Shimoga News ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಗುರುತಿಸಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಜಿಲ್ಲಾಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಅವರಿಗೆ ಕದಂಬ ಕಲಾರಾಧಕ ಪ್ರಶಸ್ತಿ ಲಭಿಸಿದೆ.
ಕದಂಬ ಕಲಾ ಸಾಂಸ್ಕೃತಿಕ ಪರಿಷತ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಉತ್ತರ ಕನ್ನಡ ಜಿಲ್ಲಾ ಸಹಭಾಗಿತ್ವದಲ್ಲಿ ಶಿರಸಿಯಲ್ಲಿ ಆಯೋಜಿಸಿದ್ದ ಕಾವೆಂಶ್ರೀ ಕಾವ್ಯಯಾನ ಭಾವಗಾನ 1, ಶತಕಂಠ ಗಾಯನ ಮತ್ತು ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕದಂಬ ಕಲಾರಾಧಕ 2025 ರಾಜ್ಯಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Shimoga News ಕದಂಬ ರತ್ನಾಕರರ ಹೊನ್ನುಡಿ ಕವನ ಸಂಕಲನ ಬಿಡುಗಡೆಯಾಯಿತು. ಕದಂಬ ಕಲಾರಾಧಕ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕದಂಬ ರತ್ನಾಕರ, ಬಿ.ಎನ್.ವಾಸರೆ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಶಾಂತಾ ಶೆಟ್ಟಿ ಅವರ ಸಾಂಸ್ಕೃತಿಕ ಸೇವೆಯನ್ನ ಪರಿಗಣಿಸಿ ಕದಂಬ ಕಲಾರಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ಡಾ. ಕಾವೆಂಶ್ರೀ ಗೀತೆಗಳು ಶತಕಂಠದನಿಯಲ್ಲಿ ಝೇಂಕರಿಸಿತು. ಬೇರೆ ಬೇರೆ ಜಿಲ್ಲೆಯಿಂದ ಬಂದಿದ್ದ ಗಾಯಕರು ಹಾಡಿ ಮೋಡಿ ಮಾಡಿದರು. ವೇದಿಕೆಯಲ್ಲಿ ಶಿಕ್ಷಣ ತಜ್ಞ ಕೆ.ಎನ್.ಹೊಸ್ಮನಿ, ಡಾ. ವೆಂಕಟೇಶ ನಾಯ್ಕ, ಭೀಮಾಶಂಕರ್ ಕುಲಕರ್ಣಿ, ದಿವ್ಯಾ ಶೇಟ್ ಕದಂಬ ಹಾಗೂ ಜ್ಯೋತಿ ರತ್ನಾಕರ ಮುಂತಾದವರಿದ್ದರು.
