Monday, September 21, 2026
Monday, September 21, 2026

ಎಸ್.ಎಫ್.ಸಿ.ನಿಧಿ ಯೋಜನೆಯಡಿ ಪಜಾ/ ಪ.ಪಂ /ವಿಶೇಷ ಚೇತನರು/ ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯ ಧನ,: ಶಿವಮೊಗ್ಗ ಮಹಾ ನಗರಪಾಲಿಕೆ ಪ್ರಕಟಣೆ

Date:

ಶಿವಮೊಗ್ಗ ಮಹಾನಗರ ಪಾಲಿಕೆಯು 2026-27ನೇ ಸಾಲಿನ ಎಸ್.ಎಫ್.ಸಿ ನಿಧಿಯ ಯೋಜನೆಯಡಿ ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡ ವಿಶೇಷಚೇತನ ಮತ್ತು ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ.

ಬಿ.ಇ /ಎಂ.ಬಿ. ಬಿ.ಎಸ್. ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ರೂ.50000/- ಸಹಾಯಧನ ನೀಡಲಾಗುತ್ತಿದ್ದು, ಆದಾಯ ರೂ.5 ಲಕ್ಷ ಮಿತಿಯಲ್ಲಿರಬೇಕು.

ಬಿ.ಇ /ಎಂ.ಬಿ. ಬಿ.ಎಸ್. ವ್ಯಾಸಾಂಗ ಮಾಡುತ್ತಿರುವ ಇತರೆ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ರೂ.50000/- ಸಹಾಯಧನ ನೀಡಲಾಗುತ್ತಿದ್ದು, ಆದಾಯ ರೂ. 2.50 ಲಕ್ಷ ಮಿತಿಯಲ್ಲಿರಬೇಕು. ವಿಶೇಷ ಚೇತನರಿಗೆ ಸಣ್ಣ ಉದ್ದಿಮೆಗೆ ಸಹಾಯಧನ ನೀಡಲಾಗುತ್ತಿದ್ದು, ಅವರ ಆದಾಯ ರೂ. 3.00 ಲಕ್ಷ ಮಿತಿಯಲ್ಲಿರಬೇಕು.

ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಪತ್ರ, ಪಡಿತರಚೀಟಿ ಆಧಾರ ಕಾರ್ಡ್, ವ್ಯಾಸಾಂಗ ದೃಢೀಕರಣ ಪತ್ರ, ವಿಶೇಷ ಚೇತನರ UDID ಕಾರ್ಡ್, ಸಣ್ಣ ಉದ್ದಿಮೆ ಫಲಾಭವಿಗಳು ಯೋಜನಾ ವರದಿ ಲಗತ್ತಿಸುವುದು. ಈ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ನೀಡುವುದು.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.shivamoggacity.mrc.gov.in, ದೂ. ಸಂ.: 08182-277677/226606 ಗಳನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...