Wednesday, September 16, 2026
Wednesday, September 16, 2026

ಯುವಕರು ನಗರೀಕರಣದ ಆಕರ್ಷಣೆಗೆ ತುತ್ತಾಗಿ ರೈತರ ಕೆಲಸ ಕುಂಠಿತ- ಡಾ.ಶೇಖರ್ ಗೌಳೇರ್

Date:

ನಮ್ಮ ಪೂರ್ವಜರು ಸ್ವತಹ ಬದುಕು ಕಟ್ಟಿಕೊಂಡು, ವರ್ಷಕ್ಕೆ ಬೇಕಾದಷ್ಟು ಆಹಾರ ಧಾನ್ಯ ಬೆಳೆದು ಕೃಡೀಕರಿಸಿ, ಬಾವಿ ನೀರು ಉಪಯೋಗಿಸಿ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದರು ಎಂದು, ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ನವ ನಾಗರೀಕೆಗೆ ಜನ ಹೊಂದಿ ಕೊಂಡು ಎಲ್ಲಾ ಕಾರ್ಯಗಳನ್ನು ಸರ್ಕಾರವೆ ಮಾಡಲಿ ಎಂದು ಹುಯಿಲು ಎಬ್ಬಿಸುತ್ತಾರೆ. ಇದು ಎಷ್ಟು ಸರಿ? ಗ್ರಾಮೀಣ ಪ್ರದೇಶ ಹೊಂದಿದ ರೈತರೆ ಹೆಚ್ಚಿರುವ ನಮ್ಮ ರಾಷ್ಟ್ರದಲ್ಲಿ ಸ್ವಾವಲಂಬಿ ಬದುಕು ನಷಿಸುತ್ತಿದೆ.
ಸಿರಿಧಾನ್ಯಗಳ ಬೆಲೆ ಹೆಚ್ಚಾಗಿದೆ. ಎಲ್ಲರೂ ವಾಣಿಜ್ಯಬೆಳೆ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ. ನೀರು ಇರುವ ಕಡೆ ಕಬ್ಬು ಬತ್ತ ಹೆಚ್ಚು ಬೆಳೆಯುತ್ತಾರೆ. ಒಟ್ಟರೆ ವಾಣಿಜ್ಯ ಬೆಳಗೆ ಜೋತು ಬಿದ್ದು, ಇತರ ಜೀವನ ಉಪಯೋಗಿ ಬೆಳೆಕಡೆ ಗಮನ ಹರಿಸುತ್ತಿಲ್ಲ. ಯುವಕರು ನಗರೀಕರಣದ ಆಕರ್ಷಣೆಗೆ ಒಳಗಾಗಿ ರೈತರ ಕೆಲಸ ಕುಂಟಿತವಾಗಿದೆ.
1945 ರಲ್ಲಿ ಹಿರೋಷಿಮ-ನಾಗಸಾಕಿ ಸುಂದರ ನಗರಗಳ ಮೇಲೆ ಅಣು ಬಾಂಬ್ ಪ್ರಯೋಗದಿಂದ ನಷಿಸಿ ಹೊಗಿದ್ದರು, ಈಗ ದೇಶಾಭಿಮಾನದಿಂದ ಸುಂದರ ದೇಶವಾಗಿ ಹೊರ ಹೊಮ್ಮಿದೆ. ಶುದ್ದ ನದಿಗಳು, ಪ್ಲಾಸ್ಟಿಕ್ ಮುಕ್ತ ಪ್ರದೇಶಗಳು, ಅತೀ ಚಿಕ್ಕ ಹೂ ಛರಿಯ ವಸಂತ ವೃತು ಆಚರಣೆ ಇಂದಿಗೂ ಮನೆ ಮಂದಿಯೆಲ್ಲ ಸೇರಿ ದೇಶವೆ ಹಬ್ಬ ಆಚರಿಸುತ್ತಾರೆ. ಗುಡ್ಡ ಕುಸಿಯದಂತೆ ತಂತಿ ಬಿಗಿದು ಸೀಮೆಂಟ್ ಕಟ್ಟೆ ಕಟ್ಟಿ ಸುಭದ್ರ ಗೊಳಿಸಿದ್ದಾರೆ. ಬುದ್ಧನ ಆಸೆಯಂತೆ ಶಾಂತಿ ಯಿಂದ ನೆಲಸಿ, ಮೌನಕ್ಕೆ ಹೆಚ್ಚು ಮಹತ್ವ ನೀಡಿ ಕಾರ್ಯಕ್ಕೆ ಹೆಚ್ಚು ಗಮನ ಹರಿಸಿ ದೇಶ ಸದೃಡ ಗೊಳಿಸಿ, ವಿಶ್ವದ ಗಮನ ಸೆಳೆದಿದ್ದಾರೆ.
ನಮ್ಮ ದೇಶಕ್ಕೆ ಇರುವ ಪ್ರಕೃತಿ ಸಂಪತ್ತು ಬೇರೆ ದೇಶಗಳಲ್ಲಿ ಇಲ್ಲ. ಅದನ್ನು ಉಳಿಸಿ ಕೊಂಡು, ಮುಂದಿನ ಪೀಳಿಗೆಗೆ ಕೊಟ್ಟರೆ ನಮ್ಮ ದೇಶ ಉನ್ನತ ಸ್ಥಾನಕ್ಕೆ ಹೋಗ ಬಹುದು ಎಂದರು.
ಬಿ.ಎಸ್.ಅಶ್ವಥ್ ಅಧ್ಯಕ್ಷತೆ ವಹಿಸಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರೇವಣಸಿದ್ದಪ್ಪ ವಂದಿಸಿದರು. ಉಮಾದೇವಿ, ಪ್ರವೀಣ್ ಜವಳಿ, ವಾಗೇಶ್, ರಾಜಶೇಖರ್, ನರೇಶ್ ಜೈನ್ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...