಅಪ್ ಇನ್ಕ್ಯುಬೇಶನ್ ಮತ್ತು ಕೃಷಿ ನೀತಿಯಲ್ಲಿ ತಮ್ಮ ನಾಯಕತ್ವವನ್ನು ಮುಂದುವರೆಸಿದ್ದಾರೆ. ತಮ್ಮ ಪ್ರವರ್ತಕ ಕಾರ್ಯಗಳ ಮೂಲಕ, ಡಾ. ಎಂ. ವಿ. ಧನಂಜಯ ಅವರು ಸ್ವಾವಲಂಬಿ, ಸುಸ್ಥಿರ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಭಾರತೀಯ ತೋಟಗಾರಿಕಾ ಕ್ಷೇತ್ರವನ್ನು ನಿರ್ಮಿಸುವಲ್ಲಿ ನಿರಂತರವಾಗಿ ಮತ್ತು ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ.
Keladi Shivappanayaka University of Agricultural ಡಾ.ಧನಂಜಯ.ಕುಲಪತಿ.ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ.ಇರುವಕ್ಕಿ.
Date:
