Thursday, June 18, 2026
Thursday, June 18, 2026

ಎನ್ ಎಸ್ ಎಸ್ ವ್ಯಕ್ತಿತ್ವ ವಿಕಾಸದ ಮಹತ್ವದ ವೇದಿಕೆ : ಮೇಘಾ ಅಗರ್ವಾಲ್

Date:

ಎನ್‌ಎಸ್‌ಎಸ್ ಶಿಬಿರವು ಕೇವಲ ಸೇವಾ ಚಟುವಟಿಕೆ ಮಾತ್ರವಲ್ಲ, ಅದು ವ್ಯಕ್ತಿತ್ವ ವಿಕಾಸದ ಒಂದು ಮಹತ್ವದ ವೇದಿಕೆ. ಸಮಾಜದೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವವನ್ನು ನೀವು ಇಲ್ಲಿ ಕಲಿಯುತ್ತೀರಿ ಎಂದು ಐಪಿಎಸ್ ಅಧಿಕಾರಿ ಶ್ರೀಮತಿ ಮೇಘಾ ಅಗರವಾಲ್ ತಿಳಿಸಿದರು.
ಅವರು ಭದ್ರಾವತಿ ತಾಲೂಕು ವಿಜಯನಗರ ಕಾಚಿಗೊಂಡನಹಳ್ಳಿ ಕೊರಮಾರನಹಳ್ಳಿ ಗ್ರಾಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ವತಿಯಿಂದ ಸಾಮಾಜಿಕ ಕಾರ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದೇಶದ ಯುವಜನತೆ ಬಲವಾದರೆ ದೇಶ ಬಲವಾಗುತ್ತದೆ. ಆದ್ದರಿಂದ, ನಿಮ್ಮ ಶಕ್ತಿ ಮತ್ತು ಸಮಯವನ್ನು ಸಮಾಜದ ಸೇವೆಗೆ ಮೀಸಲಿಟ್ಟು, ಉತ್ತಮ ನಾಗರಿಕರಾಗಿ ಬೆಳೆದು ಬರಬೇಕು ಎಂದರು.
ಈ ಶಿಬಿರದಿಂದ ನೀವು ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಸೇವೆ ಸಣ್ಣದಾಗಿದ್ದರೂ, ಅದರ ಪರಿಣಾಮ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಮಾರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಧುರಾವ್.ಆರ್ ವಹಿಸಿದ್ದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಆರ್, ಮುಖ್ಯ ಶಿಕ್ಷಕ ಎಸ್. ಸಿದ್ದರಾಮಯ್ಯ, ಗ್ರಾಮ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸವಿತಾ, ಬಸವರಾಜ್, ಉಪನ್ಯಾಸಕರಾದ ಬಿ.ಜಿ.ರವಿಶಂಕರ್ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...