Monday, February 2, 2026
Monday, February 2, 2026

DC Shivamogga ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮತದಾರರಿಗೆ ಇದು ಅತೀ ಮಹತ್ವದ್ದಾಗಿದೆ- ಪ್ರಭುಲಿಂಗ ಕವಳಿಕಟ್ಟಿ.

Date:

DC Shivamogga ಮಾನ್ಯ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002 ರ ಮತದಾರರ ಪಟ್ಟಿಯನ್ನು 2025 ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೂ ಅತಿ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಹಾಗೂ ಮಾನ್ಯ ಆಯೋಗವು ದಿನಾಂಕ: 06-01-2025 ರ ಆದೇಶವನ್ನು ಹೊರಡಿಸಿದ ದಿನಾಂಕದಲ್ಲಿ ಇದ್ದಂತೆ ಪ್ರಸ್ತುತ ಇರುವ ಪ್ರತಿಯೊಬ್ಬ ಮತದಾರನಿಗೆ ಮುಂಚಿತವಾಗಿ ಭರ್ತಿ ಮಾಡಲಾದ ಗಣತಿ ನಮೂನೆಯು ಲಭ್ಯವಿರತಕ್ಕದ್ದು ಮತ್ತ ಕರಡು ಮತದಾರನಿಗೆ ಪಟ್ಟಿಯು 2025 ರ ಜುಲೈ 25 ನೇ ದಿನಾಂಕಕ್ಕಿಂತ ಮುಂಚೆ ಭರ್ತಿ ಮಾಡಿ ಸಲ್ಲಿಸಲಾಗಿರುವಂತಹ ಎಲ್ಲಾ ಮತದಾರರ ಹೆಸರುಗಳನ್ನು ಒಳಗೊಂಡಿರಬೇಕೆಂದು ನಿರ್ದೇಶಿಸಿರುತ್ತದೆ.

ಸಂಸತ್ತು ಹಾಗೂ ರಾಜ್ಯ ವಿಧಾನ ಮಂಡಲಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಮೂಲಭೂತ ಅವಶ್ಯಕತೆಯಾಗಿರುವುದರಿಂದ ಭಾರತ ಸಂವಿಧಾನದ ಅನುಚ್ಛೇದ 32 ಜನತಾ ಪ್ರಾತಿನಿಧ್ಯ ಅಧಿನಿಯಮ, 1950 (ಆರ್ ಪಿ ಎ 1950) ರ ಅನುಸಾರ ಮತದಾರದ ಸಿದ್ಧಪಡಿಸುವಿಕೆಯು, ಮತದಾರರ ಪಟ್ಟಿಯಲ್ಲಿ ಎಲ್ಲಾ ಅರ್ಹ ನಾಗರೀಕರು ಸೇಪರ್ಡೆಗೊಂಡಿರುವುದನ್ನು ಮತ್ತು ಅಂತಹ ಯಾರೇ ನಾಗರೀಕರರನ್ನು ಮತದಾರರ ಪಟ್ಟಿಯಿಂದ ಹೊರಗಿಡದಿರುವುದನ್ನು ಖಾತ್ರಿಪಡಿಸಬೇಕಾಗಿರುವುದರಿಂದ, ಭಾರತದ ನಾಗರೀಕರಾಗಿರುವ ಮತ್ತು ಅರ್ಹತಾ ದಿನಾಂಕದಂದು 18 ವರ್ಷಗಳ ವಯಸ್ಸಿಗಿಂತ ಕಡಿಮೆ ಇಲ್ಲದಿರುವ ಮತ್ತು ಯಾವುದೇ ಕಾನೂನಿನ ಮೇರೆಗೆ ಅನರ್ಹನಾಗಿಲ್ಲದ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದೆಂದು ಸಂವಿಧಾನದ 326ನೇ ಅನುಚ್ಛೇದವು ಗೊತ್ತುಪಡಿಸಿದೆ.

ಕಳೆದ 20 ವರ್ಷಗಳ ಸುಧೀರ್ಘ ಅವಧಿಯಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಸೇರ್ಪಡೆಗಳು ಮತ್ತು ಬಿಟ್ಟುಬಿಡುವಿಕೆಗಳ ಕಾರಣದಿಂದಾಗಿ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿರುವುದು ಮಾನ್ಯ ಆಯೋಗದ ಗಮನಕ್ಕೆ ಬಂದಿರುವುದರಿಂದ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಗಳನ್ನು ವಿಶೇಷ ಸಮಗ್ರ ಪರಿಷ್ಕರಣೆಯ ಅಡಿಯಲ್ಲಿ ಮಾನ್ಯ ಭಾರತ ಚುನಾವಣಾ ಆಯೋಗ, ನವದೆಹಲಿ ಇವರ ಆದೇಶ ಸಂಖ್ಯೆ:23/ಇಆರ್ ಎಸ್/ 2025, ದಿನಾಂಕ:24.06.2025 ರನ್ವಯ ಮಾನ್ಯ ಆಯೋಗವು ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಗೊತ್ತುಪಡಿಸಿರುತ್ತದೆ.

ಮಾನ್ಯ ಆಯೋಗವು ಚಾಲ್ತಿಯಲ್ಲಿರುವ ಶಾಸನಗಳ ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಈ ಹಿಂದಿನ ವರ್ಷಗಳಲ್ಲಿ ಅಂದರೆ 1952-56, 1957, 1961, 1965, 1966, 1983-84 1987-89, 1992-1993, 1995, 2002, 2003 ಮತ್ತು 2004ರಲ್ಲಿ ಗಣತಿ ಮುಖಾಂತರ, ಹೊಸ ಮತದಾರರ ಪಟ್ಟಿಗಳನ್ನು ಸಿದ್ದಪಡಿಸುವುವುದಕ್ಕಾಗಿ ದೇಶವ್ಯಾಪಿ ಅಥವಾ ದೇಶದ ಕೆಲವು ಭಾಗಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸಿರುತ್ತದೆ.

ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಅಥವಾ ಸೇರ್ಪಡೆ ಮಾಡುವ ಕಾರ್ಯವನ್ನು ಜರುಗಿಸಲಾಗುತ್ತಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಾ, ಈ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವದಲ್ಲಿ ಅರ್ಹ ಮತದಾರರು ಕೂಡಲೇ ಗಮನ ಹರಿಸಬೇಕಾದಂತಹ ಅಂಶಗಳು ಈ ಕೆಳಗಿನಂತೆ ಇರುತ್ತವೆ.

ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಸರುಗಳನ್ನು ತೆಗೆದುಹಾಕುವ ಅಥವಾ ಸೇರ್ಪಡೆ ಮಾಡುವ ಕಾರ್ಯವನ್ನು ಜರುಗಿಸ ಐಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಾ ಈ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವ ತದಾರರು ಕೂಡಲೇ ಗಮನಹರಿಸಬೇಕಾದಂತಹ ಅಂಶಗಳು ಈ ಕೆಳಕಂಡಂತಿರುತ್ತವೆ.

  • DC Shivamogga ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು, ನವದೆಹಲಿ ನೀಡಿದ ನಿರ್ದೇಶನಗಳನ್ವಯ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಜರುಗಿಸುವ ಕುರಿತು ಪೂರ್ವ ಸಿದ್ಧತೆಗೆ 2025ರ ಮತದಾರರ ಯಾದಿಯಲ್ಲಿ ನೋಂದಣಿಯಾದ ಮತದಾರರನ್ನು 2002ರ ಪಟ್ಟಿಗೆ ತಾಳೆ(ಮ್ಯಾಪಿಂಗ್) ಮಾಡುವ ಕಾರ್ಯ ಕೈಗೊಳ್ಳಲಾಗಿರುತ್ತದೆ. ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡಣೆ ಮಾಡುವುದು. ಪ್ರೊಜೆನಿ ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ನೋಂದಣಿಯಾಗದಿದ್ದಲ್ಲಿ ಅವರ ತಂದೆ ತಾಯಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಅಥವಾ ಅಜ್ಜ ಅಜ್ಜಿಯರ ಭಾಗಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ (ಯಾವುದಾದರೂ ಸಂಬಂಧಿಸಿದ) ಜೋಡಣೆ ಮಾಡಿಕೊಳ್ಳುವುದು.
  • ಪ್ರಸ್ತುತ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ನವದೆಹಲಿ ಇವರು ನೀಡಿದ ನಿರ್ದೇಶನದನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ 111-ಶಿವಮೊಗ್ಗ, ಗ್ರಾಮಾಂತರ, 112- ಭದ್ರಾವತಿ, 113-ಶಿವಮೊಗ್ಗ ನಗರ, 114 ತೀರ್ಥಹಳ್ಳಿ 115-ಶಿಕಾರಿಪುರ 116-ಸೊರಬ ಮತ್ತು 117- ಸಾಗರ ಒಟ್ಟು 07 ವಿಧಾನ ಸಭಾ ಕ್ಷೇತ್ರಗಳಿದ್ದು 1530471 ಮತದಾರರಿದ್ದಾರೆ. ಈ ಪೈಕಿ ಮ್ಯಾಪಿಂಗ್ ಹಾಗೂ ಪ್ರೊಜೆನಿ (ಸಂತತಿ)ಯನ್ನು ಸೇರಿಸಿದಂತೆ ಶೇಕಡ 67.36 ಪ್ರಗತಿಯಾಗಿದ್ದು ಇನ್ನು ಶೇ 32.64 ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದೆ.
  • ಈ ಪ್ರಕಟಣೆಯ ಮೂಲಕ ಮತದಾರರಿಗೆ ತಿಳಿಸುವುದೇನೆಂದರೆ, ಕೂಡಲೇ ತಮ್ಮ ತಮ್ಮ ಮತಗಟ್ಟೆಗಳ ಅಧಿಕಾರಿ(ಬಿಎಲ್‌ಓ)ಗಳನ್ನು ಭೇಟಿ ಮಾಡಿ 2002ರ ಮತದಾರರ ಪಟ್ಟಿಗೆ 2025ರ ಮತಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಿಕೊಳ್ಳುವುದು. ಹಾಗೂ 2002 ರಲ್ಲಿ ಹೊರ ರಾಜ್ಯದಲ್ಲಿ ವಾಸವಿದ್ದ ಮತದಾರರು ಪ್ರಸ್ತುತ 2025ರಲ್ಲಿ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಯಾಗಿದ್ದಲ್ಲಿ ಅಂತಹ ಮತದಾರರಿಗೂ ಸಹ ಮ್ಯಾಪಿಂಗ್ ಮಾಡಿಕೊಳ್ಳಲು ಮಾನ್ಯ ಭಾರತ ಚುನಾವಣಾ ಆಯೋಗದಿಂದ ಅವಕಾಶ ನೀಡಲಾಗಿರುತ್ತದೆ.
  • 2002ರ ನಂತರ ಮದುವೆಯಾಗಿ ಬಂದಿರುವವರು ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ (ಸ್ಥಳಾಂತರ) ಗೊಂಡಿರುವವರು ಅಥವಾ ಹೊಸದಾಗಿ ಅರ್ಹತೆ ಪಡೆದಿರುವವರು ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಹಾಗೂ ನೀವು ಈ ಹಿಂದೆ ವಾಸವಿದ್ದಂತಹ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ಸಂಖ್ಯೆ ಭಾಗ ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆ ತಿಳಿದುಕೊಂಡು ಕೂಡಲೇ ಬಿಎಲ್‌ಓ ಗೆ ವರದಿ ನೀಡುವುದು.
  • ಒಂದು ವೇಳೆ 2002ರ ಪಟ್ಟಿಯಲ್ಲಿ ನಿಮ್ಮಗಳ ಹೆಸರುಗಳು ಇಲ್ಲದಿದ್ದಲ್ಲಿ ನಿಮ್ಮಗಳ ತಂದೆ ತಾಯಿಯವರ ಭಾಗ ಸಂಖ್ಯೆ( ಪಾರ್ಟ್ ನಂ.)ಹಾಗೂ ಕ್ರಮ ಸಂಖ್ಯೆ(ಸೀರಿಯಲ್ ನಂ.)ಅಥವಾ ಅಜ್ಜ ಅಜ್ಜಿಯರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ (ಯಾವುದಾದರು ಸಂಬಂಧಿಸಿದ) ಮಾಹಿತಿಯನ್ನು ಬಿಎಲ್‌ಓ ರವರಿಗೆ ಒದಗಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳುವುದು.
    ಮತಗಟ್ಟೆ ಅಧಿಕಾರಿಗಳು ಭಾರತ ಚುನಾವಣಾ ಆಯೋಗದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ, ಮೇಲ್ಕಂಡ ಎಲ್ಲಾ ಮಾಹಿತಿಯನ್ನು ನಿಮ್ಮ ಪ್ರದೇಶದ ಜವಾಬ್ದಾರಿಯುತ ಮತಗಟ್ಟೆ ಅಧಿಕಾರಿ (ಬಿಎಲ್‌ಓ) ರವರಿಗೆ ತಕ್ಷಣವೇ ಒಪ್ಪಿಸಿ ಅವರ ಮುಖಾಂತರ ಕಡ್ಡಾಯವಾಗಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ, ಶಿವಮೊಗ್ಗ ಜಿಲ್ಲೆಯ ಎಲ್ಲಾ ಮತದಾರರು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...