Thursday, June 18, 2026
Thursday, June 18, 2026

ಏಪ್ರಿಲ್ 24. ಅರಹತೊಳಲು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಪ್ರಾಣ ಪ್ರತಿಷ್ಠಾಪನೆ

Date:

ಭದ್ರಾವತಿ ತಾಲೂಕು, ಹೊಳೆಹೊನ್ನೂರು ಹೋಬಳಿಯ ಅರಹತೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿತವಾದ ಸುಮಾರು ಒಂದು ಕೋಟಿ ರೂಗೂ ಹೆಚ್ಚು ವೆಚ್ಚದಲ್ಲಿ ಕಲ್ಲಿನ ಕೆತ್ತನೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭ ಏಪ್ರಿಲ್ 23ರ ನಾಳಿನ ಗುರುವಾರ ಬೆಳಿಗ್ಗೆ ನಡೆಯಲಿದೆ ಎಂದು ವೀರಭದ್ರೇಶ್ವರ ಸೇವಾ ಸಮಿತಿ ತಿಳಿಸಿದೆ.
ಕಳೆದ ಒಂದು ವರ್ಷದಿಂದ ಅತ್ಯಂತ ವ್ಯವಸ್ಥಿತ ಹಾಗೂ ವೈಭವೋಪೇತವಾಗಿ ಕಲ್ಲಿನ ದೇವಸ್ಥಾನವನ್ನು ಗ್ರಾಮಸ್ಥರು ನಿರ್ಮಿಸಿದ್ದು ಅದರ ಉದ್ಘಾಟನಾ ಸಮಾರಂಭ ಅಂದು ಬೆಳಿಗ್ಗೆ ಹೊನ್ನಾಳಿ ಶ್ರೀ ಗಿರಿರಾಜ ಸೂರ್ಯ ಸಿಂಹಾಸನಾ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅಂದು ಬೆಳಿಗ್ಗೆ 4:30 ರಿಂದ ನಡೆಯುವ ಪೂಜಾ ಸಮಾರಂಭದಲ್ಲಿ ದೇವಾಲಯದ ಉದ್ಘಾಟನೆ ನಡೆಯಲಿದೆ.
ಮರುದಿನ ಏ.24ರ ಬೆಳಿಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ, ಕೆಂಡದರ್ಚನೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಸಮಸ್ತ ಭಕ್ತರನ್ನು ಗ್ರಾಮದ ಗ್ರಾಮಸ್ಥರು ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸ್ವಾಗತಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...