Sunday, August 2, 2026
Sunday, August 2, 2026

Himalayan Rider ಹಿಮಾಲಯದತ್ತ ಬೈಕ್ ಪ್ರಯಾಣ ವಿಶೇಷ ಅನುಭವ ನೀಡಿದೆ- ನಿತಿನ್ ಯಾದವ್

Date:

Himalayan Rider ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಪ್ರದೇಶದವರೆಗೂ 2,200 ಕಿ.ಮೀ. ದೂರದ 18 ದಿನದ ಸಾಹಸ ಬೈಕ್‌ಯಾತ್ರೆಯನ್ನು ಶಿವಮೊಗ್ಗ ನಗರದ ರೋಟರಿ ರಿವರ್ ಸೈಡ್ ಶಿವಮೊಗ್ಗ ಕ್ಲಬ್ ಕಾರ್ಯದರ್ಶಿ, ಫೆಲೋಶಿಪ್ ಬೈಕ್ ರೈಡ್ ಅಧ್ಯಕ್ಷ ನಿತಿನ್ ಯಾದವ್ ಹಾಗೂ ಇನ್ನರ್‌ವ್ಹೀಲ್ ಸದಸ್ಯೆ ಅಂಬಿಕಾ ನಿತಿನ್ ಯಾದವ್ ಯಶಸ್ವಿಯಾಗಿ ಪೂರೈಸಿದ್ದಾರೆ.

2200 ಕಿ.ಮೀ. ದೀರ್ಘದ ಹಾದಿ ಲಡಾಕ್, ಕಾಶ್ಮೀರ ಹಾಗೂ ಜಗತ್ತಿನ ಅತ್ಯಂತ ಎತ್ತರದ ವಾಹನ ದಾರಿ “ಉಮ್ಲಿಂಗ್ ಲಾ ಪಾಸ್” (19,024 ಅಡಿ) ತಲುಪಿದೆ. ಈ ಮಾರ್ಗದಲ್ಲಿ ಮನಾಲಿ, ಬಾರ್ ಲಚ್ ಲಾ ಪಾಸ್, ಲೇಹ್, ನುಬ್ರಾ ವ್ಯಾಲಿ, ಪಾಂಗೊಂಗ್ ಲೇಕ್, ಹನ್ಲೆ ಅಟಲ್ ಟನಲ್, ರೋಟಂಗ್ ಪಾಸ್, ಕಾರ್ಗಿಲ್ ಯುದ್ಧ ಸ್ಮಾರಕ, ಪಹಲ್ಗಾಮ್, ಗುಲ್ಮಾರ್ಗ, ಶ್ರೀನಗರ ಎಂಬ ಹಿಮಾಲಯದ ಪ್ರೇರಣಾದಾಯಕ ನಿಲ್ದಾಣಗಳು ಸೇರಿವೆ.

Himalayan Rider ನಿತಿನ್ ಮತ್ತು ಅಂಬಿಕಾ ದಂಪತಿ ರೋಟರಿ ಕ್ಲಬ್ ಆಫ್ ಎಕೋ ಪ್ರಿಸರ್ವೇಶನ್ ಕಾಶ್ಮೀರ ಜತೆ ( ಆರ್‌ಐಡಿ 3070) ಜೊತೆ ನಡೆದ ಫ್ಲಾಗ್ ವಿನಿಮಯವು ಈ ಯಾತ್ರೆಯ ಮಹತ್ವ ಹೆಚ್ಚಿಸಿತು.

ರೋಟರಿ ರಿವರ್ ಸೈಡ್ ಶಿವಮೊಗ್ಗ ಕ್ಲಬ್ ಕಾರ್ಯದರ್ಶಿ ನಿತಿನ್ ಯಾದವ್ ಮಾತನಾಡಿ, ಹಿಮಾಲಯದ ಪ್ರಯಾಣ ವಿಶೇಷ ಅನುಭವ ನೀಡಿದ್ದು, ಪ್ರಯಾಣ ಅತ್ಯಂತ ಸಂತಸದಾಯಕವಾಗಿತ್ತು. ಈ ಸಾಹಸದಲ್ಲಿ ಪ್ರತಿಯೊಂದು ಕ್ಷಣವೂ ಬದುಕಿನ ಪಾಠವಾಗಿತ್ತು ಸಹನೆ, ಸಹಕಾರ, ಧೈರ್ಯ ಮತ್ತು ಬಾಂಧವ್ಯದ ಸಂಯೋಜನೆಯಾಗಿತ್ತು ಎಂದು ತಿಳಿಸಿದರು. ರೋಟರಿ ಕ್ಲಬ್ ಆಫ್ ಎಕೋ ಪ್ರಿಸರ್ವೇಶನ್ ಕಾಶ್ಮೀರದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...