Friday, August 28, 2026
Friday, August 28, 2026

Bharat Scouts and Guides, ರಾಜ್ಯದ ವಿಪತ್ತು ನಿರ್ವಹಣಾ ಪಡೆಯು ಹಲವೆಡೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಮಾಡಿ ಜನರನ್ನ ಉಳಿಸಿದೆ- ತರಬೇತಿದಾರ ದೇವರಾಜ್.

Date:

Bharat Scouts and Guides, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿ ಮತ್ತು ತುರ್ತು ಸೇವಾ ಇಲಾಖೆ, ಪೊಲೀಸ್ ಇಲಾಖೆ ಇವರುಗಳ ಸಹಯೋಗದಲ್ಲಿ ಇತ್ತೀಚಿಗೆ ಜಿಲ್ಲಾ ಸ್ಕೌಟ್ ಭವನ, ಶಿವಮೊಗ್ಗ ದಲ್ಲಿ ಜಿಲ್ಲೆಯ ವಿವಿಧ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಯುವ ವಿಪತ್ತು ಮಿತ್ರ ತರಬೇತಿಯಲ್ಲಿ ಕಾರವಾರದಿಂದ ಆಗಮಿಸಿದ್ದ ಎನ್. ಡಿ. ಆರ್. ಎಫ್.ತುಕಡಿಯ ಹಿರಿಯ ತರಬೇತಿದಾರ ಶ್ರೀ ದೇವರಾಜ್ ರವರು ಮಾತನಾಡುತ್ತಿದ್ದರು.

ಅವರು 2006ರಲ್ಲಿ ಸ್ಥಾಪಿತ ವಾದ ಎನ್. ಡಿ. ಆರ್. ಎಫ್., ದೇಶದಾದ್ಯಂತ ಒಟ್ಟು 12 ಬೆಟಾಲಿಯುನ್ ಹೊಂದಿದ್ದು, ಕರ್ನಾಟಕ 10ನೇ ಬೆಟಾಲಿಯನ್, ವಿಜಯವಾಡಕ್ಕೆ ಸೇರಿದ್ದು ಇದುವರೆಗೂ ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಹಳಷ್ಟು ಜನರನ್ನು ಉಳಿಸಿದೆ ಎಂದರು.

ಆಪತ್ತು ಮಿತ್ರ ತರಬೇತಿಯು
” ಭಾರಿ ದುರ್ಘಟನೆಗಳ ಪರಿಣಾಮಗಳಿಗೆ ನಾವು ಹೇಗೆ ತಯಾರಿ ನಡೆಸುತ್ತೇವೆ, ಪ್ರತಿಕ್ರಿಯೆ ನೀಡುತ್ತೇವೆ ಮತ್ತು ಅದರಿಂದ ಏನು ಕಲಿಯುತ್ತೇವೆ ” ಎಂಬ ಪ್ರಕ್ರಿಯೆಯಾಗಿದೆ ಎಂದರು.

ರಕ್ಷಣಾ ಪಡೆಗಳು ಬರುವ ಮುಂಚಿತವಾಗಿ ಸ್ಥಳೀಯರು ಅದರಲ್ಲೂ ತರಬೇತಿ ಹೊಂದಿದ ಯುವಕ / ಯುವತಿಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತಯಾರು ಮಾಡುವುದೇ ಈ ಯುವ ಆಪತ್ತು ಮಿತ್ರ ಯೋಜನೆಯ ಮೂಲ ಉದ್ದೇಶ ಎಂದು ತಿಳಿಸಿದರು.

ತರಬೇತಿ ಅವಧಿಯಲ್ಲಿ ಸಿ. ಪಿ. ಆರ್., ಪ್ರಾಥಮಿಕ ಮಟ್ಟದ ಶೋಧನೆ ಮತ್ತು ರಕ್ಷಣೆ, ರೋಗಿಯನ್ನು ಹೊತ್ತೋಯುವುದು, ಸಮುದಾಯ ಆಧಾರಿತ ಅರೋಗ್ಯ ಪ್ರಥಮ ಚಿಕಿತ್ಸೆ, ಮೃದು ಆಂಗಾಶದ ಗಾಯ, ಮುಂತಾದ ವಿಚಾರಗಳ ಬಗ್ಗೆ ತಂಡವು ತಿಳಿಸಿಕೊಟ್ಟಿತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ ರವರು ಶಿಬಿರಾರ್ರ್ಥಿಗಳು ಈ ಶಿಬಿರದ ಸಂಪೂರ್ಣ ಲಾಭ ಪಡೆದುಕೊಳ್ಳಿ ಎಂದು ಹಾರೈಸಿದರು.

Bharat Scouts and Guides, ಶಿಬಿರದ ಸಂಯೋಜಕರಾದ ಶ್ರೀ ರಾಜೇಶ್ ವಿ ಅವಲಕ್ಕಿ ರವರು ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀ ಕೆ. ವಿ. ಚಂದ್ರಶೇಖರಯ್ಯ ವಂದಿಸಿದರು. ಕೇಂದ್ರ ಸ್ಥಾನಿಕ ಆಯುಕ್ತ ಶ್ರೀ ಜಿ. ವಿಜಯ್ ಕುಮಾರ್, ಸಹಾಯಕ ಜಿಲ್ಲಾ ಆಯುಕ್ತ ಶ್ರೀ ಮಲ್ಲಿಕಾರ್ಜುನ ಕಾನೂರ್, ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಶ್ರೀಮತಿ ಸುಮನಾ ಶೇಖರ್, ಹಿರಿಯ ಗೈಡರ್ ಶ್ರೀಮತಿ ಶಾಂತಮ್ಮ, ಹಿರಿಯ ಸ್ಕೌಟರ್ ಶ್ರೀ ರುದ್ರಪ್ಪ ಚೀಲೂರ್, ಎನ್. ಡಿ. ಆರ್. ಎಫ್. ತಂಡದ ಮುಖ್ಯಸ್ಥ ಶ್ರೀ ವಿವೇಕ್ ಮತ್ತು ಇತರೆ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 162 ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕಾ.ತ.ಚಿಕ್ಕಣ್ಣನವರ ‘ಮನಸು ಮುಗಿಲು’

-ಡಾ. ರವಿ ಎಂ. ಸಿದ್ಲಿಪುರ Klive Special Article ಕನ್ನಡ ಸಣ್ಣಕಥಾ ಪರಂಪರೆಯಲ್ಲಿ...

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...

S.N. Channabasappa “ಮನರಂಜನೆ” ಮನುಷ್ಯ ಜೀವನದ ಭಾಗ.ಆ ಸಾಂಸ್ಕೃತಿಕ ಸೊಬಗು ಜೀವನದಲ್ಲಿ ಅಡಕವಾಗಿರಬೇಕು- ಎಸ್.ಎನ್.ಚನ್ನಬಸಪ್ಪ

S.N. Channabasappa ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ...