Bagar Hukum ಸಂವಿಧಾನದ ಬಗ್ಗೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಬಗ್ಗೆ ರಾಜ್ಯ ಸರ್ಕಾರಕ್ಕೆ ಬಗರ್‌ಹುಕುಂ ಜಮೀನು, ಅರಣ್ಯ ವ್ಯಾಪ್ತಿಯ ಜಮೀನ ಸಾಗುವಳಿದಾರರ ಬಗ್ಗೆ ತಿಳುವಳಿಕೆ ನೀಡಲು ಶ್ರೀ ಕಾಗೋಡು ತಿಮ್ಮಪ್ಪ ರವರನ್ನು ರೈತರ ಹೋರಾಟದಲ್ಲಿ ಭಾಗವಹಿಸಲು ಮನವಿ ಮಾಡಲು ಆಗಸ್ಟ್-15 ರಂದು ಕಾಗೋಡು ತಿಮ್ಮಪ್ಪನವರನ್ನು ಅವರ ಮನೆಯಲ್ಲಿ ಕಂಡು ಸನ್ಮಾನಿಸಲಾಗುವುದು ಮತ್ತು ಹೋರಾಟಕ್ಕೆ ಮನವಿ ಮಾಡಲಾಗುವುದು ಎಂದು ಭದ್ರಾವತಿಯ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ ಎನ್ ರಾಜು ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟ ಸಮಿತಿಯು ಅವರನ್ನು ಗೌರವದಿಂದ ಸನ್ಮಾನಿಸಿ ರೈತರ ಹೋರಾಟಕ್ಕೆ ಆಹ್ವಾನಿಲಸಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡಲು ರಾಜ್ಯದಲ್ಲಿ ಗಂಡೆದೆಯ ರಾಜಕಾರಣಿ ಕಾಗೋಡು ಮಾತ್ರ ಆಗಿದ್ದಾರೆ ಎಂದರು.
Bagar Hukum ಜಿಲ್ಲೆಯಲ್ಲಿ ಬಗರ್‌ಹುಕ್ಕುಂ ರೈತರ ಮತ್ತು ಅರಣ್ಯ ವ್ಯಾಪ್ತಿ ರೈತರ ಪರವಾಗಿ ಅಂದಿನ ಮಾಜಿ ನಾಯಕರಾದ ಎಸ್ ಬಂಗಾರಪ್ಪ, ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಯಡಿಯೂರಪ್ಪ ಹೋರಾಡಿದರು. ಇಂದಿನ ಜಿಲ್ಲಾ ಉಸ್ತುವಾಲಿ ಸಚಿವ ಎಸ್ ಮಧು ಬಂಗಾರಪ್ಪ ಪದೇ ಪದೇ ಪಾದಯಾತ್ರೆಗಳನ್ನು ಮಾಡುತ್ತ ಅಧಿಕಾರವನ್ನು ಪಡೆದುಕೊಳ್ಳುತ್ತ ಬಂದಿದ್ದಾರೆ. ಆದರೆ ಅರಣ್ಯ ಸಚಿವರಿಗೆ ಮತ್ತು ಕಂದಾಯ ಸಚಿವರಿಗೆ ಶಿವಮೊಗ್ಗ ಜಿಲ್ಲೆಯ ಸಾಗುವಳಿದಾರರ ಸಮಸ್ಯೆಗಳ ಬಗ್ಗೆ ವಿಚಾರ ತಿಳಿಸುವಲ್ಲಿ ಅವರು ಮತ್ತು ಸಂಸದ ರಾಘವೇಂದ್ರ ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಆರೋಪಿಸಿದರು.
Bagar Hukum ಬಗರ್ ಹುಕುಂ ಪರ ಚಳವಳಿಯಲ್ಲಿ ಹಿರಿಯ ಕಾಗೋಡು ಅವರಿಗೆ ಭಾಗವಹಿಸುವಂತೆ ಹೋರಾಟಗಾರರ ಮನವಿ
Date:
