Bharat Scouts and Guides ಮಕ್ಕಳ ಆಸಕ್ತಿಗನುಗುಣವಾಗಿ ಅವರ ಕಲಿಕೆಯನ್ನು ಉತ್ತಮ ರೀತಿಯಲ್ಲಿ ಎಲ್ಲರೂ ಪ್ರೋತ್ಸಾಹಿಸಬೇಕು. ಉತ್ತಮ ಕಲಿಕೆಯಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಜಿಲ್ಲಾ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗದ ವತಿಯಿಂದ ಶನಿವಾರ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚತುರ್ಥ ಚರಣ್ ಶಿಬಿರದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ಕುರಿತು ಈಗಿಂದಲೇ ನಿಮ್ಮ ಗುರಿ ಕಡೆ ಗಮನ ಹರಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಉತ್ತಮ ವೇದಿಕೆಯಾಗಿದೆ. ಇದನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ ಪರೀಕ್ಷಾರ್ಥಿಗಳನ್ನು ಕುರಿತು ವಿವರಿಸಿದರು.
ರಾಜೇಶ್ ಅವಲಕ್ಕಿ ರವರು ಮಾತನಾಡಿ, ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪಾಲ್ಗೊಳ್ಳುವುದರಿಂದ ಅವರ ಆಲೋಚನೆಯ ಕ್ರಮಗಳು ಉನ್ನತ ಮಟ್ಟದಲ್ಲಿರುತ್ತದೆ. ಇದು ಪ್ರಕೃತಿಯ ಮಡಿಲಲ್ಲಿ ಕಲಿಯುವ, ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ತುಂಬುವ ಮತ್ತು ಇತರರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಕಲಿಸುವ ಒಂದು ಶಿಸ್ತಿನ ಶಿಕ್ಷಣವಾಗಿದೆ. ಎಲ್ಲರೂ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದ ಅವರು, ಪರೀಕ್ಷೆ ಎದುರಿಸುವ ಕುರಿತು ಉಪಯುಕ್ತ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿ ಹೇಳಿದರು.
ಶಿಬಿರದ ನಾಯಕಿಯಾದ ಮೀನಾಕ್ಷಮ್ಮ ಎಲ್.ಟಿ. (ಬುಲ್ ಬುಲ್ಸ್) ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿದರು. ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದ 22 ಕಬ್ಸ್ ಮತ್ತು 30 ಬುಲ್ ಬುಲ್ಸ್ ಹೀಗೆ ಒಟ್ಟು 52 ಜಿಲ್ಲಾ ಪರೀಕ್ಷಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
Bharat Scouts and Guides ವೇದಿಕೆಯಲ್ಲಿ ರಾಜೇಶ್ ಅವಲಕ್ಕಿ, ಗೈಡ್ ಆಯುಕ್ತರಾದ ಲಕ್ಷ್ಮಿ, ಕೆ.ರವಿ, ಪದಾಧಿಕಾರಿಗಳು, ಪರೀಕ್ಷಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿಬಿರಲ್ಲಿ ದಳನಾಯಕಿಯರಾದ ಈಸೂರಿನ ಶಾರದಮ್ಮ, ಜ್ಞಾನದೀಪ ಶಾಲೆಯ ಶಿಕ್ಷಕಿಯರಾದ ವಿದ್ಯಾ, ಶೀಲಾ ಮತ್ತು ದಳನಾಯಕರಾದ ಅಶೋಕ್ ಕುಮಾರ್ ಸಿ.ಎನ್., ಸೇತುರಾಮ್, ಮಂಜುನಾಥ್, ದಿನೇಶ್ ಸಿಂಗ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಬ್ಸ್ ಅಂಡ್ ಬುಲ್ ಬುಲ್ಸ್ ಪ್ರಾರ್ಥನೆ ಮಾಡಿದರು. ಜಿಲ್ಲಾ ತರಬೇತಿ ಆಯುಕ್ತರಾದ ಶಿವಶಂಕರಪ್ಪ ಅವರು ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಸ್ವಾಗತಿಸಿದರು.
ಜಿಲ್ಲಾ ಆಯುಕ್ತರಾದ ಎಸ್. ಕಲಾ (ಗೈಡ್) ನಿರೂಪಣೆ ಮಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಈಸೂರು ಶಾರದಮ್ಮ ವಂದನಾರ್ಪಣೆ ಮಾಡಿದರು.
