Monday, February 2, 2026
Monday, February 2, 2026

Klive Special Article ಭೂಗೋಲದ ಸುತ್ತ. ಆತಂಕಗಳ ಹುತ್ತ… ಲೇ: ಸುಧೀರ್ ಕೀಳಂಬಿ

Date:

Klive Special Article ಯುದ್ಧ ಮತ್ತು ಶಾಂತಿ: ಇಂದಿನ ಅಗತ್ಯತೆ
೨೦೨೬ರ ಆರಂಭವೇ ಜಾಗತಿಕ ಅಶಾಂತಿಯ ಹೊಸ ಅಧ್ಯಾಯವನ್ನು ತೆರೆದಿದೆ. ೨೦೨೫ರಲ್ಲಿ ನಡೆದ ಅನೇಕ ಸಂಘರ್ಷಗಳ ಗಾಯಗಳು ಇನ್ನೂ ಮಸುಕಾಗದಿರುವಾಗಲೇ, ಹೊಸ ಉದ್ವಿಗ್ನತೆಗಳು ವಿಶ್ವವನ್ನು ಮತ್ತೊಮ್ಮೆ ಯುದ್ಧದ ಅಂಚಿನತ್ತ ತಳ್ಳುತ್ತಿರುವುದು ಆತಂಕಕಾರಿ. ಶಾಂತಿಯನ್ನು ಬಯಸುವ ಜನ-ಮನಗಳ ನಡುವೆ ಕೆಲವೇ ನಾಯಕರು ತೋರಿಸುತ್ತಿರುವ ದುರಾಸೆ ಮತ್ತು ಅಧಿಕಾರಲಾಲಸೆ, ಜಗತ್ತಿನ ಸ್ಥಿರತೆಗೆ, ಶಾಂತಿ ಸೌಹಾರ್ದಕ್ಕೆ ಗಂಭೀರ ಸವಾಲು ಹಾಕುತ್ತಿದೆ.
ಅಮೇರಿಕಾದ ನಡೆ
ಜಗತ್ತಿನ ದೊಡ್ಡಣ್ಣ ಅಮೇರಿಕ ಇತ್ತೀಚಿಗೆ ವೆನಿಜುವೆಲಾ ದಲ್ಲಿ ನಡೆದುಕೊಂಡ ರೀತಿ ಹಾಗೂ ಇರಾನ್ ಮತ್ತು ಗ್ರೀನ್ಲ್ಯಾಂಡ್ ಕುರಿತಾದ ಹೇಳಿಕೆಗಳು ಮಿತ್ರ ರಾಷ್ಟ್ರಗಳಲ್ಲಿ ಒಡಕು ಮೂಡಿಸಿ, ಅಂತರ ರಾಷ್ಟೀಯ ವ್ಯವಸ್ಥೆಯ ಅಲ್ಲೊಲ್ಲ ಕಲ್ಲೋಲಕ್ಕೆ ಮುನ್ನುಡಿ ಬರೆಯುತ್ತಿದೆ. ಇದರ ಮುಂದುವರಿದ ಭಾಗ ಯುದ್ಧವಾಗಿ ಪರಿವರ್ತನೆ ಆಗಲಿದೆಯೇ ಎಂಬ ಆತಂಕ ಎಲ್ಲರಲ್ಲಿ ಮನೆಮಾಡಿದೆ.
ಮಧ್ಯಪ್ರಾಚ್ಯ: ನಿರಂತರ ಕದನದ ವಲಯ
ಗಾಜಾದಲ್ಲಿ ಇಸ್ರೇಲ್–ಹಮಾಸ್ ಯುದ್ಧ ತೀವ್ರಗೊಂಡಿದ್ದು, ಅಲ್ಲಿನ ನಾಗರಿಕರಲ್ಲಿ ಭಾರೀ ಮಾನವೀಯ ಸಂಕಷ್ಟವನ್ನು ಉಂಟುಮಾಡಿದೆ. ವೆಸ್ಟ್ ಬ್ಯಾಂಕ್‌ನಲ್ಲಿನ ಘರ್ಷಣೆಗಳು ಹೆಚ್ಚಾಗಿದ್ದು, ಲೆಬನಾನ್ ಗಡಿಯಲ್ಲಿ ಇಸ್ರೇಲ್–ಹೆಜ್ಬೊಲ್ಲಾ ನಡುವಿನ ಉದ್ವಿಗ್ನತೆ ಮತ್ತಷ್ಟು ಗಂಭೀರವಾಗಿದೆ. ಅಮೇರಿಕಾ-ಇರಾನ್–ಇಸ್ರೇಲ್ ನಡುವಿನ ಏರಿಳಿತಗಳು ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸುತ್ತಿವೆ. ಸಿರಿಯಾ, ಯೆಮೆನ್ ನಲ್ಲಿನ ಸಶಸ್ತ್ರ ಗುಂಪುಗಳ ನಡುವಿನ ಅಧಿಕಾರ ಹೋರಾಟ ಶರಣಾರ್ಥಿ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಉಕ್ರೇನ್-ರಷ್ಯಾ: ಯುದ್ಧ, ಭಾರೀ ನಾಶ
ಉಕ್ರೇನ್‌-ರಷ್ಯಾ ನಡುವಿನ ಭೂಪ್ರದೇಶ ಸಂಭಂದಿತ ಯುದ್ಧ ಮುಗಿಯುವ ಸೂಚನೆ ಇಲ್ಲದೇ ಮುಂದುವರೆಯುತ್ತಿದೆ. ಅಮೇರಿಕದ ಮಧ್ಯಸ್ಥಿಕೆ ಕೆಲವು ಭರವಸೆ ಮೂಡಿಸಿದ್ದರೂ ಈಗ ಮತ್ತೆ ಯಾವ ಆಶಾಭಾವ ಇಲ್ಲದೇ, ಯುದ್ಧದ ಕಾರ್ಮೋಡ ಮತ್ತೆ ಭುಗಿದೇಳುತ್ತಿದೆ.
ಆಫ್ರಿಕಾ: ಮರೆಮಾಚಲಾಗದ ಮಾನವೀಯ ದುರಂತಗಳು
ಸುಡಾನ್‌ನ ಗೃಹಯುದ್ಧವು ೧೪ ಮಿಲಿಯನ್ ಜನರನ್ನು ಸ್ಥಳಾಂತರಗೊಳಿಸಿರುವ ವಿಶ್ವದ ಅತಿದೊಡ್ಡ ಮಾನವೀಯ ದುರಂತಗಳಲ್ಲಿ ಒಂದಾಗಿದೆ. ಕಾಂಗೋದಲ್ಲಿನ ಬಂಡುಕೋರರ ಚಟುವಟಿಕೆಗಳು ಪ್ರಾದೇಶಿಕ ಯುದ್ಧದ ಅಪಾಯವನ್ನು ಹೆಚ್ಚಿಸಿವೆ. ಸೋಮಾಲಿಯಾ, ಇಥಿಯೋಪಿಯಾ ಮತ್ತು ಮೊಜಾಂಬಿಕ್‌ನ ಹಿಂಸಾಚಾರ ಮಾನವೀಯ ನೆರವಿನ ಅಗತ್ಯವನ್ನು ತೀವ್ರಗೊಳಿಸಿದೆ.
ಏಷ್ಯಾ–ಪೆಸಿಫಿಕ್: ಉದ್ವಿಗ್ನತೆಯ ಹೊಸ ಕೇಂದ್ರಬಿಂದು
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಚಟುವಟಿಕೆಗಳು, ವಿಶೇಷವಾಗಿ ಫಿಲಿಪೈನ್ಸ್ ವಿರುದ್ಧ, ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಒಳಗೊಳ್ಳುವ ಸಂಘರ್ಷದ ಭೀತಿಯನ್ನು ಹೆಚ್ಚಿಸುತ್ತಿವೆ. ತೈವಾನ್ ಗೆ ಸಂಭದಿಸಿದಂತೆ ಚೀನಾ ಮತ್ತು ಜಪಾನ್ ಹಾಗೂ ಇತರ ದೇಶಗಳ ನಿರ್ಧಾರಗಳು ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಕಾಶ್ಮೀರದಲ್ಲಿ ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆದ ಹೀನ ಭಯೋತ್ಪಾದಕ ಕೃತ್ಯ, ಶಾಂತಿಯನ್ನು ಸಾರುವ ಭಾರತವೂ ಶಸ್ತ್ರವನ್ನು ಕೈಗೆ ತೆಗೆದುಕೊಳ್ಳಲೇಬೇಕಾದಂತ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ವಿಪರ್ಯಾಸ. ಥೈಲ್ಯಾಂಡ್ – ಕಾಂಬೋಡಿಯಾ ನಡುವೆ ಆಗಾಗ್ಗೆ ಆಗುತ್ತಿರುವ ತಿಕ್ಕಾಟ ಕೊನೆಗೊಂಡರೆ ಸಾಕು. ಮ್ಯಾನ್ಮಾರ್‌ನ ಗೃಹಯುದ್ಧ ಮತ್ತು ಅಫ್ಘಾನಿಸ್ತಾನದ ಅಸ್ಥಿರತೆ ಮುಂದುವರಿಯುತ್ತಿವೆ.
ವಿಶ್ವಸಂಸ್ಥೆಯ ಕನಸಿನಿಂದ ಇಂದಿನ ವಾಸ್ತವತೆವರೆಗೆ
Klive Special Article ಎರಡು ಮಹಾಯುದ್ಧಗಳ ನಂತರ “ಮುಂದಿನ ಪೀಳಿಗೆಯನ್ನು ಯುದ್ಧದ ವಿಪತ್ತಿನಿಂದ ರಕ್ಷಿಸುವುದು” ಎಂಬ ಗುರಿಯೊಂದಿಗೆ ಸ್ಥಾಪಿತವಾದ ವಿಶ್ವಸಂಸ್ಥೆ, ಇಂದಿನ ಜಗತ್ತಿನ ಸಂಕೀರ್ಣ ಸಂಘರ್ಷಗಳನ್ನು ತಡೆಗಟ್ಟುವಲ್ಲಿ ವಿಫಲವಾಗುತ್ತಿದೆಯೋನೋ ಎಂಬ ದಿಟ್ಟ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಓಸ್ಲೋ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ೨೦೨೪ನೇ ವರ್ಷವು ವಿಶ್ವಸಂಸ್ಥೆ ಸ್ಥಾಪನೆಯ ನಂತರದ ಅತ್ಯಂತ ಹಿಂಸಾತ್ಮಕ ವರ್ಷ. ೩೬ ದೇಶಗಳಲ್ಲಿ ೬೧ ಯುದ್ಧಗಳು ದಾಖಲಾಗಿವೆ. ೨೦೨೫ ಮತ್ತು ೨೦೨೬ರ ಆರಂಭವೂ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದು ಆತಂಕಕಾರಿ.


ಯುದ್ಧದ ಕಾನೂನು: ಕಾಗದದಲ್ಲೇ ಉಳಿದ ನಿಯಮಗಳು
ಜಿನೀವಾ ಒಪ್ಪಂದಗಳು ನಾಗರೀಕರ ರಕ್ಷಣೆಯಿಂದ ಹಿಡಿದು, ಶಾಲೆ–ಆಸ್ಪತ್ರೆಗಳ ಮೇಲೆ ದಾಳಿ ಮಾಡಬಾರದೆಂಬ ನಿಯಮಗಳವರೆಗೆ ಅನೇಕ ನಿರ್ಬಂಧಗಳನ್ನು ವಿಧಿಸುತ್ತವೆ. ಆದರೆ ಗಾಜಾ, ಉಕ್ರೇನ್, ಸುಡಾನ್, ಸಿರಿಯಾ—ಎಲ್ಲೆಡೆ ಈ ನಿಯಮಗಳ ಉಲ್ಲಂಘನೆ ಸಾಮಾನ್ಯವಾಗಿದೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್‌ಗೆ ನೀಡಲಾದ ಮೇಲ್ವಿಚಾರಣಾ ಜವಾಬ್ದಾರಿ ನೆಲಮಟ್ಟದಲ್ಲಿ ಪರಿಣಾಮಕಾರಿಯಾಗದಿರುವುದು ಸ್ಪಷ್ಟ.

ಸುಧೀರ್ ಕೀಳಂಬಿ ಅವರು ಜಿನೀವಾದಲ್ಲಿನ ಭಾರತದ ಮಿಷನ್ ನಲ್ಲಿ ಭಾರತದ ರಾಜತಾಂತ್ರಿಕ ಪ್ರತಿನಿಧಿ.
(ಇದು ಲೇಖಕರ ವೈಯುಕ್ತಿಕ ಅಭಿಪ್ರಾಯವಾಗಿದ್ದು, ಭಾರತ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಭಿಸುವುದಿಲ್ಲ.)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...