Thursday, June 25, 2026
Thursday, June 25, 2026

ಪರಿಸರ ನಾಶ ಹೆಚ್ಚಾಗುತ್ತಿದ್ದು, ಮಾನವ ಮತ್ತು ಸಕಲ ಜೀವಿಗಳು ಭೂಮಿಯ ಮೇಲೆ ಬದುಕುಳಿಯಲು ಸಂಕಷ್ಟ:ಡಾ. ನಾಗರಾಜ್ ಪರಿಸರ

Date:

ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಹೆಚ್ಚಾಗುತ್ತಿದ್ದು ಪರಿಣಾಮ ಮಾನವ ಮತ್ತು ಸಕಲ ಜೀವಿಗಳು ಭೂಮಿಯ ಮೇಲೆ ಬದುಕುಳಿಯಲು ಸಂಕಷ್ಟ ಎದುರಿಸುವ ಸ್ಥಿತಿ ಉಂಟಾಗಿದೆ.

ಪ್ರತಿದಿನ ನಾವು ಮಾನವ ವನ್ಯ ಜೀವಿ ಸಂಘರ್ಷ, ಹವಮಾನ ವೈಪರಿತ್ಯ, ಅರಣ್ಯ ನಾಶ ,ಕಾಡ್ಗಿಚ್ಚು, ಭೂಕುಸಿತ, ಭೂತಾಪಮಾನ ಹೆಚ್ಚಾಗುವುದು ಇಂತಹ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.

ಈ ಎಲ್ಲದಕ್ಕೂ ಪರಿಹಾರ ಪರಿಸರದ ಬಗ್ಗೆ ವೈಜ್ಞಾನಿಕ ಅರಿವು ಮತ್ತು ಅದರ ಸಂರಕ್ಷಣೆ.
ಪರಿಸರ ವಿಜ್ಞಾನದ ಬಗ್ಗೆ ಅರಿವು ಮತ್ತು ಕಾಳಜಿಯನ್ನು ಮೂಡಿಸುವ ಹಾಗೂ ರಕ್ಷಿಸುವ ಸಲುವಾಗಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ. ಎಸ್ಸಿ, ಪರಿಸರ ವಿಜ್ಞಾನ ವಿಷಯವಿದ್ದು ಇದನ್ನು ಓದಿದ ಸಾಕಷ್ಟು ಜನ ಪರಿಸರ ಸಂರಕ್ಷಣೆ ಕಾರ್ಯ ಮಾಡುತ್ತಿದ್ದಾರೆ.

ಬಿ.ಎಸ್ಸಿ,. ಪರಿಸರ ವಿಜ್ಞಾನ ವಿಷಯವನ್ನು ಓದುವುದರಿಂದ ಸಿಗುವ ಉದ್ಯೋಗಾವಕಾಶಗಳು.
ಸರ್ಕಾರಿ ಸಂಸ್ಥೆಗಳಾದಂತಹ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಪುರಸಭೆ ಅಲ್ಲದೆ ಸರ್ಕಾರೇತರ ಸಂಸ್ಥೆಗಳಲ್ಲಿ ಸಾಕಷ್ಟು ವಿಫುಲ ಅವಕಾಶಗಳು ಇವೆ.

ಪ್ರತಿಯೊಂದು ಕೈಗಾರಿಕೆಯಲ್ಲೂ ಪರಿಸರ ನಿರ್ವಹಣಾ ಅಧಿಕಾರಿ ಹಾಗೂ ತ್ಯಾಜ್ಯ ಶುದ್ಧೀಕರಣ ಘಟಕಗಳ ನಿರ್ವಹಣೆಗೆ ಕಡ್ಡಾಯವಾಗಿ ಪರಿಸರ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರನ್ನು ತೆಗೆದುಕೊಳ್ಳಲಾಗುತ್ತಿದೆ.
ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಯಾವುದೇ ಯೋಜನೆಗಳನ್ನು ರೂಪಿಸುವ ಮೊದಲು ಪರಿಸರ ಪರಿಣಾಮಗಳ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಿಸಬೇಕಾಗಿರುತ್ತದೆ, ಪರಿಸರ ವಿಜ್ಞಾನ ವಿಷಯವನ್ನು ಓದಿದ ವಿದ್ಯಾರ್ಥಿಗಳು ಇದಕ್ಕೆ ಅರ್ಹರಾಗಿರುತ್ತಾರೆ ಹಾಗೂ ಸ್ವಂತ ಕಚೇರಿಗಳನ್ನು ಪ್ರಾರಂಭಿಸಿ ಪರಿಸರ ಪರಿಣಾಮಗಳ ಮೌಲ್ಯಮಾಪನದ ವರದಿ ಮಾಡಿಕೊಡಬಹುದು.
ಸಂಶೋಧನಾ ಕ್ಷೇತ್ರ, ವಿಧಿ ವಿಜ್ಞಾನ ಕ್ಷೇತ್ರ, ಪರಿಸರ ಪ್ರವಾಸೋದ್ಯಮ ಕ್ಷೇತ್ರ ಹೀಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಘ ಸಂಸ್ಥೆಗಳಲ್ಲೂ ವಿಫುಲವಾದ ಅವಕಾಶಗಳಿವೆ.

ಡಾ. ನಾಗರಾಜ್ ಪರಿಸರ ,
ಮುಖ್ಯಸ್ಥರು, ಪರಿಸರ ವಿಜ್ಞಾನ ವಿಭಾಗ,
ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ.
9901798999.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kodachadri Chits Pvt. Ltd ಗ್ರಾಹಕರೇ ಕೊಡಚಾದ್ರಿಚಿಟ್ಸ್ ನ ಹಿಂದಿರುವ ಶಕ್ತಿ- ಪರಶುರಾಮ್

Kodachadri Chits Pvt. Ltd ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ...

Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ

Rotary Club Shivamogga "ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ...

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...