ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ COTPA ದಾಳಿಗಳನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 51 ಪ್ರಕರಣಗಳನ್ನು ದಾಖಲಿಸಿ, 4500 ರೂ ದಂಡದ ಮೊತ್ತವನ್ನು ಸಂಗ್ರಹಿ ಸಲಾಯಿತು. ತಂಬಾಕು ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು. ತಂಡದಲ್ಲಿ ಜಿಲ್ಲಾ ಸಲಹೆಗಾರರಾದ ಶ್ರೀ ಹೇಮಂತ್ ರಾಜ್ ಅರಸ್, ಸಮಾಜ ಕಾರ್ಯಕರ್ತರಾದ ಶ್ರೀ ರವಿರಾಜ್, ಶ್ರೀ ಪ್ರವೀಣ್, ಮಹಾನಗರಪಾಲಿಕೆಯ ಸಿಬ್ಬಂದಿಗಳು ಹಾಗು ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿ ಸಿದ್ದರು.ಈ ಸಂದರ್ಭದಲ್ಲಿ ತಂಬಾಕು ಮಾರಾಟಗಾರರಿಗೆ ಮತ್ತು ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ COTPA ಕಾಯ್ದೆ ಕುರಿತು ಅ ರಿವು ಮೂಡಿಸಲಾಯಿತು.
ಶಿವಮೊಗದಲ್ಲಿ ತಂಬಾಕು ನಿಯಂತ್ರಣ ಕೋಶದಿಂದ ದಿಢೀರ್ ದಾಳಿ 51 ಪ್ರಕರಣ ದಾಖಲು
Date:
