Thursday, June 25, 2026
Thursday, June 25, 2026

Shri Kshethra Dharmasthala Rural Development Project  ಆರ್ಥಿಕ ಶಕ್ತಿಯಾಗುವ ಭರದಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನ ಮರೆಯಬಾರದು- ಡಾ.ಎಚ್.ಬಿ.ಮಂಜುನಾಥ್

Date:

Shri Kshethra Dharmasthala Rural Development Project  ನಮ್ಮ ದೇಶವು ಅನಾದಿಕಾಲದಿಂದಲೂ ಜ್ಞಾನಾಧಾರಿತ ಸುಸಂಸ್ಕೃತಿ ಸಂಸ್ಕಾರಗಳಿಗೆ ವಿಶ್ವದಲ್ಲೇ ಮಾನ್ಯತೆ ಹೊಂದಿದ್ದು ಆರ್ಥಿಕ ಶಕ್ತಿಯಾಗುವ ಭರದಲ್ಲಿ ಇದನ್ನು ಅಲಕ್ಷಿಸಬಾರದು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ದಾವಣಗೆರೆ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಸಂಸ್ಕೃತಿ ಸಂಸ್ಕಾರ ಉಳಿಸುವಿಕೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ, ಕಷ್ಟ ಸಹಿಷ್ಣುತೆ, ಜವಾಬ್ದಾರಿಯ ನಿರ್ವಹಣೆ, ಪೂರ್ವಾಪರ ಆಲೋಚನೆ, ಸೂಕ್ಷ್ಮಗ್ರಹಣ ಎಲ್ಲದರಲ್ಲೂ ಮಹಿಳೆಯರು ಪುರುಷರಿಗಿಂತ ಮುಂದೆ, ಆದ್ದರಿಂದಲೇ ನಮ್ಮ ವೇದೋಪನಿಷತ್ತು, ರಾಮಾಯಣ ಮಹಾಭಾರತ ಕಾಲಗಳಿಂದಲೂ ಮಹಿಳೆಯರಿಗೆ ಪ್ರಧಾನ್ಯತೆ ಇತ್ತು, ಭಾರತದ ಮೇಲೆ ಪರಕೀಯರ ಆಕ್ರಮಣ ಹಾಗೂ ದಬ್ಬಾಳಿಕೆಯ ಆಡಳಿತ ಬಂದ ಮೇಲೆ ಸ್ತ್ರೀಯರ ಶೋಷಣೆ ಹೆಚ್ಚಾಯಿತು ಎಂದರಲ್ಲದೆ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡುವ ತಾಳ್ಮೆ ಹಾಗೂ ಜಾಣ್ಮೆ ಎರಡೂ ತಾಯಂದಿರಲ್ಲಿದೆ, ಇದನ್ನು ಮುಂದುವರಿಸಬೇಕು ಎಂದು ಕರೆಕೊಟ್ಟರು. Shri Kshethra Dharmasthala Rural Development Project  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಉಚಿತ ಕಾನೂನು ನೆರವು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ಮಹಾವೀರ ಕರೆವಣ್ಣನವರ್ ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಹಾ ಪ್ರಸನ್ನರಾಗಿರುತ್ತಾರೆ ಎಂಬ ಸನಾತನ ನುಡಿಗಟ್ಟನ್ನು ಉದಾಹರಿಸುತ್ತಾ ಮಹಿಳೆಯರ ಸಮಾನತೆಗೆ ನಮ್ಮ ಸಂವಿಧಾನವು ಕೊಟ್ಟಿರುವ ಪ್ರಾಶಸ್ತ್ಯವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರು ಸಮಾಜ ಸೇವಕರು ಆದ ಶ್ರೀಮತಿ ಅನಿತಾ ಹಾಗೂ ಡಾ. ಉಪೇಂದ್ರ ಮಾತನಾಡಿದರು. ಗ್ರಾಮ ಅಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ ಸಹ ಮುಖ್ಯ ಅತಿಥಿಗಳಾಗಿ ಯೋಜನೆಯಲ್ಲಿ ಮಹಿಳೆಯರಿಗಿರುವ ಅವಕಾಶಗಳ ಬಗ್ಗೆ ವಿವರಿಸಿದರು. ಮಹಾನಗರ ಪಾಲಿಕಾ ಸದಸ್ಯೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಎಂ ಜಗದೀಶ ಅಧ್ಯಕ್ಷೀಯ ನುಡಿಗಳನ್ಡಿನಾಡಿದರು. ಪ್ರಾದೇಶಿಕ ಯೋಜನಾಧಿಕಾರಿ ರತ್ನಾ ಮೈಪಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಯೋಜನಾಧಿಕಾರಿ ಶ್ರೀಮತಿ ಯಶೋದಾ ಸ್ವಾಗತ ಕೋರಿದರು. ವಂದನೆಗಳನ್ನು ಜ್ಞಾನವಿಕಾಸದ ಸಮನ್ವಯಾಧಿಕಾರಿ ಪ್ರತಿಭಾ ಅರ್ಪಿಸಿದರು. ವೀರೇಶ್ ಉಪಸ್ಥಿತರಿದ್ದು ಕಾರ್ಯಕ್ರಮದ ನಿರೂಪಣೆಯನ್ನು ಕೊಟ್ರೇಶ್ ಮಾಡಿದರು.ಪ್ರಾರ್ಥನೆಯನ್ನು ಸುಧಾ ಮಂಜುಳಾದೇವಿ ಶಾಂತಾ ಹಾಡಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಪ್ರಮಾಣ ಪತ್ರಗಳ ವಿತರಣೆಯ ನಂತರ ಯೋಜನೆಯ ಸದಸ್ಯಿಣಿಯರಿಂದ ಆಕರ್ಷಕ ನೃತ್ಯರೂಪಕಗಳು ಪ್ರಸ್ತುತಪಡಿಸಲ್ಪಟ್ಟವು. ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kodachadri Chits Pvt. Ltd ಗ್ರಾಹಕರೇ ಕೊಡಚಾದ್ರಿಚಿಟ್ಸ್ ನ ಹಿಂದಿರುವ ಶಕ್ತಿ- ಪರಶುರಾಮ್

Kodachadri Chits Pvt. Ltd ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ...

Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ

Rotary Club Shivamogga "ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ...

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...