Lions Club ಭದ್ರಾವತಿ ಜಿ.ಪಂ., ತಾ.ಪಂ., ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಭದ್ರಾವತಿಯ ಉಜ್ಜಯಿನಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಶಿಬಿರದಲ್ಲಿ ಭದ್ರಾವತಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದ ಸುಮಾರು 215 ಮಂದಿ ಜನರು ನೇತ್ರ ತಪಾಸಣೆಗೆ ಹಾಜರಾಗಿದ್ದು, ನೇತ್ರ ತಜ್ಞರ ತಂಡದಿಂದ ಸಮಗ್ರ ದೃಷ್ಟಿ ಪರೀಕ್ಷೆ ನಡೆಯಿತು. ತಪಾಸಣೆಯಲ್ಲಿ 58 ಮಂದಿ ರೋಗಿಗಳು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರಿಗೆ ಶೀಘ್ರದಲ್ಲೇ ಶಿವಮೊಗ್ಗ ಶಂಕರ ಐ ಕೇರ್ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ಜೊತೆಗೆ ದೃಷ್ಟಿದೋಷ ಹೊಂದಿದ್ದ 68 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದ್ದು, ಇದರಿಂದ ಅವರು ಉತ್ತಮ ದೃಷ್ಟಿ ಹೊಂದಲು ಸಹಾಯವಾಯಿತು. ಲಯನ್ ನಾಗರಾಜ ಶೆಟ್, ಲಯನ್ ದರ್ಶನ ಜಿ.ಪಿ. ಲಯನ್ ನಟರಾಜ್ ಬಿ. ಲಯನ್ ಕಾರ್ತಿಕ್ ಎ.ಎನ್. ಝೆನ್ ಅಧ್ಯಕ್ಷರು ಭಾಗವಹಿಸಿ ಶಿಬಿರದ ಕಾರ್ಯ ವೈಖರಿ ಮೆಚ್ಚಿದರು. ಅಧ್ಯಕ್ಷ ಲಯನ್ ನಾಗರಾಜ ಶೆಟ್ ಅವರು ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಲಯನ್ಸ್ ಕ್ಲಬ್ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿ ಮಾತನಾಡಿದರು.
ಲಯನ್ ಕಾರ್ತಿಕ್ ಎ.ಎನ್. ಝೆನ್ ಅಧ್ಯಕ್ಷರು ಅವರು ಉಚಿತ ನೇತ್ರ ಶಿಬಿರಗಳ ಮಹತ್ವ ತಿಳಿಸಿದರು. ಈ ವರ್ಷ ಲಯನ್ಸ್ ಜಿಲ್ಲೆ ೩೧೭ಅ ಯಲ್ಲಿ ೩೦೦೦ ಕ್ಕೂ ಹೆಚ್ಚು ಉಚಿತ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಘೋಷಿಸಿ ದರು. ಈ ಶಿಬಿರದ ಯಶಸ್ವಿ ಸಂಯೋ ಜನೆಯನ್ನು ಲಯನ್ ನಂದೀಶ್ ಎನ್.ಟಿ. (ಜಿಲ್ಲಾ ಸಂಯೋಜಕ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ, ಜಿಲ್ಲೆ ೩೧೭) ಅವರು ಶಿವಮೊಗ್ಗ ಆಪ್ಟಿಕಲ್ಸ್ ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಿದರು. ಲಯನ್ ನಂದೀಶ್ ಎನ್.ಟಿ. ಜಿಲ್ಲಾ ಸಂಯೋಜಕರು, ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಿಸಿದರು.
