Monday, March 16, 2026
Monday, March 16, 2026

Department of Youth Empowerment and Sports ಯುವಜನತೆ ಶಿಸ್ತು ಮತ್ತು ನಾಯಕತ್ವ ಗುಣಗಳನ್ನ ಮೈಗೂಡಿಸಿಕೊಳ್ಳಬೇಕು- ಡಾ.ಮಾಲೇಗೌಡ

Date:

Department of Youth Empowerment and Sports ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ (ಎನ್ ಎಸ್ ಎಸ್) 2025 – 26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಮಾರ್ಚ್ 9 ರಿಂದ 15 ರವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ ನ ಎನ್‌ ಎಸ್‌ ಎಸ್ ಭವನದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ, ನಾಯಕತ್ವದ ಗುಣಗಳು ಹಾಗೂ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ‘ಯುವಜನತೆ ಮತ್ತು ನಾಯಕತ್ವದ ಗುಣಗಳು’ ಎಂಬ ವಿಷಯವನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ರಾಜ್ಯ ನೌಕರರ ವಿಮಾ ಆಸ್ಪತ್ರೆಯ ವೈದ್ಯರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಮಾಲೇಗೌಡರವರು “ಈಗಿನ ಯುವಜನತೆ ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ಹೊಣೆಗಾರಿಕೆಯನ್ನು ಅರಿತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ” ಎಂದರು. ಇದೆ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀ ಯುತ ಪರಮೇಶ್ವರಪ್ಪ.ಬಿ.ಎಂ ರವರು ಈ ವಿಷಯದ ಮೇಲೆ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಪ್ರಮುಖ ಅಂಗವಾಗಿ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮ್ಹಾನ್ಸ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಯುವ ಸ್ಪಂದನ ಯೋಜನೆಯಡಿಯಲ್ಲಿ ಜೀವನ ಕೌಶಲ್ಯಗಳ ಕುರಿತು ವಿಶೇಷ ತರಬೇತಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಕ್ಷೇತ್ರ ಸಂಪರ್ಕಾಧಿಕಾರಿಗಳಾದ ಕು.ಪೂಜಾ ಸಿದ್ದಿ ಹಾಗೂ ಶ್ರೀ ಅನಿಲ್ ರಾಜ್ ರವರು ಈ ಅಧಿವೇಶನವನ್ನು ನಡೆಸಿಕೊಟ್ಟರು.
ಅಧಿವೇಶನದಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಉದ್ದೇಶ, ಅದರ ಸೇವೆಗಳು ಹಾಗೂ ಯುವಜನರ ಮಾನಸಿಕ ಆರೋಗ್ಯದಲ್ಲಿ ಯುವ ಸ್ಪಂದನದ ಪಾತ್ರದ ಕುರಿತು ವಿವರವಾಗಿ ತಿಳಿಸಲಾಯಿತು. ಜೊತೆಗೆ ಯುವಜನರು ಜೀವನದಲ್ಲಿ ಎದುರಿಸುವ ಭಾವನಾತ್ಮಕ ಸಮಸ್ಯೆಗಳು, ಒತ್ತಡ ಮತ್ತು ಗೊಂದಲಗಳನ್ನು ಸಮರ್ಥವಾಗಿ ಎದುರಿಸಲು ಜೀವನ ಕೌಶಲ್ಯಗಳ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು.
ಸ್ವ-ಅರಿವು, ಭಾವನೆಗಳನ್ನು ಸಮರ್ಥವಾಗಿ ನಿರ್ವಹಿಸುವುದು, ಒತ್ತಡದ ನಿರ್ವಹಣೆ, ಉತ್ತಮ ಸಂವಹನ ಕೌಶಲ್ಯ, ಸೃಜನಾತ್ಮಕ ಚಿಂತನೆ ಹಾಗೂ ಸಹಾನುಭೂತಿ…. ಹೀಗೆ ಮೊದಲಾದ ಜೀವನ ಕೌಶಲ್ಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಿಸಲಾಯಿತು. ಚರ್ಚೆಗಳು, ಉದಾಹರಣೆಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ವಿಷಯವನ್ನು ಸರಳವಾಗಿ ಪರಿಚಯಿಸಲಾಯಿತು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಯುವಜನರಲ್ಲಿ ಸಮಾಜದತ್ತ ಇರುವ ಹೊಣೆಗಾರಿಕೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಯಿತು ಎಂದು ಕಾರ್ಯಕ್ರಮದ ಆಯೋಜಕರು ಮೆಚ್ಚುಗೆ ವ್ಯಕ್ತಪಡಿಸಿದರು.

Department of Youth Empowerment and Sports ಕಾರ್ಯಕ್ರಮದಲ್ಲಿ ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರೀಶ್.ಎಂ, ಎನ್ ಎಸ್ ಎಸ್ ಘಟಕ – 1 ರ ಕಾರ್ಯಾಕ್ರಮಾಧಿಕಾರಿಗಳು ಹಾಗೂ ಶಿಬಿರಾಧಿಕಾರಿಗಳಾದ ಶ್ರೀ ಮಧುಸೂದನ.ಎಸ್.ಎಂ, ಗೌರವ ಶಿಬಿರಾಧಿಕಾರಿಗಳು ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀ ಜಗದೀಶಯ್ಯ, ಸ್ವ – ಆರ್ಥಿಕ ಘಟಕದ ಶಿಬಿರಾಧಿಕಾರಿಗಳು ಹಾಗೂ ಕಾರ್ಯಾಕ್ರಮಾಧಿಕಾರಿಗಳಾದ ಶ್ರೀಮತಿ ಚಂದನ ವಾಗ್ಲೆ.ಆರ್.ಜೆ, ನಿವೃತ್ತ ಕೆ ಎ ಎಸ್ ಅಧಿಕಾರಿಗಳಾದ ಶ್ರೀ ಚಂದ್ರಪ್ಪ, ಬಸವೇಶ್ವರನಗರದ ಪೊಲೀಸ್ ನಿರೀಕ್ಷಕರಾದ ಶ್ರೀ ಚಿಕ್ಕಸ್ವಾಮಿ ಹಾಗೂ ಎಲೆಕ್ಟ್ರಿಕಲ್ ವಿಭಾಗದ ವಿಭಾಗಾಧಿಕಾರಿಗಳಾದ ಶ್ರೀ ಆನಂದ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಕೇಂದ್ರ ಗೃಹ ವ್ಯವಹಾರಗಳ ಸಂಸದೀಯ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗಿ

B.Y. Raghavendra ನವದೆಹಲಿಯಲ್ಲಿ ನಡೆದ ಕೇಂದ್ರ ಗೃಹ ಇಲಾಖೆಗೆ ಸಂಬಂಧಿಸಿದ ಗೃಹ...

Klive Special Article ಯುಗಾದಿ…ಒಂದಿಷ್ಟು ಮಾಹಿತಿ- ಡಾ.ಹೆಚ್.ಪದ್ಮನಾಭ ಅಡಿಗ. ಶಿವಮೊಗ್ಗ

Klive Special Article ಬ್ರಹ್ಮನ ಸೃಷ್ಟಿಯ ಪ್ರಾರಂಭದದಿನ, ಬ್ರಹ್ಮನ ಪೂಜೆಯೇ ವಿಶೇಷ.ಈ...